ಕ್ರಿಕೆಟ್

ವಿಶ್ವಕಪ್: ಬಾಂಗ್ಲಾ ವಿರುದ್ಧದ ಹಣಾಹಣಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಗಾಯ

Lingaraj Badiger

ಪುಣೆ: ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಗುರುವಾರ ಗಾಯಗೊಂಡಿದ್ದು, ಮೈದಾನದಿಂದ ಹೊರಗುಳಿದಿದ್ದಾರೆ.

ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಓವರ್ ಬೌಲಿಂಗ್ ವೇಳೆ ಪಾದ ತಿರುಚಿದ್ದು, ಮೈದಾನದಿಂದ ಹೊರ ನಡೆದಿದ್ದಾರೆ.

ಒಂಬತ್ತನೇ ಓವರ್‌ನ ಮೂರನೇ ಎಸೆತವನ್ನು ಎದುರಿಸಿದ ಲಿಟನ್ ದಾಸ್​ ಸ್ಟ್ರೇಟ್ ಹಿಟ್ ಮಾಡಿದರು. ಈ ವೇಳೆ ಹಾರ್ದಿಕ್ ಪಾಂಡ್ಯ ತಮ್ಮ ಬಲಗಾಲಿನಿಂದ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ, ಆ ಪ್ರಕ್ರಿಯೆಯಲ್ಲಿ ಜಾರಿಬಿದ್ದು, ನೋವಿನಿಂದ ನರಳಲಾರಂಭಿಸಿದರು. ಕೂಡಲೇ ಮೈದಾನಕ್ಕೆ ಆಗಮಿಸಿದ ತಂಡದ ಪಿಸಿಯೋ, ಪಾಂಡ್ಯಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.

ಬಹಳ ಹೊತ್ತು ಮೈದಾನದಲ್ಲಿಯೇ ಮಲಗಿ ನರಳುತ್ತಿದ್ದ ಪಾಂಡ್ಯ ಆ ಬಳಿಕ ಎದ್ದು ಮತ್ತೆ ಬೌಲ್ ಮಾಡಲು ಪ್ರಯತ್ನಿಸಿದರು. ಆದರೆ ಕುಂಟುತ್ತಾ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಪಿಸಿಯೋ ಮೈದಾನದಿಂದ ಹೊರಗೆ ಕರೆದೊಯ್ದರು.

ನಂತರ ಬಾಂಗ್ಲಾದೇಶ ವಿರುದ್ಧ ಉಳಿದ ಇನ್ನಿಂಗ್ಸ್‌ಗೆ ಪಾಂಡ್ಯ ಆಡುವುದಿಲ್ಲ ಎಂದು ಪ್ರಸಾರದ ವೇಳೆ ಮಾಜಿ ಇಂಗ್ಲೆಂಡ್ ನಾಯಕ ನಾಸರ್ ಹುಸೇನ್ ಅವರು ಖಚಿತಪಡಿಸಿದ್ದಾರೆ.

SCROLL FOR NEXT