ICC online desk
ಕ್ರಿಕೆಟ್

ಅಮೇರಿಕಾದಲ್ಲಿ ವಿಶ್ವಕಪ್ 2024 ಟೂರ್ನಿ: ಐಸಿಸಿಗೆ 167 ಕೋಟಿ ರೂ. ನಷ್ಟ!

ICC ಅಧ್ಯಕ್ಷರ ಹುದ್ದೆಗೆ BCCI ನ ಕಾರ್ಯದರ್ಶಿ ಜಯ್ ಶಾ ನೇಮಕಗೊಳ್ಳುವುದರ ಬಗ್ಗೆಯೂ AGM ನಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ನವದೆಹಲಿ: ಅಮೇರಿಕಾದಲ್ಲಿ ವಿಶ್ವಕಪ್ ಟೂರ್ನಿ 2024 ನ್ನು ಆಯೋಜಿಸಿದ್ದ ಐಸಿಸಿ ಗೆ 167 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ವರದಿ ಪ್ರಕಟವಾಗಿದೆ.

ಪಿಟಿಐ ವರದಿಯ ಪ್ರಕಾರ, ಕೊಲಂಬೋದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಐಸಿಸಿ ವಾರ್ಷಿಕ ಕಾನ್ಫರೆನ್ಸ್ ನಲ್ಲಿ ಇದು ಚರ್ಚೆಯ ಪ್ರಮುಖ ವಿಷಯವಾಗಿರಲಿದೆ ಎಂದು ತಿಳಿದುಬಂದಿದೆ.

ಎಜಿಎಂ ನ 9 ಅಂಶಗಳಲ್ಲಿ ಈ ವಿಷಯ ಇಲ್ಲವಾದರೂ, ಪೋಸ್ಟ್ ಇವೆಂಟ್ ರಿಪೋರ್ಟ್ ಆಗಿ ಚರ್ಚೆಗೆ ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಸೇರಿದಂತೆ ಪಂದ್ಯಾವಳಿಯ ಪ್ರಮುಖ ಭಾಗವನ್ನು USA ನಲ್ಲಿ ಆಯೋಜಿಸಲಾಗಿತ್ತು.

ICC ಅಧ್ಯಕ್ಷರ ಹುದ್ದೆಗೆ BCCI ನ ಕಾರ್ಯದರ್ಶಿ ಜಯ್ ಶಾ ನೇಮಕಗೊಳ್ಳುವುದರ ಬಗ್ಗೆಯೂ AGM ನಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಅವರ ಅವಧಿ ಇನ್ನೂ ಒಂದು ವರ್ಷ ಇದೆ. 2025 ರಲ್ಲಿ ಐಸಿಸಿ ಹುದ್ದೆಗೆ ಜಯ್ ಶಾ ನೇಮಕಗೊಂಡರೆ, ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರು 2024 ರಿಂದ 2026 ವರೆಗಿನ ತಮ್ಮ 3 ನೇ ಅವಧಿಯನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಐಸಿಸಿ ಮೂಲಗಳು ತಿಳಿಸಿವೆ.

"ಐಸಿಸಿಯ ಅಧ್ಯಕ್ಷ ಸ್ಥಾನದ ಅವಧಿಯು ತಲಾ ಎರಡು ವರ್ಷಗಳ ಮೂರು ಅವಧಿಯಿಂದ ಮೂರು ವರ್ಷಗಳ ಎರಡು ಅವಧಿಗೆ ಬದಲಾದರೆ, ಒಟ್ಟು ಅವಧಿಯು ಆರು ವರ್ಷಗಳವರೆಗೆ ಉಳಿಯಬಹುದು ಎಂಬ ಚಿಂತನೆಯೂ ನಡೆಯುತ್ತಿದೆ.

3 ವರ್ಷಗಳ ಕಾಲ ಬಾರ್ಕ್ಲೇ ತಮ್ಮ 3 ನೇ ಅವಧಿಯನ್ನು ಪೂರ್ಣಗೊಳಿಸಿದರೆ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾಗಿ ಆರು ವರ್ಷಗಳನ್ನು ಪೂರ್ಣಗೊಳಿಸಬಹುದು ಮತ್ತು 2025 ರಲ್ಲಿ ಮೂರು ವರ್ಷಗಳವರೆಗೆ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದೆಂಬುದು ಎಂಬುದು ಹೊಸ ಚಿಂತನೆಯ ಉದ್ದೇಶವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT