ಅಹಮದಾಬಾದ್: ಸೋಮವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೆಕೆಆರ್ ವಿರುದ್ದದ ಪಂದ್ಯ ಮಳೆಯಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗುಜರಾತ್ ಟೈಟನ್ಸ್ ತಂಡ ಪ್ಲೇ ಆಫ್ ರೇಸ್ ನಿಂದ ಹೊರಬಿತ್ತು.
ಕಳೆದ ವರ್ಷದ ರನ್ನರ್ಸ್ ಅಪ್ ಮತ್ತು 2022 ರ ಚಾಂಪಿಯನ್ ಗುಜರಾತ್ ತಂಡ 13 ಪಂದ್ಯಗಳಿಂದ 11 ಅಂಕಗಳನ್ನು ಗಳಿಸುವ ಮೂಲಕ ಪ್ಲೇ-ಆಫ್ ರೇಸ್‌ನಿಂದ ಹೊರ ಬಿದ್ದಿತು. ಕೆಕೆಆರ್ 13 ಪಂದ್ಯಗಳಿಂದ 19 ಅಂಕಗಳೊಂದಿಗೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ.
ಸೋವಾರ ನಿಗದಿತ ಸಮಯದಲ್ಲಿ ರಾತ್ರಿ 7 ಗಂಟೆಗೆ ಟಾಸ್ ಆಗಲಿಲ್ಲ. ಸ್ವಲ್ಪ ಸಮಯ ಕಳೆದಂತೆ ನಿರಂತರ ಮಿಂಚಿನಿಂದಾಗಿ ತುಂತುರು ಮಳೆಯು ಹೆಚ್ಚಾಯಿತು. ಆದರೆ, ಮತ್ತೆ ಮತ್ತೆ ಮಳೆ ಬರುತ್ತಿದ್ದರಿಂದ ಕೊನೆಗೆ ರಾತ್ರಿ 10-56 ರ ಸುಮಾರಿಗೆ ಪಂದ್ಯವನ್ನು ರದ್ದುಗೊಳಿಸಿ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಯಿತು. ಒಟ್ಟು 13 ಪಂದ್ಯಗಳನ್ನಾಡಿ, 5 ಪಂದ್ಯ ಗೆದ್ದು 7ರಲ್ಲಿ ಸೋತಿರುವ ಗುಜರಾತ್ ಒಟ್ಟು 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೇ 16 ರಂದು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ದ ಕೊನೆಯ ಲೀಗ್ ಪಂದ್ಯವನ್ನು ಗಿಲ್ ಬಳಗ ಆಡಲಿದೆ.