ಕ್ರಿಕೆಟ್

ಐಸಿಸಿ ವಿಶ್ವಕಪ್ 2023: ಇಂದು ಏಷ್ಯಾದ ಪ್ರಬಲ ತಂಡಗಳಾದ ಭಾರತ- ಬಾಂಗ್ಲಾದೇಶ ಮುಖಾಮುಖಿ

Nagaraja AB

ಪುಣೆ: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಸಿಸಿ ವಿಶ್ವಕಪ್ 17 ನೇ ಪಂದ್ಯದಲ್ಲಿ ಏಷ್ಯಾದ ಎರಡು ಪ್ರಬಲ ತಂಡಗಳಾದ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಆಸ್ಟ್ರೇಲಿಯಾ, ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿ ಮುನ್ನುಗುತ್ತಿರುವ ಭಾರತ ತಂಡ, ಇಂದಿನ ಪಂದ್ಯವನ್ನು ಗೆದ್ದು ಮತ್ತಷ್ಟು ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ತವಕದಲ್ಲಿದೆ. 

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಒಟ್ಟು 40 ಪಂದ್ಯಗಳಲ್ಲಿ 31 ಗೆಲುವಿನೊಂದಿಗೆ ಭಾರತ ಪ್ರಾಬಲ್ಯ ಸಾಧಿಸಿದ್ದರೆ ಮತ್ತೊಂದೆಡೆ ಬಾಂಗ್ಲಾದೇಶ 8 ಪಂದ್ಯಗಳನ್ನು ಗೆದ್ದಿದೆ.  ಭಾರತ ಗೆದ್ದಿರುವ  31 ಗೆಲುವುಗಳಲ್ಲಿ ಮೂರು ಸ್ವದೇಶ ಮತ್ತು 18 ವಿದೇಶದಲ್ಲಿ ಆಡಿರುವ ಪಂದ್ಯಗಳಾಗಿವೆ.

ಈ ಮಧ್ಯೆ ಬಾಂಗ್ಲಾದೇಶ ತನ್ನ ತವರು ನೆಲದಲ್ಲಿ ಆರು ಪಂದ್ಯಗಳನ್ನು ಗೆದ್ದಿದ್ದರೆ ವಿದೇಶದಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಏಷ್ಯಾ ಕಪ್ 2023 ರ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಕೊನೆಯ ಬಾರಿ ಬಾಂಗ್ಲಾದೇಶವನ್ನು ಎದುರಿಸಿತ್ತು. ಇದರಲ್ಲಿ ಭಾರತ ಆರು ರನ್‌ಗಳಿಂದ ಸೋತಿತು. 

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್

ಬಾಂಗ್ಲಾದೇಶ ತಂಡ ಇಂತಿದೆ: ಶಕೀಬ್ ಅಲ್ ಹಸನ್, ಲಿಟ್ಟನ್ ಕುಮರ್ ದಾಸ್, ತಂಝೀದ್ ಹಸನ್ ತಮೀಮ್, ನಜ್ಮುಲ್ ಹೊಸೈನ್ ಶಾಂಟೊ (ವಿಸಿ), ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ ರಿಯಾದ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಶಾಕ್ ಮಹೇದಿ ಎ ಹಸನ್ , ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ, ತಂಝಿಮ್ ಹಸನ್ ಸಾಕಿಬ್.

SCROLL FOR NEXT