ಕ್ರಿಕೆಟ್

ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 100 ರನ್ ಜಯ; ಅಂಕಪಟ್ಟಿಯಲ್ಲಿ ನಂ.1; ಸೆಮಿಫೈನಲ್ಸ್ ಪ್ರವೇಶಿಸಿದ ಮೊದಲ ತಂಡ

Srinivas Rao BV

ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಭಾರತ 100 ರನ್ ಗಳ ಜಯ ಗಳಿಸಿದ್ದು ಇದು ತಂಡದ 6 ನೇ ಗೆಲುವಾಗಿದೆ. 

ಲಖನೌದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬೌಲರ್ ಗಳ ಎದುರು ಇಂಗ್ಲೆಂಡ್ ತಂಡ ಮಂಡಿಯೂರಿತು. 230 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 129 ಕ್ಕೆ ಸರ್ವಪತನ ಕಂಡಿತು. ಇದಕ್ಕೂ ಮುನ್ನ, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 229ರನ್ ಗಳಿಸಿದ್ದು, ಇಂಗ್ಲೆಂಡ್ ಗೆಲ್ಲಲು 230ರನ್ ಗಳ ಸಾಧಾರಣ ಗುರಿ ನೀಡಿತ್ತು

ವಿಶ್ವಕಪ್ ಟೂರ್ನಿಯಲ್ಲಿ ಈ ಗೆಲುವಿನ ಮೂಲಕ ಭಾರತ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದ್ದು, ಸೆಮಿಫೈನಲ್ಸ್ ಪ್ರವೇಶಿಸಿದ ಮೊದಲ ತಂಡವಾಗಿದೆ.  

ಭಾರತದ ನಂತರದ ಸ್ಥಾನದಲ್ಲಿ 10 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ಇದ್ದರೆ, ಅಂಕಪಟ್ಟಿಯಲ್ಲಿ 8 ಅಂಕಗಳನ್ನು ಪಡೆದಿರುವ ನ್ಯೂಜಿಲ್ಯಾಂಡ್ ಮೂರನೇ ಸ್ಥಾನದಲ್ಲಿದೆ. 4,5,6 ರಲ್ಲಿ ಅನುಕ್ರಮವಾಗಿ ಆಸ್ಟ್ರೇಲಿಯಾ, ಶ್ರೀಲಂಕಾ, ಪಾಕಿಸ್ತಾನ ಇದ್ದು, ಈ ಸೋಲಿನೊಂದಿಗೆ ಇಂಗ್ಲೆಂಡ್ 10 ನೇ ಸ್ಥಾನಕ್ಕೆ ಕುಸಿದಿದೆ.

SCROLL FOR NEXT