ಕೋಲ್ಕತ್ತಾ ತಂಡ
ಕೋಲ್ಕತ್ತಾ ತಂಡ 
ಕ್ರಿಕೆಟ್

IPL 2024: ಮೊದಲ ಬಾರಿಗೆ ಲಕ್ನೋ ಮಣಿಸಿದ KKR, ಸಾಲ್ಟ್ 89 ರನ್ ಭರ್ಜರಿ ಬ್ಯಾಟಿಂಗ್!

Vishwanath S

ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL) ನ 28 ನೇ ಪಂದ್ಯದಲ್ಲಿ ಕೆಕೆಆರ್ ತಂಡ ಲಖನೌ ವಿರುದ್ಧ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ.

ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲಿ 162 ರನ್‌ಗಳ ಗುರಿ ಬೆನ್ನತ್ತಿದ ಕೆಕೆಆರ್ 15.4 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿದೆ. ಇದು ಲಕ್ನೋ ವಿರುದ್ಧ ಕೆಕೆಆರ್‌ಗೆ ಮೊದಲ ಜಯವಾಗಿದೆ.

ಈ ಗೆಲುವಿನಲ್ಲಿ ಫಿಲ್ ಸಾಲ್ಟ್ ಅವರ 89 ರನ್‌ಗಳ ಇನ್ನಿಂಗ್ಸ್ ಪ್ರಮುಖ ಕೊಡುಗೆ ನೀಡಿದೆ. ಸಾಲ್ಟ್ 47 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ತಂಡ ಗೆಲುವಿನ ನಗೆ ಬೀರಿದೆ. ಇನ್ನು ನಾಯಕ ಶ್ರೇಯಸ್ ಅಯ್ಯರ್ 38 ರನ್ ಗಳಿಸಿ ಇನ್ನಿಂಗ್ಸ್ ಆಡಿದರು.

ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 161 ರನ್ ಪೇರಿಸಿತು. ಲಕ್ನೋ ಪರ ನಿಕೋಲಸ್ ಪುರನ್ ಗರಿಷ್ಠ 45 ರನ್ ಗಳಿಸಿದರು. ಪುರನ್ ಹೊರತುಪಡಿಸಿ ನಾಯಕ ಕೆಎಲ್ ರಾಹುಲ್ 27 ಎಸೆತಗಳಲ್ಲಿ 39 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಇವರಿಬ್ಬರು ಬ್ಯಾಟ್ಸ್‌ಮನ್‌ಗಳ ಹೊರತಾಗಿ ಯಾವುದೇ ಆಟಗಾರ ಆಕರ್ಷಕ ಇನ್ನಿಂಗ್ಸ್‌ ಆಡಲಿಲ್ಲ.

ಕೋಲ್ಕತ್ತಾ ಪರ ಮಿಚೆಲ್ ಸ್ಟಾರ್ಕ್ ಉತ್ತಮವಾಗಿ ಬೌಲಿಂಗ್ ಮಾಡಿದ್ದು 4 ಓವರ್‌ಗಳಲ್ಲಿ 28 ರನ್‌ ನೀಡಿ 3 ವಿಕೆಟ್‌ ಪಡೆದರು. ಸ್ಟಾರ್ಕ್ ಹೊರತುಪಡಿಸಿ, ರಸೆಲ್, ಚಕ್ರವರ್ತಿ, ನರೈನ್ ಮತ್ತು ವೈಭವ್ ಅರೋರಾ ತಲಾ 1 ವಿಕೆಟ್ ಪಡೆದರು.

SCROLL FOR NEXT