ಸಿಎಸ್ ಕೆ ಮತ್ತು ಲಖನೌ ತಂಡ 
ಕ್ರಿಕೆಟ್

IPL 2024: ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್; ಲಖನೌ ಮುಂದೆ ಮಂಡಿಯೂರಿದ ಚೆನ್ನೈ ಸೂಪರ್ ಕಿಂಗ್ಸ್

ಐಪಿಎಲ್ 2024ರ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದೆ.

ಐಪಿಎಲ್ 2024ರ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್‌ಕೆ ಪರ ರವೀಂದ್ರ ಜಡೇಜಾ ಅವರ (57) ಅರ್ಧಶತಕ ಹಾಗೂ ಎಂಎಸ್ ಧೋನಿ 28 ರನ್ ಗಳ ನೆರವಿನಿಂದ ಚೆನ್ನೈ 176 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಲಖನೌ ತಂಡ ಆರಂಭದಿಂದಲೂ ತನ್ನ ಪ್ರಾಬಲ್ಯ ಕಾಯ್ದುಕೊಂಡಿತ್ತು. ಲಖನೌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಅರ್ಧಶತಕ ಗಳಿಸಿದರು. ಡಿ ಕಾಕ್ 43 ಎಸೆತಗಳಲ್ಲಿ 54 ರನ್ ಗಳಿಸಿದರೆ ರಾಹುಲ್ 53 ಎಸೆತಗಳಲ್ಲಿ 82 ರನ್ ಗಳಿಸಿ 8 ವಿಕೆಟ್‌ಗಳಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

15ನೇ ಓವರ್ ನ ಕೊನೆಯ ಎಸೆತದಲ್ಲಿ ಡಿ ಕಾಕ್ ಔಟಾಗಿದ್ದು, ಈ ವೇಳೆ ತಂಡದ ಸ್ಕೋರ್ 134 ರನ್ ಆಗಿತ್ತು. ಲಕ್ನೋ ಸೂಪರ್ ಜೈಂಟ್ಸ್‌ಗೆ ಕೊನೆಯ 30 ಎಸೆತಗಳಲ್ಲಿ ಇನ್ನೂ 43 ರನ್‌ಗಳ ಅಗತ್ಯವಿತ್ತು. ಒಂದು ಕಡೆ ರಾಹುಲ್ ಕ್ರೀಸ್‌ನಲ್ಲಿ ನಿಂತಿದ್ದರೆ, ಇನ್ನೊಂದು ತುದಿಯಿಂದ ನಿಕೋಲಸ್ ಪುರನ್ ಅವರು ಬಂದ ತಕ್ಷಣ ಸಿಎಸ್‌ಕೆ ಬೌಲರ್‌ಗಳ ಮೇಲೆ ದಾಳಿ ಶುರು ಮಾಡಿದರು. LSG ಬ್ಯಾಟ್ಸ್‌ಮನ್‌ಗಳು ಮುಂದಿನ 2 ಓವರ್‌ಗಳಲ್ಲಿ 27 ರನ್ ಗಳಿಸಿದ್ದರು. ಇದರಿಂದಾಗಿ ಪಂದ್ಯದ ಫಲಿತಾಂಶವು ಈಗ ಕೇವಲ ಔಪಚಾರಿಕವಾಗಿತ್ತು. ಲಖನೌಗೆ 18 ಎಸೆತಗಳಲ್ಲಿ 16 ರನ್ ಬೇಕಿತ್ತು. ಕೊನೆಯ ಓವರ್‌ಗಳಲ್ಲಿ ಚೆಂಡು ಸರಿಯಾಗಿ ಬ್ಯಾಟ್‌ಗೆ ತಾಗದ ಕಾರಣ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತಿತ್ತು. ಇದೇ ವೇಳೆ ತುಷಾರ್ ದೇಶಪಾಂಡೆ 19ನೇ ಓವರ್‌ನಲ್ಲಿ 15 ರನ್ ನೀಡಿ ಲಖನೌ ಗೆಲುವನ್ನು ಖಚಿತಪಡಿಸಿದ್ದರು. ನಿಕೋಲಸ್ ಪೂರನ್ 12 ಎಸೆತಗಳಲ್ಲಿ 23 ರನ್ ಗಳಿಸಿ ಗೆಲುವಿನ ಹೊಡೆತ ಬಾರಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ಬೌಲರ್‌ಗಳು ಪಂದ್ಯದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚೆನ್ನೈ ಪರ ಮುಸ್ತಾಫಿಜುರ್ ರೆಹಮಾನ್ ಮತ್ತು ಮತಿಶಾ ಪತಿರಾನ ಮಾತ್ರ ತಲಾ 1 ವಿಕೆಟ್ ಪಡೆದರು. ಆದ್ದರಿಂದ ಬೌಲರ್‌ಗಳು ನಿಯಮಿತ ಮಧ್ಯಂತರದಲ್ಲಿ ವಿಕೆಟ್‌ಗಳನ್ನು ಪಡೆಯಬೇಕಾಗಿತ್ತು. ಆದರೆ ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ ಮತ್ತು ದೀಪಕ್ ಚಹಾರ್ ಕೂಡ ವಿಕೆಟ್ ಪಡೆಯುವಲ್ಲಿ ವಿಫಲರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT