ಆಸ್ಟ್ರೇಲಿಯಾಗೆ 66 ರನ್ ಗಳ ಜಯ 
ಕ್ರಿಕೆಟ್

3 ನೇ ಏಕ ದಿನ ಪಂದ್ಯ: ಆಸ್ಟ್ರೇಲಿಯಾಗೆ 66 ರನ್ ಗಳ ಜಯ, ಭಾರತಕ್ಕೆ ಸರಣಿ 

ರಾಜ್ ಕೋಟ್ ನಲ್ಲಿ ನಡೆದ ಆಸ್ಟ್ರೆಲಿಯ- ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 66 ರನ್ ಗಳ ಜಯ ಗಳಿಸಿದೆ.

ರಾಜ್ ಕೋಟ್: ರಾಜ್ ಕೋಟ್ ನಲ್ಲಿ ನಡೆದ ಆಸ್ಟ್ರೆಲಿಯ- ಭಾರತದ ನಡುವಿನ 3 ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ 66 ರನ್ ಗಳ ಜಯ ಗಳಿಸಿದೆ.

ಆದರೆ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ. ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಭಾರತಕ್ಕೆ 352 ರನ್ ಕಲೆ ಹಾಕಿತ್ತು. ಆಸ್ಟ್ರೇಲಿಯಾ ನೀಡಿದ ಗುರಿ ಬೆನ್ನಟ್ಟಿದ ಭಾರತಕ್ಕೆ 49.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 286 ರನ್ ಗಳನ್ನು ಗಳಿಸಲು ಮಾತ್ರ ಸಾಧ್ಯವಾಯಿತು.

ಭಾರತದ ಪರ ರೋಹಿತ್ ಶರ್ಮಾ 57 ಎಸೆತಗಳಲ್ಲಿ 81 ರನ್ ಗಳಿಸಿದರಾದರೂ ಏಕಾಂಗಿ ಹೋರಾಟವಾಯಿತು.  ವಿರಾಟ್ ಕೊಹ್ಲಿ (61 ಎಸೆತಗಳಲ್ಲಿ 56 ರನ್) ಹಾಗೂ ಶ್ರೇಯಸ್ ಅಯ್ಯರ್ (43 ಎಸೆತಗಳಲ್ಲಿ 48 ರನ್) ಗಳಿಸಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದ್ದರು. ಆದರೆ ಮ್ಯಾಕ್ಸ್ ವೆಲ್ ಈ ಜೊತೆಯಾಟವನ್ನು ಮುರಿದ ಪರಿಣಾಮ ಭಾರತದ ಗೆಲುವಿನ ಆಸೆ ಕಮರಿತು. 

ನಂತರ ಬಂದ ಬ್ಯಾಟ್ಸ್ಮನ್ ಗಳು ಆಸ್ಟ್ರೇಲಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೇ ಅಂತಿಮವಾಗಿ ಭಾರತ 286 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!