ಹೈದರಾಬಾದ್: ಭಾನುವಾರ ಇಲ್ಲಿ ನಡೆದ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಲ್ಕು ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.
ಆರಂಭಿಕ ಆಟಗಾರರಾದ ಅಥರ್ವ ಟೈಡ್ 46, ಪ್ರಭಾಸಿಮ್ರಾನ್ ಸಿಂಗ್ 71, ರಿಲೆ ರೊಸೌ 49, ನಾಯಕ ಜೀತೇಶ್ ಶರ್ಮಾ 32 ಗಳಿಸಿದರು. ಪಂಜಾಬ್ ಕಿಂಗ್ಸ್ ನೀಡಿದ 216 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಸನ್ ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 66, ರಾಹುಲ್ ತ್ರಿಪಾಠಿ 33, ನಿತೀಶ್ ಕುಮಾರ್ ರೆಡ್ಡಿ 37, ಹೆನ್ರಿಕ್ ಕ್ಲಾಸೆನ್ 42, ಅಬ್ದುಲ್ ಶಮದ್ 11 ರನ್ ಗಳಿಸುವುದರೊಂದಿಗೆ ಸನ್ ರೈಸರ್ಸ್ ಗೆಲುವು ನಗೆ ಬೀರಿತು.