ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದು ಪಂಜಾಬ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ.
ಈಗಾಗಲೇ ಪ್ಲೇ ಆಫ್ ಪ್ರವೇಶಿಸಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ ಪಟ್ಟಿಯಲ್ಲಿ 15 ಅಂಕಗಳಿಸಿದ್ದು, ಎರಡನೇ ಸ್ಥಾನ ಗಳಿಸುವ ತವಕದಲ್ಲಿದೆ. 10 ಅಂಕ ಗಳಿಸಿರುವ ಪಂಜಾಬ್ ತಂಡ ಪ್ಲೇ ಆಫ್ ಹಾದಿಯಿಂದ ಈಗಾಗಲೇ ಹೊರಬಿದ್ದಿದೆ.
ಜಿತೇಶ್ ಶರ್ಮಾಅವರು ಈ ಪಂದ್ಯಕ್ಕೆ ಹಂಗಾಮಿ ನಾಯಕರಾಗಿದ್ದು, ಸಮಧಾನಕರ ಜಯದೊಂದಿಗೆ ಟೂರ್ನಿಯಿಂದ ನಿರ್ಗಮಿಸುವ ಏಕೈಕ ಗುರಿ ಪಂಜಾಬ್ ತಂಡಕ್ಕಿದೆ.