ನ್ಯೂಯಾರ್ಕ್: ಐಸಿಸಿ ವಿಶ್ವಕಪ್ ಟಿ20 39 ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನ ವೇಗಿ ಲಾಕಿ ಫರ್ಗ್ಯುಸನ್ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಜೂ.17 ರಂದು ಟ್ರೆನಿಡಾಡ್ ನ ಬ್ರಿಯನ್ ಲಾರಾ ಸ್ಟೇಡಿಯಂ ನಲ್ಲಿ ಪಪುವಾ ನ್ಯೂ ಗಿನಿಯಾ-ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣವಾಗಿದೆ.
ಲಾಕಿ ಫರ್ಗ್ಯುಸನ್ ತಮ್ಮ ಪಾಲಿನ ಕೋಟಾದ ನಾಲ್ಕೂ ಓವರ್ ಗಳನ್ನು ಮೇಡ್ ಇನ್ ಓವರ್ ಗಳನ್ನಾಗಿಸಿದ್ದು 3 ವಿಕೆಟ್ ಪಡೆದಿದ್ದಾರೆ. ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಒಂದು ರನ್ ನೀಡದೇ 3 ವಿಕೆಟ್ ಪಡೆಯುವ ಮೂಲಕ ಲಾಕಿ ಫರ್ಗ್ಯುಸನ್ ದಾಖಲೆ ಬರೆದಿದ್ದು, ಭವಿಷ್ಯದಲ್ಲಿ ಈ ದಾಖಲೆಯನ್ನು ಮುರಿಯುವುದು ಯಾವ ಕ್ರಿಕೆಟಿಗನಿಗೂ ಕಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.
ನೆನ್ನೆಯ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಪಪುವಾ ನ್ಯೂ ಗಿನಿಯಾ ತಂಡವನ್ನು ಅತಿ ಕಡಿಮೆ ಮೊತ್ತಕ್ಕೆ ಆಲ್ ಔಟ್ ಮಾಡಿದ್ದು ಪಪುವಾ ನ್ಯೂ ಗಿನಿಯಾ ತಂಡ 19.4 ಓವರ್ ಗಳಲ್ಲಿ 78 ರನ್ ಗಳಿಗೆ ಸರ್ವಪತನ ಕಂಡಿತು.