ಗೌತಮ್ ಗಂಭೀರ್ 
ಕ್ರಿಕೆಟ್

ನೂತನ ಕೋಚ್ ಆಯ್ಕೆ: ಪ್ರತೀ ಮಾದರಿಗೂ ಬೇರೆ ಬೇರೆ ತಂಡ; Gautam Gambhir ಷರತ್ತಿಗೆ BCCI ಒಪ್ಪಿಗೆ?

ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಕೋಚ್ ಆಗಿ ಭಾರತ ಕ್ರಿಕೆಟ್ ತಂಡ ಮಾಜಿ ಸ್ಟಾರ್ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದು ಅವರ ಎಲ್ಲ ಷರತ್ತುಗಳಿಗೆ ಬಿಸಿಸಿಐ ಒಪ್ಪಿದೆ ಎಂದು ಹೇಳಲಾಗಿದೆ.

ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಯ್ಕೆ ಬಹುತೇಕ ಅಂತಿಮವಾಗಿದ್ದು, ಕೋಚ್ ಆಗಿ ಭಾರತ ಕ್ರಿಕೆಟ್ ತಂಡ ಮಾಜಿ ಸ್ಟಾರ್ ಆಟಗಾರ ಗೌತಮ್ ಗಂಭೀರ್ ಆಯ್ಕೆಯಾಗಿದ್ದು ಅವರ ಎಲ್ಲ ಷರತ್ತುಗಳಿಗೆ ಬಿಸಿಸಿಐ ಒಪ್ಪಿದೆ ಎಂದು ಹೇಳಲಾಗಿದೆ.

ನಿನ್ನೆಯಷ್ಟೇ ಗೌತಮ್ ಗಂಭೀರ್ ರನ್ನು ಬಿಸಿಸಿಐನ ಸಿಇಸಿ ತಂಡ ಸಂದರ್ಶನ ಮಾಡಿದ್ದು ಈ ವೇಳೆ ಗೌತಮ್ ಗಂಭೀರ್ ತಾವು ತಂಡದ ಕೋಚ್ ಆಗಲು ಇರಿಸಿದ್ದ ಎಲ್ಲ ಷರತ್ತುಗಳನ್ನು ಬಿಸಿಸಿಐ ಒಪ್ಪಿದೆ ಎನ್ನಲಾಗಿದೆ. ಪ್ರಮುಖವಾಗಿ ಕ್ರಿಕೆಟ್ ಮೂರು ಮಾದರಿಗಳಿಗೆ ಮೂರು ಬಗೆಯ ತಂಡ ರಚನೆ ಮಾಡಬೇಕೆಂಬ ಗೌತಿ ನಿರ್ಧಾರಕ್ಕೆ ಬಿಸಿಸಿಐ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಇದೀಗ ಇದೇ ವಿಚಾರವಾಗಿ ಇಂದು ಗೌತಮ್ ಗಂಭೀರ್ ಬಿಸಿಸಿಐ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ನೂತನ ಕೋಚ್ ಹುದ್ದೆಯ ಅವಧಿ ಜುಲೈ 2024 ರಿಂದ ಡಿಸೆಂಬರ್ 2027 ರವರೆಗೆ ಎಲ್ಲಾ ಮೂರು ಸ್ವರೂಪಗಳಿಗೆ-ಟೆಸ್ಟ್, ODI ಮತ್ತು T20I ಗಳಿಗೆ ಹೊಸ ಕೋಚ್‌ನ ಒಪ್ಪಂದವು ಮಾನ್ಯವಾಗಿರುತ್ತದೆ.

ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರವಾಗಿ ಬಹು ತಿಂಗಳುಗಳಿಂದ ಭುಗಿಲೆದ್ದಿದ್ದ ಚರ್ಚೆಗೆ ಇಂದೇ ಅಂತಿಮ ತೆರೆ ಬೀಳುವ ಸಾಧ್ಯತೆ ಇದ್ದು, ಹಾಲಿ ಕೋಚ್ ರಾಹುಲ್ ದ್ರಾವಿಡ್ ರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಆಯ್ಕೆ ಬಹುತೇಕ ಖಚಿತವಾದಂತಾಗಿದೆ.

ಜೂನ್ 18 ರಂದು ಮುಂಬೈನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಲು ಗಂಭೀರ್ ಸಂದರ್ಶನಕ್ಕೆ ಹಾಜರಾಗಿದ್ದರು. ಗಂಭೀರ್ ಅವರು ಮಂಗಳವಾರ ಮಧ್ಯಾಹ್ನ 2-4 ಗಂಟೆಯ ನಡುವೆ ಜಯ್ ಶಾ ಮತ್ತು ಇತರರನ್ನು ಭೇಟಿಯಾಗಿದ್ದು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT