ಕ್ರಿಕೆಟಿಗರಿಗೆ 'ಇನ್ಸೆಂಟಿವ್' 
ಕ್ರಿಕೆಟ್

Test Cricket Incentive Scheme: ಕ್ರಿಕೆಟಿಗರಿಗೆ 'ಇನ್ಸೆಂಟಿವ್' ಘೋಷಣೆ ಮಾಡಿದ BCCI; ಯಾರಿಗೆಷ್ಟು ಮೊತ್ತ?

ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಜಯದ ಬೆನ್ನಲ್ಲೇ ಭಾರತ ಟೆಸ್ಟ್​ ಆಟಗಾರರಿಗೆ ಬಿಸಿಸಿಐ ವಿಶೇಷ ವೇತನ ಘೋಷಣೆ ಮಾಡಿದೆ.

ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಜಯದ ಬೆನ್ನಲ್ಲೇ ಭಾರತ ಟೆಸ್ಟ್​ ಆಟಗಾರರಿಗೆ ಬಿಸಿಸಿಐ ವಿಶೇಷ ವೇತನ ಘೋಷಣೆ ಮಾಡಿದೆ.

ಇಂಗ್ಲೆಂಡ್​ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯವನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಬೆನ್ನಲ್ಲೇ ಬಿಸಿಸಿಐ(BCCI) ಜಯ್​ ಶಾ(BCCI secretary Jay Shah) ಅವರು ಟೀಮ್ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿಯೊಂದನ್ನು ಪ್ರಕಟಿಸಿದ್ದು, ವಾರ್ಷಿಕ ಒಡಂಬಡಿಕೆಯ ವೇತನದ ಜತೆಗೆ ಹೆಚ್ಚುವರಿ ಮೊತ್ತ ನೀಡುವ 'Test Cricket Incentive Scheme' ಯೋಜನೆ ಘೋಷಣೆ ಮಾಡಿದ್ದಾರೆ.

ಈ ಕುರಿತು ಅಂತಿಮ ಟೆಸ್ಟ್ ಪಂದ್ಯ ಮುಗಿಯುತ್ತಿದ್ದಂತೆ ಜಯ್​ ಶಾ ಅವರು ಟ್ವೀಟ್​ ಮಾಡುವ ಮೂಲಕ ಈ ಯೋಜನೆ ಪ್ರಕಟಿಸಿದ್ದು, ಕ್ರಿಕೆಟಿಗರಿಗೆ ಇನ್ಸೆಂಟಿವ್ ಘೋಷಣೆ ಮಾಡಿದ್ದಾರೆ.

ಪ್ರಸ್ತುತ ಭಾರತದಲ್ಲಿ ಟೆಸ್ಟ್‌ ಪಂದ್ಯವೊಂದಕ್ಕೆ ಆಟಗಾರರಿಗೆ ಲಭಿಸುವ ವೇತನ 15 ಲಕ್ಷ ರೂ. ಐಪಿಎಲ್‌ ಬಳಿಕ ಒಂದು ಋತುವಿನ ಎಲ್ಲ ಟೆಸ್ಟ್‌ ಸರಣಿಗಳನ್ನು ಆಡುವ ಆಟಗಾರರಿಗೆ ಬೋನಸ್‌ ರೂಪದ ನೂತನ ಮಾದರಿಯಲ್ಲಿ ವಿಶೇಷ ವೇತನ ಘೋಷಣೆ ಮಾಡಲಾಗಿದೆ. ಉದಾಹರಣೆಗೆ ಒಂಬತ್ತು-ಪಂದ್ಯಗಳ ಋತುವಿನಲ್ಲಿ ಕನಿಷ್ಠ 5ರಿಂದ 6 ಟೆಸ್ಟ್‌ಗಳನ್ನು ಆಡುವ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷದ ಬದಲಾಗಿ ಇನ್ನು ಮುಂದೆ ಪ್ರತಿ ಪಂದ್ಯಕ್ಕೆ 30 ಲಕ್ಷ ಪಡೆಯಲಿದ್ದಾರೆ.

ಹಾಗೆಯೇ ವರ್ಷವೊಂದರಲ್ಲಿ ಕನಿಷ್ಠ 75 ಪ್ರತಿಶತ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬ ಆಟಗಾರನ ವೇತನವು ಪ್ರತಿ ಪಂದ್ಯಕ್ಕೆ 22.5 ಲಕ್ಷದಿಂದ 45 ಲಕ್ಷಕ್ಕೆ ದ್ವಿಗುಣಗೊಂಡಿದೆ. ವರ್ಷದ ಎಲ್ಲ ಟೆಸ್ಟ್‌ ಸರಣಿಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗಷ್ಟೇ ಇದು ಅನ್ವಯವಾಗುತ್ತದೆ.

ಟೆಸ್ಟ್ ಕ್ರಿಕೆಟ್ ಉತ್ತೇಜನಕ್ಕೆ ಬಿಸಿಸಿಐನಿಂದ ಕ್ರಮ

ಆಟಗಾರರು ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚಿನ ಆಸಕ್ತಿ ವಹಿಸಬೇಕು, ಹೆಚ್ಚೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಬೇಕು, ಸಾಂಪ್ರದಾಯಿಕ ಕ್ರಿಕೆಟನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎನ್ನುವುದು ಇದರ ಉದ್ದೇಶ ಎಂದು ಜಯ್​ ಶಾ ಅವರು ಹೇಳಿದರು. ಜಯ್​ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾದ ಬಳಿಕ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಮಹಿಳಾ ಕ್ರಿಕೆಟ್​ ಲೀಗ್​ ಮತ್ತು ಮಹಿಳಾ ಕ್ರಿಕೆಟಿಗರಿಗೂ ಪುರುಷರಂತೆ ಸಮಾನವಾದ ವೇತನ ಪದ್ಧತಿ ಪ್ರಾಮುಖ್ಯವಾದದ್ದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT