ಕ್ರಿಕೆಟ್

ಮೊದಲ ಏಕದಿನ: ಭಾರತಕ್ಕೆ ಗೆಲ್ಲಲು 277 ರನ್ ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ

Srinivasamurthy VN

ಮೊಹಾಲಿ: ಏಷ್ಯಾಕಪ್ ಯಶಸ್ಸಿನ ಬೆನ್ನಲ್ಲೇ ತವರಿನಲ್ಲಿ ಆರಂಭವಾಗಿರುವ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ 277ರನ್ ಗಳ ಸವಾಲಿನ ಗುರಿಯನ್ನು ಬೆನ್ನು  ಹತ್ತಬೇಕಿದೆ.

ಇಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ನಿಗದಿತ 50 ಓವರ್ ಗಳಲ್ಲಿ 270 ರನ್ ಗಳಿಗೆ ಕಟ್ಟಿಹಾಕಿತು. ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಆಸ್ಚ್ರೇಲಿಯಾ ತಂಡ ಭಾರತ ತಂಡದ ವಿರುದ್ಧ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಯಿತು. 

ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 52ರನ್ ಗಳಿಸಿದರೆ, ಸ್ಮಿತ್ 41, ಲಾಬುಸ್ಚಾಗ್ನೆ 39, ಇಗ್ಲಿಸ್ 45 ರನ್ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಮಹಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರೆ, ಬುಮ್ರಾ, ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ತಲಾ 1 ವಿಕೆಟ್ ಪಡೆದರು. 

ಅಂತಿಮವಾಗಿ ಆಸ್ಟ್ರೇಲಿಯಾ ತಂಡ ನಿಗಧಿತ 50 ಓವರ್ ಗಳಲ್ಲಿ 270 ರನ್ ಕಲೆಹಾಕಿ ಆಲೌಟ್ ಆಗಿ ಭಾರತಕ್ಕೆ ಗೆಲಲ್ಲು 277 ರನ್ ಗಳ ಸವಾಲಿನ ಗುರಿ ನೀಡಿದೆ.
 

SCROLL FOR NEXT