ನವದೆಹಲಿ: 2024 ರ ಮಹಿಳಾ ಏಷ್ಯಾ ಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಏಳು ವಿಕೆಟ್‌ಗಳ ಜಯ ಸಾಧಿಸಿದ ನಂತರ, ಉಪನಾಯಕಿ ಸ್ಮೃತಿ ಮಂಧಾನ, ವೀಲ್‌ಚೇರ್‌ನಲ್ಲಿ ಮೈದಾನಕ್ಕೆ ಬಂದ ಪುಟ್ಟ ಕ್ರಿಕೆಟ್ ಅಭಿಮಾನಿಗೆ ಫೋನ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಆದೀಶಾ ಹೆರಾತ್ ಎಂಬ ಯುವ ಪುಟ್ಟ ಅಭಿಮಾನಿಗೆ ಸ್ಮೃತಿ ಮಂಧಾನ ಮೊಬೈಲ್ ಫೋನ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಾಲಕಿ ತಾಯಿ ಮಾತನಾಡಿ, ಸ್ಮೃತಿ ಮಂಧಾನ ಅದೀಶಾಳೊಂದಿಗೆ ಸ್ವಲ್ಪ ಸಮಯ ಮಾತನಾಡಿದರು. ನಂತರ ಹೈ-ಫೈವ್ ಮಾಡಿದರು. "ನನ್ನ ಮಗಳು ಪಂದ್ಯಕ್ಕೆ ಹೋಗಲು ಬಯಸಿದ್ದರಿಂದ ಅನಿರೀಕ್ಷಿತವಾಗಿ ಪಂದ್ಯ ವೀಕ್ಷಿಸಲು ಬಂದಿದ್ದೇವೆ. ಭಾರತ ತಂಡದಿಂದ ಮಂಧಾನ ಮೇಡಮ್ ಅವರನ್ನು ಭೇಟಿ ಮಾಡಿದ್ದು, ಅವರು ನನ್ನ ಮಗಳಿಗೆ ಫೋನ್ ನೀಡಿದರು ಎಂದು ತಿಳಿಸಿದರು.
"ಇದು ಅನಿರೀಕ್ಷಿತವಾಗಿತ್ತು. ನನ್ನ ಮಗಳು ಸ್ಮೃತಿ ಮಂಧಾನ ಅವರಿಂದ ಈ ಉಡುಗೊರೆ ಸ್ವೀಕರಿಸಲು ತುಂಬಾ ಅದೃಷ್ಟಶಾಲಿ ಎಂದು ಆದೀಶಾ ಅವರ ತಾಯಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಹಾಲಿ ಚಾಂಪಿಯನ್ ಭಾರತ ಭಾನುವಾರ ಮಧ್ಯಾಹ್ನ 2024 ರ ಮಹಿಳಾ ಏಷ್ಯಾ ಕಪ್‌ನ ಎರಡನೇ ಗುಂಪಿನ ಎ ಪಂದ್ಯದಲ್ಲಿ ನೇಪಾಳವನ್ನು ಎದುರಿಸಲಿದೆ.