ಜಿಂಬಾಬ್ವೆಆಟಗಾರರ ಸಂಭ್ರಮದ ಚಿತ್ರ 
ಕ್ರಿಕೆಟ್

T20 ವಿಶ್ವ ಚಾಂಪಿಯನ್ ಭಾರತಕ್ಕೆ ಜಿಂಬಾಬ್ವೆ ಶಾಕ್: 13 ರನ್ ಗೆಲುವು

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಜಿಂಬಾಬ್ವೆ ನೀಡಿದ 116 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ, 19.5 ಓವರ್ ಗಳಲ್ಲಿ 102 ರನ್ ಗಳಿಗೆ ಆಲೌಟ್ ಆಯಿತು.

ಹರಾರೆ: ಹರಾರೆ ಸ್ಟೋರ್ಟ್ಸ್ ಕ್ಲಬ್ ನಲ್ಲಿ ಶನಿವಾರ ನಡೆದ ನಡೆದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ವಿಶ್ವ ಟಿ-20 ಚಾಂಪಿಯನ್ ಭಾರತಕ್ಕೆ ಜಿಂಬಾಬ್ವೆ ಶಾಕ್ ನೀಡಿದೆ. 13 ರನ್ ಗಳಿಂದ ಪಂದ್ಯ ಗೆದ್ದು ಬೀಗಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಜಿಂಬಾಬ್ವೆ ಪರ ಆರಂಭಿಕ ಆಟಗಾರರಾದ ಮಾಧೇವೆರೆ 21, ಬ್ರಿಯಾನ್ ಬೆನೆಟ್ 22, ನಾಯಕ ರಾಜಾ 17, ಡಿಯಾನ್ ಮೈಯರ್ಸ್ 23, ವಿಕೆಟ್ ಕೀಪರ್ ಕ್ಲೈವ್ ಮದಂಡೆ 29 ರನ್ ಗಳಿಸಿದರು. ಭಾರತದ ಪರ ರವಿ ಬಿಷ್ಟೋಯ್ 4 , ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರೆ, ಖಲೀಲ್ ಅಹ್ಮದ್ ಹಾಗೂ ಅವೇಶ್ ಖಾನ್ ತಲಾ 1 ವಿಕೆಟ್ ಪಡೆದರು.

ಜಿಂಬಾಬ್ವೆ ನೀಡಿದ 116 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದರು. ನಾಯಕ ಶುಭ್ ಮನ್ ಗಿಲ್ 31 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಬಳಿಕ ಋತುರಾಜ್ ಗಾಯಕ್ವಾಡ್, 7, ರಿಯಾನ್ ಪರಾಗ್ 2 ರನ್ ಗಳಿಗೆ ಔಟಾದರೆ, ರಿಂಕ್ ಸಿಂಗ್ ಶೂನ್ಯಕ್ಕೆ ಫೆವಿಲಿಯನ್ ಸೇರಿದರು. ವಿಕೆಟ್ ಕೀಪರ್ ಧ್ರುವ್ ಜುರೆಲ್ 6, ವಾಷಿಂಗ್ಟನ್ ಸುಂದರ್ 27, ರವಿ ಬಿಷ್ಣೋಯ್ 9, ಅವೇಶ್ ಖಾನ್ 16 ರನ್ ಗಳಿಸುವುದರೊಂದಿಗೆ 19.5 ಓವರ್ ಗಳಲ್ಲಿ 102 ರನ್ ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಜಿಂಬಾಬ್ವೆ 13 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT