ರಚಿನ್ ರವೀಂದ್ರ - ಎಂಎಸ್ ಧೋನಿ 
ಕ್ರಿಕೆಟ್

IPL 2024: ಎಂಎಸ್‌ ಧೋನಿಯನ್ನು ಕೊಂಡಾಡಿದ ಕನ್ನಡಿಗ ರಚಿನ್ ರವೀಂದ್ರ

ಐಪಿಎಲ್ 2024ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡುತ್ತಿರುವ ನ್ಯೂಜಿಲೆಂಡ್‌ನ ಆಲ್‌ರೌಂಡರ್ ರಚಿನ್ ರವೀಂದ್ರ, ಅಪ್ರತಿಮ ಆಟಗಾರ ಎಂಎಸ್ ಧೋನಿಯಂತಹ ವ್ಯಕ್ತಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ವಿಸ್ಮಯವೇ ಸರಿ ಎಂದಿದ್ದಾರೆ.

ನವದೆಹಲಿ: ಐಪಿಎಲ್ 2024ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡುತ್ತಿರುವ ನ್ಯೂಜಿಲೆಂಡ್‌ನ ಆಲ್‌ರೌಂಡರ್ ರಚಿನ್ ರವೀಂದ್ರ, ಅಪ್ರತಿಮ ಆಟಗಾರ ಎಂಎಸ್ ಧೋನಿಯಂತಹ ವ್ಯಕ್ತಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ವಿಸ್ಮಯವೇ ಸರಿ ಎಂದಿದ್ದಾರೆ.

ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ನಂತರ ಕಿವೀಸ್ ಆಲ್‌ರೌಂಡರ್ ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಹರಾಜಿನಲ್ಲಿ 1.8 ಕೋಟಿ ರೂ.ಗೆ ಚೆನ್ನೈ ತಂಡದ ಪಾಲಾಗಿದ್ದರು.

'ಎಂಎಲ್ ಧೋನಿಯಂತಹ ವ್ಯಕ್ತಿಯೊಂದಿಗೆ ಡ್ರೆಸ್ಸಿಂಗ್ ರೂಂ ಅನ್ನು ಹಂಚಿಕೊಳ್ಳಲು ಸಾಧ್ಯವಾಗಿರುವುದು ವಿಸ್ಮಯದಂತೆ ಭಾಸವಾಗುತ್ತಿದೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಅವರು ಏನು ಸಾಧಿಸಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ. ಅವರ ಮತ್ತೊಂದು ಗುಣವೆಂದರೆ, ಸಾಧನೆಯ ಹೊರತಾಗಿಯೂ ಅವರು ಕ್ಯಾಪ್ಟನ್ ಕೂಲ್ ಎಂದೇ ಗುರುತಿಸಿಕೊಳ್ಳುತ್ತಾರೆ. ಧೋನಿಯವರ ನಮ್ರತೆ ಹೆಚ್ಚು ಪ್ರಭಾವಿಸುತ್ತದೆ ಎಂದು ಚೆನ್ನೈನ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

'ಇದು ಕೇವಲ ಅವರು ಯಾವ ರೀತಿಯ ವ್ಯಕ್ತಿ ಎಂಬುದನ್ನು ತೋರಿಸುತ್ತದೆ ಮತ್ತು ಅದಕ್ಕಾಗಿಯೇ ಅವರು ರೋಲ್ ಮಾಡೆಲ್ ಆಗಿದ್ದಾರೆ. ಏಕೆಂದರೆ, ನೀವು ಕ್ರಿಕೆಟ್ ಮೈದಾನದಲ್ಲಿ ಏನು ಸಾಧಿಸಿದರೂ, ಮೈದಾನದಿಂದ ಹೊರಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಮೈದಾನದ ಹೊರಗೂ ಧೋನಿಯವರ ನಡವಳಿಕೆಯು ಆದರ್ಶಪ್ರಾಯವಾಗಿದೆ. ಧೋನಿಯವರ ನಾಯಕತ್ವದ ಗುಣಗಳು ಕ್ರಿಕೆಟ್ ಪಿಚ್‌ನ ಆಚೆಗೂ ವಿಸ್ತರಿಸುತ್ತವೆ ಮತ್ತು ತಂಡದ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.

ಮಾರ್ಚ್ 22ರಂದು ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಈ ಆವೃತ್ತಿಯ ಮೊದಲನೇ ಪಂದ್ಯದ ಮೂಲಕ 24 ವರ್ಷದ ರಚಿನ್ ರವೀಂದ್ರ ಸಿಎಸ್‌ಕೆಗೆ ಪದಾರ್ಪಣೆ ಮಾಡಿದರು. ಅಲ್ಲಿ ಅವರು ಕೇವಲ 15 ಎಸೆತಗಳಲ್ಲಿ 37 ರನ್ ಗಳಿಸಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ನ್ಯೂಜಿಲೆಂಡ್ ಪರ 20 ಟಿ20 ಪಂದ್ಯಗಳಲ್ಲಿ ಆಡಿರುವ ರವೀಂದ್ರ ಅವರು 133.75 ಸ್ಟ್ರೈಕ್ ರೇಟ್‌ನಲ್ಲಿ 214 ರನ್ ಗಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT