ಕ್ರಿಕೆಟ್

ಕ್ರಿಕೆಟಿಗ ಶಿಖರ್ ಧವನ್ ವಿಚ್ಛೇದನಕ್ಕೆ ದೆಹಲಿ ಕೋರ್ಟ್ ಒಪ್ಪಿಗೆ

Vishwanath S

ನವದೆಹಲಿ: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ತಮ್ಮ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದಿದ್ದಾರೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್(ಕೌಟುಂಬಿಕ ನ್ಯಾಯಾಲಯ) ಬುಧವಾರ ಶಿಖರ್ ಮತ್ತು ಆಯೇಷಾ ವಿಚ್ಛೇದನವನ್ನು ಅನುಮೋದಿಸಿದೆ.

2012ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಇಬ್ಬರಿಗೂ ಜೋರಾವರ್ ಎಂಬ ಮಗನಿದ್ದಾನೆ. ಆಯೇಷಾ ಶಿಖರ್‌ಗಿಂತ 10 ವರ್ಷ ದೊಡ್ಡವಳು. ಇದು ಆಯೇಷಾಳ ಎರಡನೇ ವಿವಾಹವಾಗಿತ್ತು. ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಬೇರ್ಪಟ್ಟು ಬದುಕುವಂತೆ ಒತ್ತಾಯಿಸಿ ಶಿಖರ್‌ಗೆ ಪತ್ನಿ ಮಾನಸಿಕ ನೋವು ಉಂಟು ಮಾಡಿದ್ದಾಳೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಹೆಂಡತಿ ಹೇಳಿದ ಆರೋಪಗಳನ್ನು ವಿರೋಧಿಸಲಿಲ್ಲ ಅಥವಾ ತನ್ನನ್ನು ತಾನು ಸಮರ್ಥಿಸಿಕೊಳ್ಳುವಲ್ಲಿ ವಿಫಲಳಾಗಿದ್ದಾಳೆ ಎಂದು ಕೋರ್ಟ್ ಹೇಳಿದೆ. 

ಮಗನ ಖಾಯಂ ಕಸ್ಟಡಿಗೆ ಸಂಬಂಧಿಸಿದಂತೆ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಆದಾಗ್ಯೂ, 37 ವರ್ಷದ ಧವನ್‌ಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೊ ಕರೆ ಮೂಲಕ ಮಾತನಾಡಲು ನ್ಯಾಯಾಲಯವು ಹಕ್ಕನ್ನು ನೀಡಿದೆ. ಆಯೇಷಾ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು ಆಕೆ ಭಾರತ ಮತ್ತು ಆಸ್ಟ್ರೇಲಿಯಾ ಎರಡರ ಪೌರತ್ವವನ್ನು ಹೊಂದಿದ್ದಾರೆ.

SCROLL FOR NEXT