ಸಂಗ್ರಹ ಚಿತ್ರ 
ಕ್ರಿಕೆಟ್

ಮಹಾರಾಜ ಟ್ರೋಫಿ 2024: ಬೆಂಗಳೂರು ಬ್ಲಾಸ್ಟರ್ಸ್ ವಿರುದ್ದ 3ನೇ ಸೂಪರ್ ಓವರ್ ನಲ್ಲಿ ಗೆದ್ದ ಹುಬ್ಬಳ್ಳಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಬೆಂಗಳೂರು ಬ್ಲಾಸ್ಟರ್ಸ್​ ಹಾಗೂ ಹುಬ್ಬಳ್ಳಿ ಟೈಗರ್ಸ್ ಪಂದ್ಯ ಟೈ ಆಗಿತ್ತು. ಹೀಗಾಗಿ ಸೂಪರ್ ಓವರ್ ನೀಡಲಾಗಿತ್ತು. ಆದರೆ ಮೊದಲೆರೆಡು ಸೂಪರ್ ಓವರ್ ಗಳಲ್ಲಿ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಮೂರನೇ ಸೂಪರ್ ಓವರ್ ನೀಡಲಾಗಿತ್ತು.

ಬೆಂಗಳೂರು: ಮಹಾರಾಜ ಟ್ರೋಫಿಯ 17ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ತಂಡದ ವಿರುದ್ಧ ಮೂರನೇ ಸೂಪರ್​ ಓವರ್​ನ​ಲ್ಲಿ ಹುಬ್ಬಳ್ಳಿ ಟೈಗರ್ಸ್​ ತಂಡ ರೋಚಕ ಜಯ ಸಾಧಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಬೆಂಗಳೂರು ಬ್ಲಾಸ್ಟರ್ಸ್​ ಹಾಗೂ ಹುಬ್ಬಳ್ಳಿ ಟೈಗರ್ಸ್ ಪಂದ್ಯ ಟೈ ಆಗಿತ್ತು. ಹೀಗಾಗಿ ಸೂಪರ್ ಓವರ್ ನೀಡಲಾಗಿತ್ತು. ಆದರೆ ಮೊದಲೆರೆಡು ಸೂಪರ್ ಓವರ್ ಗಳಲ್ಲಿ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಮೂರನೇ ಸೂಪರ್ ಓವರ್ ನೀಡಲಾಗಿತ್ತು. ಅಂತಿಮವಾಗಿ ಮೂರನೇ ಸೂಪರ್ ಓವರ್​ನಲ್ಲಿ 13 ರನ್​ಗಳ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್​ ತಂಡದ ಪರ ಮನ್ವಂತ್ ಕುಮಾರ್ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್​ ತಂಡ ನಿಗದಿತ ಓವರ್ ನಲ್ಲಿಲ್ಲಿ 164 ರನ್ ಗಳಿಗೆ ಸರ್ವಪತನ ಕಂಡಿತ್ತು. ತಂಡದ ಪರ ಮೊಹಮ್ಮದ್ ತಾಹ 31 ರನ್, ನಾಯಕ ಮನೀಶ್ ಪಾಂಡೆ 33 ರನ್ ಬಾರಿಸಿದರೆ, ಅನೀಶ್ವರ್ ಗೌತಮ್ 30 ರನ್ ಹಾಗೂ ಮನ್ವಂತ್ ಕುಮಾರ್ 28 ರನ್ ಬಾರಿಸಿದ್ದರು. ಹೀಗಾಗಿ ತಂಡ 164 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು.

ಹುಬ್ಬಳ್ಳಿ ನೀಡಿದ 165 ರನ್ ಗುರಿ ಬೆನ್ನಟ್ಟಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ ಓವರ್ ನಲ್ಲಿ 164 ರನ್ ಬಾರಿಸಿದ್ದು ಪಂದ್ಯ ಟೈ ಆಗಿತ್ತು. ಬೆಂಗಳೂರು ಪರ ಮಾಯಾಂಕ್ ಅಗರ್ವಾಲ್ 54 ರನ್ ಬಾರಿಸಿದ್ದರು. ನಂತರ ಬಂದ ಸೂರಜ್ ಅಹುಜಾ 26 ಹಾಗೂ ನವೀನ್ 23 ರನ್ ಬಾರಿಸಿದರು. ಆದರೆ ಪಂದ್ಯ ಗೆಲ್ಲುಲು ಸಾಧ್ಯವಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT