ಮೆಲ್ಬೋರ್ನ್: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ 4ನೇ ಪಂದ್ಯದಲ್ಲಿ ಭಾರತದ ರಿಷಬ್ ಪಂತ್ ಔಟಾದಾಗ ಮೈದಾನದಲ್ಲೇ ಅಶ್ಲೀಲ ವರ್ತನೆ ತೋರಿದ್ದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು.. ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ರಿಷಭ್ ಪಂತ್ ಅವರ ವಿಕೆಟ್ ಕಬಳಿಸಿ ಟ್ರಾವಿಸ್ ಹೆಡ್ ವಿಚಿತ್ರವಾಗಿ ಸಂಭ್ರಮಿಸಿದರು.
ಟ್ರಾವಿಸ್ ಹೆಡ್ ಎಸೆದ 59ನೇ ಓವರ್ನ 4ನೇ ಎಸೆತದಲ್ಲಿ ರಿಷಭ್ ಪಂತ್ ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಬೌಂಡರಿ ಲೈನ್ನಲ್ಲಿದ್ದ ಪ್ಯಾಟ್ ಕಮಿನ್ಸ್ ಅದ್ಭುತವಾಗಿ ಕ್ಯಾಚ್ ಹಿಡಿದರು. ಇತ್ತ ಪಂತ್ ಔಟ್ ಆಗುತ್ತಿದ್ದಂತೆ ಟ್ರಾವಿಸ್ ಹೆಡ್ ಬೆರಳಿನೊಂದಿಗೆ ಸಂಭ್ರಮಿಸಿದರು.
ಸ್ಪಷ್ಟನೆ ಕೊಟ್ಟಿದ್ದ ನಾಯಕ ಕಮಿನ್ಸ್
ಇನ್ನು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೂ ಇದೇ ವಿಚಾರ ಚರ್ಚೆಯಾಗಿದ್ದು, ಈ ಬಗ್ಗೆ ಮಾತನಾಡಿದ್ದ ನಾಯಕ ಪ್ಯಾಟ್ ಕಮಿನ್ಸ್ ಅದು ಐಸ್ ಫಿಂಗರ್ ಸಂಭ್ರಮಾಚರಣೆ ಎಂದು ಹೇಳುವ ಮೂಲಕ ಹೆಡ್ ಬೆನ್ನಿಗೆ ನಿಲ್ಲುವ ಪ್ರಯತ್ನ ಮಾಡಿದ್ದಾರೆ. 'ಈ ಬಗ್ಗೆ ನಾನು ವಿವರಿಸುತ್ತೇನೆ. ಹೆಡ್ ಬೆರಳುಗಳು ತುಂಬಾ ಬಿಸಿಯಾಗಿರುವುದರಿಂದ ಒಂದು ಕಪ್ ಐಸ್‌ನಲ್ಲಿ ಹಾಕಿರುವುದು ಅಷ್ಟೇ.
ಇದು ನಮ್ಮಲ್ಲಿ ಸಾಮಾನ್ಯವಾಗಿ ನಡೆಯುವ ಜೋಕ್ ಆಗಿದೆ. ಈ ಹಿಂದೆ ಗಬ್ಬಾದಲ್ಲಿ ಅಥವಾ ಬೇರೆಲ್ಲಿಯಾದರೂ ಅವರು ವಿಕೆಟ್ ಪಡೆದ ನಂತರ ಫ್ರಿಡ್ಜ್‌ಗೆ ಹೋಗಿ, ಐಸ್ ತೆಗೆದುಕೊಂಡು, ಅದರಲ್ಲಿ ತನ್ನ ಬೆರಳನ್ನು ಇಟ್ಟ ನಾಥನ್ ಲಿಯಾನ್ ಮುಂದೆ ನಡೆಯುತ್ತಾರೆ. ಇದು ತಮಾಷೆ ವಿಚಾರವಾಗಿದೆ. ಬೇರೇನೂ ಅಲ್ಲ ಎಂದು ಹೇಳಿದ್ದಾರೆ.
ಆದರೆ ಇದೇ ಕಮಿನ್ಸ್ ಟ್ರಾವಿಸ್ ಹೆಡ್ ಅವರ ಫಿಂಗರ್ ಸೆಲೆಬ್ರೇಷನ್ ವೇಳೆ ನಗುತ್ತಿದ್ದರು. ಅಲ್ಲದೆ ಸುದ್ದಿಗೋಷ್ಠಿಯಲ್ಲೂ ಅವರ ನಗು ಟ್ರಾವಿಸ್ ಹೆಡ್ ರದ್ದು ಅಶ್ಲೀಲ ವರ್ತನೆ ಎನ್ನುವಂತಿತ್ತು.
ವ್ಯಾಪಕ ಆಕ್ರೋಶ
ಇನ್ನು ಟ್ರಾವಿಸ್ ಹೆಡ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಚರ್ಚೆಗೂ ಕಾರಣವಾಗಿದೆ. ಇದೀಗ ಟ್ರಾವಿಸ್ ಹೆಡ್ ವಿರುದ್ಧ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಾವಿಸ್ ಹೆಡ್ ವಿರುದ್ಧ ನವಜೋತ್ ಸಿಂಗ್ ಸಿಧು ಆಕ್ರೋಶ ಹೊರಹಾಕಿದ್ದಾರೆ. ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಟ್ರಾವಿಸ್ ಹೆಡ್ ಅವರ ಅಸಹ್ಯಕರ ನಡವಳಿಕೆಯು ಸಜ್ಜನರ ಆಟಕ್ಕೆ ಒಳ್ಳೆಯದಲ್ಲ. ಮಕ್ಕಳು, ಮಹಿಳೆಯರು, ಕಿರಿಯರು ಮತ್ತು ಹಿರಿಯರು ಆಟವನ್ನು ನೋಡುತ್ತಿರುವಾಗ ಇದು ಕೆಟ್ಟ ಉದಾಹರಣೆಯಾಗಿದೆ. ಈ ಕಠಿಣ ನಡವಳಿಕೆಯು ಯಾರನ್ನೂ ಅವಮಾನಿಸಿಲ್ಲ ಎಂದು ಸಿಧು ಬರೆದಿದ್ದಾರೆ. ವೈಯಕ್ತಿಕ ಆದರೆ 1.5 ಶತಕೋಟಿ ಭಾರತೀಯರ ರಾಷ್ಟ್ರ. ಅವನಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಇದು ಭವಿಷ್ಯದ ಪೀಳಿಗೆಗೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಯಾರೂ ಅದೇ ರೀತಿ ಮಾಡಲು ಧೈರ್ಯ ಮಾಡಬಾರದು ಎಂದಿದ್ದಾರೆ.
ಹೆಡ್ ನಿಷೇಧ ಸಾಧ್ಯತೆ
ಇನ್ನು ಟ್ರಾವಿಸ್ ಹೆಡ್ ರ ಈ ಕೃತ್ಯ ಅಶ್ಲೀಲ ಸಂಭ್ರಮ ಎಂದು ಸಾಬೀತಾದರೆ ಅವರು ಕಠಿಣ ಶಿಕ್ಷೆಗೊಳಗಾಗುವ ಸಾಧ್ಯತೆ ಇದೆ. ಇದು ಅಶ್ಲೀಲ ಸಂಭ್ರಮವಾದರೆ ಟ್ರಾವಿಸ್ ಹೆಡ್ ವಿರುದ್ಧ ಐಸಿಸಿ ಕ್ರಮ ಕೈಗೊಳ್ಳುವುದು ಖಚಿತ. ಅಲ್ಲದೆ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಡೆಮೆರಿಟ್ ಪಾಯಿಂಟ್ ಪಡೆದಿರುವ ಕಾರಣ ಹೆಡ್ ಅವರು ಒಂದು ಪಂದ್ಯದ ನಿಷೇಧಕ್ಕೂ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.