ಕೊಹ್ಲಿ-ನವೀನ್ ಉಲ್ ಹಕ್ 
ಕ್ರಿಕೆಟ್

ಪರಸ್ಪರ ಹಸ್ತಲಾಘವ, ಅಪ್ಪುಗೆ: ಐಪಿಎಲ್ ಗಲಾಟೆ ಮರೆತು ಒಂದಾದ ಕೊಹ್ಲಿ- ನವೀನ್ ಉಲ್ ಹಕ್!

ಐಪಿಎಲ್ ನಲ್ಲಿ ಶುರುವಾಗಿದ್ದ ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ಆಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಜಗಳ ಕೊನೆಗೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಂತ್ಯವಾಗಿದ್ದು ಇಬ್ಬರೂ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು ನಗು ಚೆಲ್ಲಿ ಮುನಿಸು ಮರೆತಿದ್ದಾರೆ.

ನವದೆಹಲಿ: ಐಪಿಎಲ್ ನಲ್ಲಿ ಶುರುವಾಗಿದ್ದ ಭಾರತ ತಂಡದ ವಿರಾಟ್ ಕೊಹ್ಲಿ ಮತ್ತು ಆಫ್ಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಜಗಳ ಕೊನೆಗೂ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಂತ್ಯವಾಗಿದ್ದು ಇಬ್ಬರೂ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡಿಕೊಂಡು ನಗು ಚೆಲ್ಲಿ ಮುನಿಸು ಮರೆತಿದ್ದಾರೆ.

ಬುಧವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಗಾನಿಸ್ತಾನದ ನಡುವಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಹಸ್ತಲಾಘವ ಮಾಡಿ, ತಬ್ಬಿಕೊಂಡು ದ್ವೇಷವನ್ನು ಮರೆತರು. ಪಂದ್ಯದ ಬಳಿಕ ಇಬ್ಬರೂ ಆಟಗಾರರು ಸ್ನೇಹದಿಂದ ವರ್ತಿಸುವುದು ಕಂಡುಬಂತು. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ ಬಳಿ ಬಂದ ನವೀನ್ ಉಲ್ ಹಕ್ ನಗುವಿನಿಂದಲೇ ಕೊಹ್ಲಿಯಲ್ಲಿ ಅಪ್ಪಿ ನಗುತ್ತಲೇ ಮಾತನಾಡಿಸಿದರು. ಈ ವೇಳೆ ಕೊಹ್ಲಿ ಕೂಡ ನಗುತ್ತಲೇ ಉತ್ತರಿಸಿದ್ದು ಮಾತ್ರವಲ್ಲದೇ ನವೀನ್ ರನ್ನು ಅಪ್ಪಿ ಪರಸ್ಪರ ಥಮ್ಸಪ್ ತೋರಿಸಿದರು. ಆ ಮೂಲಕ ಇಬ್ಬರ ಜಗಳ ಅಂತ್ಯವಾಗಿರುವುದನ್ನು ಜಗತ್ತಿಗೇ ತೋರಿಸಿದರು.

ಈ ವರ್ಷ ನಡೆದ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್‌ ಪಂದ್ಯದಲ್ಲಿ ಈ ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪಂದ್ಯದ ನಂತರವೂ ಇವರಿಬ್ಬರ ಮುನಿಸು ಪ್ರದರ್ಶನವಾಗಿತ್ತು. ಕೊನೆಗೆ ಲಖನೌ ನಾಯಕ ಕೆ.ಎಲ್‌ ರಾಹುಲ್ ಹಾಗೂ ಮೆಂಟರ್‌ ಗೌತಮ್‌ ಗಂಭೀರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಬಳಿಕ ಗಂಭೀರ್‌ ಕೂಡ ಕೋಪಗೊಂಡಿದ್ದರು. ಇದು ಮೈದಾನದಲ್ಲೇ ಅಟಗಾರರ ಜಗಳ ಪರಸ್ಪರ ತಾರಕಕ್ಕೇರಿದ್ದ ಕಹಿ ಘಟನೆಯಾಗಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಕೊಹ್ಲಿ ಮತ್ತು ಟೀಂ ಇಂಡಿಯಾ ಅಭಿಮಾನಿಗಳು ನವೀನ್ ಉಲ್ ಹಕ್ ಎಲ್ಲಿಗೆ ಹೋದರೆ ಅಲ್ಲಿ.. ಭಾರತದ ಯಾವುದೇ ಮೈದಾನದಲ್ಲಿ ಆಡಿದರು ಕೊಹ್ಲಿ ಕೊಹ್ಲಿ ಎಂದು ಕೂಗಿ ಅವರನ್ನು ಗೇಲಿ ಮಾಡುತ್ತಿದ್ದರು. ಬುಧವಾರದ ಪಂದ್ಯದಲ್ಲೂ ಕೂಡ ನವೀನ್‌ ಉಲ್‌ ಹಕ್ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಮಾಡಲು ಬಂದಾಗ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ‘ಕೊಹ್ಲಿ, ಕೊಹ್ಲಿ’ ಎಂದು ಕೂಗುತ್ತಿದ್ದರು. ಆದರೆ ಇದೇ ಪಂದ್ಯದಲ್ಲಿ ಇಬ್ಬರೂ ಆಟಗಾರರು ಪರಸ್ಪರ ಒಂದಾಗುವ ಮೂಲಕ ತಮ್ಮ ನಡುವೆ ಯಾವುದೇ ಮುನಿಸಿಲ್ಲ ಎಂದು ತೋರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಫ್ಘನ್ ವೇಗಿ ನವೀನ್ ಉಲ್ ಹಕ್, ‘ಅದು ಮೈದಾನದಲ್ಲಿ ನಡೆದ ಘಟನೆ. ಮೈದಾನದ ಹೊರಗೆ ಏನೂ ಇಲ್ಲ. ಜನ ಅದನ್ನು ದೊಡ್ಡದು ಮಾಡುತ್ತಾರೆ. ಅವರ ಬೆಂಬಲಿಗರಿಗೆ ಏನಾದರೂ ಬೇಕು. ನಾವು ಅದನ್ನು ಕೊನೆಗೊಳಿಸಿದ್ದೇವೆ. ನಾವು ಹಸ್ತಲಾಘವ ಮಾಡಿ, ತಬ್ಬಿಕೊಂಡಿದ್ದೇವೆ’ ಎಂದು ನವೀನ್ ಹೇಳಿದ್ದಾರೆ.

ಅಂತೆಯೇ ‘ತವರು ಮೈದಾನದಲ್ಲಿ ಆಟಗಾರರ ಹೆಸರನ್ನು ಪ್ರೇಕ್ಷಕರು ಕೂಗಿದ್ದಾರೆ. ಇದು ಕೊಹ್ಲಿಯ ತವರು ಅಂಗಳ. ಅವರು ಒಳ್ಳೆಯ ಮನುಷ್ಯ. ಉತ್ತಮ ಆಟಗಾರ’ ಎಂದು ನವೀನ್‌ ಪ್ರಶಂಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT