ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ 
ಕ್ರಿಕೆಟ್

ವಿಶ್ವಕಪ್ ಫೈನಲ್: ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಈ ಆಟಗಾರ ದೊಡ್ಡ ಬೆದರಿಕೆಯಂತೆ!

ನಾಳಿನ ಭಾರತ- ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಲು ಇಡೀ ಜಗತ್ತೇ ಜಾತಕ ಪಕ್ಷಿಯಂತೆ ಕಾಯುತ್ತಿದೆ.

ಅಹಮಾದಾಬಾದ್: ನಾಳಿನ ಭಾರತ- ಆಸ್ಟ್ರೇಲಿಯಾ ನಡುವಣ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನು ವೀಕ್ಷಿಸಲು  ಇಡೀ ಜಗತ್ತೇ ಜಾತಕ ಪಕ್ಷಿಯಂತೆ ಕಾಯುತ್ತಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮದಗಜಗಳ ನಡುವಿನ ಹೋರಾಟ ತೀವ್ರ ಕುತೂಹಲ ಕೆರಳಿಸಿದ್ದು, ಉಭಯ ದೇಶಗಳ ಆಟಗಾರರು ಪ್ರಶಸ್ತಿ ಗೆಲ್ಲಲು ಭಾರಿ ಕಸರತ್ತು ನಡೆಸುತ್ತಿದ್ದಾರೆ. ಉಭಯ ದೇಶಗಳ ಜನರು ತಮ್ಮ ದೇಶ ಪ್ರಶಸ್ತಿ ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ.

ಈ ಮಧ್ಯೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ನೀಡಿರುವ ಹೇಳಿಕೆ ಆಸಕ್ತಿದಾಯಕವಾಗಿದೆ. ಆಸ್ಟ್ರೇಲಿಯಾ ತಂಡಕ್ಕೆ ಯಾವ ಭಾರತೀಯ ಆಟಗಾರ ಸವಾಲು ಎಂಬ ಪ್ರಶ್ನೆಗೆ ಉತ್ತರಿಸಿದ  ಪ್ಯಾಟ್ ಕಮ್ಮಿನ್ಸ್,  ಭಾರತ ಸಾಕಷ್ಟು ಸುಸ್ಥಿತಿಯಲ್ಲಿರುವ ತಂಡವಾಗಿದೆ. ಮೊಹಮ್ಮದ್ ಶಮಿಯೇ ನಮಗೆ ದೊಡ್ಡ ಬೆದರಿಕೆ ಅಂತಾ ಹೇಳಿದ್ದಾರೆ.

ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಬೆಂಕಿಯಾಗಿದ್ದಾರೆ. ಈ ಬಾರಿಯ ವಿಶ್ವಕಪ್ ನಲ್ಲಿ ಕಠಿಣ ಪರಿಸ್ಥಿತಿಯಲ್ಲಿಯೂ ಹೆಚ್ಚಿನ ವಿಕೆಟ್ ಪಡೆಯುವ ಮೂಲಕ ಭಾರತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹಾಗಾಗಿ ಎದುರಾಳಿ ತಂಡದಲ್ಲಿ ಶಮಿ ನಡುಕ ಹುಟ್ಟಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'CEC ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ'; SIR ಕುರಿತು ನಮ್ಮ ಕಳವಳ ಪರಿಹರಿಸಿಲ್ಲ: ಅಭಿಷೇಕ್ ಬ್ಯಾನರ್ಜಿ

ಕೋಗಿಲು ಅಕ್ರಮ ನಿವಾಸಿಗಳ ಪೌರತ್ವ ಪರಿಶೀಲಿಸಿ, ಎನ್‌ಐಎ ತನಿಖೆಗೆ ವಹಿಸಿ: ಆರ್‌. ಅಶೋಕ ಆಗ್ರಹ; Video

ಕೋವಿಡ್ ಹಗರಣ: ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

ಕೋಗಿಲು ಲೇಔಟ್ ತೆರವು: ಬಿಜೆಪಿ 'ಸತ್ಯ ಶೋಧನಾ ಸಮಿತಿ' ರಚನೆ; 'ಮಿನಿ ಬಾಂಗ್ಲಾದೇಶ' ಕುರಿತು ವರದಿ!

ಕೊಯಮತ್ತೂರು: ತಮಿಳು ಮಾತನಾಡದ್ದಕ್ಕೆ ವಲಸೆ ಕಾರ್ಮಿಕನಿಗೆ ಚಾಕು ಇರಿತ; ಆರೋಪಿಗಳಿಗೆ ಹುಡುಕಾಟ

SCROLL FOR NEXT