ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದ ಐಪಿಎಲ್ 2024 ನ 50 ನೇ ಪಂದ್ಯದಲ್ಲಿ ಹೈದರಾಬಾದ್ ತಂಡ ಆತಿಥೇಯ ರಾಜಸ್ಥಾನ್ ವಿರುದ್ಧ 1 ರನ್ ಗಳ ಪ್ರಯಾಸದ ಗೆಲುವು ದಾಖಲಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತ್ತು.
ಟ್ರಾವಿಸ್ ಹೆಡ್ 44 ಎಸೆತಗಳಲ್ಲಿ 58 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ (12 ರನ್) ಅನ್ಮೋಲ್ಪ್ರೀತ್ ಸಿಂಗ್ (5 ರನ್) ನಿತೀಶ್ ರೆಡ್ಡಿ (76 ರನ್) ಹೆನ್ರಿಕ್ ಕ್ಲಾಸೆನ್ (42) ರನ್ ಗಳಿಸಿದರು.
ರನ್ ಚೇಸಿಂಗ್ ನಲ್ಲಿ ಯಶಸ್ವಿ ಜೈಸ್ವಾಲ್ (67 ರನ್) ಗಳಿಸಿ ತಂಡಕ್ಕೆ ಉತ್ತಮ ಆರಂಭಿಕ ರನ್ ಗಳಿಸಲು ನೆರವಾದರು. ಆದರೆ ಜೋಸ್ ಬಟ್ಲರ್ (0) ಸಂಜು ಸ್ಯಾಮ್ಸನ್(0) ರನ್ ಗಳಿಸುವ ಮೂಲಕ ನಿರಾಶೆ ಮೂಡಿಸಿದರು. ರಿಯಾನ್ ಪರಾಗ್ (77 ರನ್) ಗಳಿಸಿ ಮತ್ತೆ ತಂಡದ ಗೆಲುವಿನ ಆಸೆ ಜೀವಂತವಾಗಿರಿಸಿದರು. ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ವೈಫಲ್ಯದಿಂದಾಗಿ, ಗೆಲುವಿನ ಸನಿಹದಲ್ಲಿದ್ದ ರಾಜಸ್ಥಾನ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 200 ರನ್ ಗಳಿಸುವ ಮೂಲಕ 1 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು.
ಹೈದರಾಬಾದ್ ತಂಡದ ಪರ 41 ರನ್ ಗಳನ್ನು ನೀಡಿ 3 ವಿಕೆಟ್ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.