ರವೀಂದ್ರ ಜಡೇಜಾ ಮತ್ತು ಪತ್ನಿ ರಿವಾಬಾ 
ಕ್ರಿಕೆಟ್

'ನನಗೂ ರವೀಂದ್ರ ಜಡೇಜಾ ಮತ್ತು ಆತನ ಪತ್ನಿಗೂ ಯಾವುದೇ ಸಂಬಂಧವಿಲ್ಲ': ತಂದೆ ಅನಿರುದ್ಧ್ ಸಿಂಗ್ ಹೇಳಿಕೆ, ಪ್ರತಿಕ್ರಿಯಿಸಿದ ಟೀಂ ಇಂಡಿಯಾ ಕ್ರಿಕೆಟಿಗ

ನನಗೂ ಆತ ಮತ್ತು ಆತನ ಪತ್ನಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಕ್ರಿಕೆಟ್​ ತಂಡದ ಆಲ್‌ ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರ ತಂದೆ ಅನಿರುದ್ಧ್ ಸಿಂಗ್(Anirudhsinh Jadeja) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಹ್ಮದಾಬಾದ್​: ನನಗೂ ಆತ ಮತ್ತು ಆತನ ಪತ್ನಿಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತ ಕ್ರಿಕೆಟ್​ ತಂಡದ ಆಲ್‌ ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರ ತಂದೆ ಅನಿರುದ್ಧ್ ಸಿಂಗ್(Anirudhsinh Jadeja) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು.. ತಮ್ಮದೇ ಮಗ ಮತ್ತು ಸೊಸೆಯ ವಿರುದ್ಧ ಗಂಭೀರ ಆರೋಪ ಮಾಡಿರುವ ಅನಿರುದ್ಧ್ ಸಿಂಗ್ ಮದುವೆಯಾದ ಬಳಿಕ ರವೀಂದ್ರ ಜಡೇಜಾ ನಮ್ಮನ್ನು ತೊರೆದು ಆತನ ಪತ್ನಿಯ ಹಿಂದೆ ಹೋಗಿದ್ದಾನೆ. ಹೀಗಾಗಿ ಮಗ ರವೀಂದ್ರ ಜಡೇಜಾ ಮತ್ತು ಸೊಸೆ ರಿವಾಬಾ(Rivaba Jadeja) ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಾಧ್ಯಮವೊಂದರ ಜತೆ ಮಾತನಾಡಿದ ಅನಿರುದ್ಧ್ ಸಿಂಗ್, “ನನ್ನ ಮಗ ಜಡೇಜಾ ಮದುವೆಯಾದ ಕೆಲವು ತಿಂಗಳಲ್ಲೇ ನಮ್ಮಿಂದ ದೂರವಾಗಿದ್ದಾನೆ. ಇದಕ್ಕೆ ಕಾರಣ ಅವನ ಪತ್ನಿ ರಿವಾಬಾ. ಆಕೆ ಎಲ್ಲವೂ ತನ್ನದಾಗಬೇಕು ಎಂಬ ಹಠಕ್ಕೆ ಬಿದ್ದು ಆತನನ್ನು ನಮ್ಮಿಂದ ದೂರ ಆಗುವಂತೆ ಮಾಡಿದಳು ಎಂದು ಆರೋಪಿಸಿದ್ದಾರೆ.

ಅಂತೆಯೇ ನಾನು ಈ ವಿಚಾರವನ್ನು ಹೇಳುವಾಗ ಕೆಲವರು ನನಗೆ ಹಣದ ಅಗತ್ಯವಿದೆ ಎಂದು ಭಾವಿಸಬಹುದು. ಆದರೆ ನನಗೆ ಯಾವುದೇ ಹಣದ ಅಗತ್ಯವಿಲ್ಲ. ನನ್ನ ಬಳಿ ಎಲ್ಲವೂ ಇದೆ. ಜಡೇಜಾ ಆಕೆಯನ್ನು ಮದುವೆಯಾಗದೇ ಇದ್ದಿದ್ದರೆ ಚೆನ್ನಾಗಿತ್ತು. ನಾನು ಈ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಸೊಸೆ ರಿವಾಬಾ ಅವರೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವರು ನಮ್ಮನ್ನು ಕರೆಯುವುದಿಲ್ಲ, ನಾವು ಸಹ ಅವರನ್ನು ಕರೆಯುವುದಿಲ್ಲ. ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ. 5 ವರ್ಷಗಳಿಂದ ಮೊಮ್ಮಗಳ ಮುಖವನ್ನೇ ನೋಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

'ಸಹೋದರಿ ರವೀಂದ್ರ ಜಡೇಜಾ ಅವರನ್ನು ತಾಯಿಯಂತೆ ನೋಡಿಕೊಂಡಳು. ಆದರೆ ಇದೀಗ ಅವನಿಗೂ ಸಹೋದರಿಗೂ ಸಂಬಂಧವೇ ಇಲ್ಲದಂತಾಗಿದೆ” ಎಂದು ಅನಿರುದ್ಧ್ ಸಿಂಗ್ ಬೇಸರ ಹೊರಹಾಕಿದ್ದಾರೆ.

ಅಂದಹಾಗೆ ಜಡೇಜಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನಕ್ಕೆ ಇಂದಿಗೆ 15 ವರ್ಷಗಳು ತುಂಬಿದೆ. ಇದೇ ದಿನದಂದು ಜಡೇಜಾ ತಂದೆ ಮಗನ ಮತ್ತು ಸೊಸೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ರವೀಂದ್ರ ಜಡೇಜಾ ಅವರ ತಂದೆ ಕಳೆದ 10 ವರ್ಷಗಳಿಂದ ಜಾಮ್‌ನಗರದಲ್ಲಿ ವಾಸಿಸುತ್ತಿದ್ದು, ರವೀಂದ್ರ ಜಡೇಜಾ ಅವರು ತಂದೆ ಮತ್ತು ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಕ್ರಿಕೆಟರ್ ಜಡೇಜಾ ಹೇಳಿದ್ದೇನು?
ತಮ್ಮ ತಂದೆಯ ಹೇಳಿಕೆ ವೈರಲ್ ಆಗುತ್ತಲೇ ಟ್ವಿಟರ್ ನಲ್ಲಿ ಗುಜರಾತಿಯಲ್ಲೇ ಪ್ರತಿಕ್ರಿಯೆ ನೀಡಿರುವ ರವೀಂದ್ರ ಜಡೇಜಾ, ನಮ್ಮ ತಂದೆಯ ಆರೋಪಗಳು "ಅರ್ಥಹೀನ"ವಾಗಿದ್ದು, ನಮ್ಮ ಘನತೆಗೆ ಧಕ್ಕೆ ತರುವ ಯಾವುದೇ ಆರೋಪಗಳನ್ನು ನಿರಾಕರಿಸುತ್ತೇನೆ ಎಂದು ಹೇಳಿದ್ದಾರೆ. 

'ನೀಡಿರುವ ಅಸಂಬದ್ಧ ಸಂದರ್ಶನದಲ್ಲಿ ಹೇಳಲಾದ ಎಲ್ಲಾ ವಿಷಯಗಳು ಅರ್ಥಹೀನ ಮತ್ತು ಅಸತ್ಯವಾಗಿವೆ. ನನ್ನ ಪತ್ನಿಯ ಪ್ರತಿಷ್ಠೆಗೆ ಕಳಂಕ ತರುವ ಪ್ರಯತ್ನಗಳು ನಿಜಕ್ಕೂ ಖಂಡನೀಯ. ನಾನು ಸಾರ್ವಜನಿಕವಾಗಿ ಹೇಳದಿರುವವರೆಗೆ ಯಾವುದು ಒಳ್ಳೆಯದು ಎಂದು ಹೇಳಲು ನನಗೆ ಬಹಳಷ್ಟು ಇದೆ.. ಧನ್ಯವಾದಗಳು ಎಂದು ಜಡೇಜಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT