ಬೆಟ್ಟಾ ಮೀನಿನ ಭವಿಷ್ಯ 
ಕ್ರಿಕೆಟ್

ICC Cricket World Cup 2023: ಭಾರತದ ಮುಡಿಗೆ 2023 ಐಸಿಸಿ ಕ್ರಿಕೆಟ್ ವಿಶ್ವಕಪ್: ಬೆಟ್ಟಾ ಮೀನಿನ ಭವಿಷ್ಯ!

ತೀವ್ರ ಕುತೂಹಲ ಕೆರಳಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ವಿಶ್ವಕಪ್ ಜಯಿಸಲಿದೆ ಎಂದು ಬೆಟ್ಟಾ ಮೀನು ಭವಿಷ್ಯ ನುಡಿದಿದೆ.

ಅಹ್ಮದಾಬಾದ್: ತೀವ್ರ ಕುತೂಹಲ ಕೆರಳಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆ ವಿಶ್ವಕಪ್ ಜಯಿಸಲಿದೆ ಎಂದು ಬೆಟ್ಟಾ ಮೀನು ಭವಿಷ್ಯ ನುಡಿದಿದೆ.

ಹೌದು.. ಆವಾಸ್ ಅಕ್ವಾಟಿಕ್ಸ್ (avasaquatics) ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತ ವಿಡಿಯೋವೊಂದು ಅಪ್ಲೋಡ್ ಆಗಿದ್ದು, ವಿಡಿಯೋದಲ್ಲಿ ಬೆಟ್ಟಾ ಎಂಬ ಮೀನು ನಾಳಿನ ವಿಶ್ವಕಪ್ ಫೈನಲ್ ಪಂದ್ಯದ ಭವಿಷ್ಯ ನುಡಿದಿದೆ ಎಂದು ಹೇಳಲಾಗಿದೆ. 

ಮೀನಿನ ಗಾಜಿನ ಅಕ್ವೇರಿಯಂನಲ್ಲಿ ಎರಡು ಬದಿಯಲ್ಲಿ ಎರಡು ಹುಳುಗಳನ್ನು ಬಿಟ್ಟು ಎರಡೂ ಬದಿಯಲ್ಲಿ ಭಾರತ ಆಸ್ಟ್ರೇಲಿಯಾ ಧ್ವಜಗಳನ್ನು ಇಟ್ಟು ಭವಿಷ್ಯ ಕೇಳಲಾಗಿದೆ. ಈ ವೇಳೆ ಮಧ್ಯದಲ್ಲಿ ಬಿಟ್ಟ ಬೆಟ್ಟಾ ಮೀನು ನೇರವಾಗಿ ಭಾರತ ಧ್ವಜವಿರುವ ಭಾಗದಲ್ಲಿನ ಹುಳುವನ್ನು ತಿಂದಿದೆ. ಇದು ನಾಳಿನ ಪಂದ್ಯದಲ್ಲಿ ಭಾರತವೇ ಜಯಭೇರಿ ಭಾರಿಸಲಿದೆ ಎಂದು ಸೂಚಿಸುತ್ತದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ನಿಜವಾಗಿತ್ತು ಸೆಮೀಸ್ ಭವಿಷ್ಯ
ಇನ್ನು ಈ ಹಿಂದೆ ಭಾರತ ಮತ್ತು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಮೀಸ್ ಕದನದ ಫಲಿತಾಂಶವನ್ನೂ ಈ ಬೆಟ್ಟಾ ಮೀನು ನಿಖರವಾಗಿ ಹೇಳಿತ್ತು ಎನ್ನಲಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯ ಭವಿಷ್ಯದ ವೇಳೆ ಪಂದ್ಯ ಸಮಬಲದ ಹೋರಾಟದಲ್ಲಿ ಸಾಗಿ ಅಂತಿಮವಾಗಿ ಭಾರತ ಗೆಲ್ಲುತ್ತದೆ ಎಂದು ಮೀನು ಹೇಳಿತ್ತಂತೆ. ಅಂತೆಯೇ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಮೀಸ್ ಕದನಕ್ಕೂ ಕೂಡ ಬೆಟ್ಟಾ ಮೀನು ಇದೇ ರೀತಿಯ ಭವಿಷ್ಯ ನುಡಿದಿತ್ತು. ತಮ್ಮ ಭವಿಷ್ಯ ಶೇ.90ರಷ್ಟು ನಿಖರವಾಗಿರುತ್ತದೆ ಎಂದು ಆವಾಸ್ ಅಕ್ವಾಟಿಕ್ಸ್ (avasaquatics) ಎಂಬ ಇನ್ ಸ್ಟಾಗ್ರಾಮ್ ಖಾತೆದಾರ ಹೇಳಿಕೊಂಡಿದ್ದಾರೆ.

ಅಂದಹಾಗೆ ಈ ಹಿಂದೆ ಫುಟ್ಬಾಲ್ ವಿಶ್ವಕಪ್ ಟೂರ್ನಿ ವೇಳೆಯಲ್ಲೂ ಇಂತಹುದೇ ಭವಿಷ್ಯಗಳು ಸಾಕಷ್ಟು ಸುದ್ದಿ ಮಾಡಿದ್ದವು. ಗಿಬ್ಬನ್ ಮತ್ತು ಟೈಯ್ಯೋ ಎಂಬ ಆಕ್ಟೋಪಸ್ ಗಳು ಫೀಫಾ ವಿಶ್ವಕಪ್ ಕುರಿತು ಭವಿಷ್ಯ ನುಡಿದಿದ್ದವು. ಒಟ್ಟಾರೆ ನಾಳಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದ್ದು, ಭಾರತ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT