ಮಹೇಶ್ ಭೂಪತಿ
ಮಹೇಶ್ ಭೂಪತಿ 
ಕ್ರಿಕೆಟ್

IPL 2024: ಆರ್‌ಸಿಬಿಗೆ ಸತತ ಸೋಲು; ತಂಡದ ಮಾಲೀಕತ್ವ ಬದಲಿಸಲು ಮಹೇಶ್ ಭೂಪತಿ ಒತ್ತಾಯ

Ramyashree GN

ಬೆಂಗಳೂರು: ಸೋಮವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ಆವೃತ್ತಿಯ 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ವಿರೋಚಿತ ಸೋಲು ಕಂಡಿತು. ಈ ಮೂಲಕ ಈ ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಆರರಲ್ಲಿ ಸೋಲು ಕಂಡಿದೆ.

ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ 20 ಓವರ್‌ಗಳಲ್ಲಿ 287 ರನ್‌ಗಳನ್ನು ಬಿಟ್ಟುಕೊಟ್ಟಿತು. ಇದು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಆಗಿದೆ. 288 ರನ್ ಬೆನ್ನಟ್ಟಿದ ಆರ್‌ಸಿಬಿಯ ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ ಮತ್ತು ಡು ಪ್ಲೆಸಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, ಎಸ್‌ಆರ್‌ಎಚ್‌ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಆರ್‌ಸಿಬಿ 25 ರನ್‌ಗಳ ಸೋಲು ಕಂಡಿತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆರ್‌ಸಿಬಿಯ ಪ್ಲೇಆಫ್ ಕನಸು ಬಹುತೇಕ ಕಮರಿದಂತಾಗಿದೆ.

2008 ರಿಂದ ಐಪಿಎಲ್ ಆಡುತ್ತಿರುವ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿದಂತೆ ಆರ್‌ಸಿಬಿ ಈವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಸೋಮವಾರ, ಆರ್‌ಸಿಬಿ ಮತ್ತೊಂದು ನಿರಾಶಾದಾಯಕ ಸೋಲು ಕಾಣುತ್ತಿದ್ದಂತೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನದ ಬಗ್ಗೆ ಭಾರತೀಯ ಟೆನಿಸ್ ತಾರೆ ಮಹೇಶ್ ಭೂಪತಿ ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಹಿತದೃಷ್ಟಿಯಿಂದ ಇತರ ತಂಡಗಳು ತಮ್ಮ ಫ್ರಾಂಚೈಸಿಗಳನ್ನು ನಿರ್ವಹಿಸಿದಂತೆಯೇ ಯಶಸ್ವಿ ಫ್ರಾಂಚೈಸಿಯನ್ನಾಗಿ ಮಾಡಲು ಹೆಚ್ಚು ಬದ್ಧರಾಗಿರುವ ಹೊಸ ಮಾಲೀಕರಿಗೆ ಆರ್‌ಸಿಬಿ ಅನ್ನು ಮಾರಾಟ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಒತ್ತಾಯಿಸಬೇಕು. ಮಾಲೀಕತ್ವದ ಬದಲಾವಣೆಯು ಧನಾತ್ಮಕ ಬದಲಾವಣೆಗಳನ್ನು ತರಬಹುದು ಮತ್ತು ತಂಡದ ಕಾರ್ಯಕ್ಷಮತೆಯನ್ನು ಪುನಶ್ಚೇತನಗೊಳಿಸಬಹುದು ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ, ಆರ್‌‌ಸಿಬಿ ತಂಡದಲ್ಲಿ ಅತ್ಯುತ್ತಮ ಆಟಗಾರರನ್ನು ಹೊಂದಿದ್ದರೂ ಕೂಡ ಒಂದು ತಂಡವಾಗಿ ಆರ್‌ಸಿಬಿ ಏಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾಗನ್ ಹೇಳಿದ್ದಾರೆ.

SCROLL FOR NEXT