ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಾ 
ಕ್ರಿಕೆಟ್

IPL 2024: ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನಕ್ಕೆ ಹಾರ್ದಿಕ್ ಅಲ್ಲ, ರೋಹಿತ್ ಶರ್ಮಾ ಕಾರಣ? ಚರ್ಚೆ ಹುಟ್ಟುಹಾಕಿದ Harbhajan Singh ಹೇಳಿಕೆ!

ಹಾಲಿ ಐಪಿಎಲ್ ಟೂರ್ನಿ ಮುಕ್ತಾಯದ ಹಂತದಲ್ಲಿದ್ದು, ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅಲ್ಲ.. ಬದಲಿಗೆ ರೋಹಿತ್ ಶರ್ಮಾ ಸೇರಿದಂತೆ ತಂಡದ ಹಿರಿಯ ಆಟಗಾರರು ಕಾರಣ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಮುಂಬೈ: ಹಾಲಿ ಐಪಿಎಲ್ ಟೂರ್ನಿ ಮುಕ್ತಾಯದ ಹಂತದಲ್ಲಿದ್ದು, ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಅಲ್ಲ.. ಬದಲಿಗೆ ರೋಹಿತ್ ಶರ್ಮಾ ಸೇರಿದಂತೆ ತಂಡದ ಹಿರಿಯ ಆಟಗಾರರು ಕಾರಣ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಐಪಿಎಲ್ 2024 ಕ್ಕೆ ಮುಂಚಿತವಾಗಿ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಿಂದ ಮುಂಬೈ ಇಂಡಿಯನ್ಸ್ ದಾಖಲೆಯ ಒಪ್ಪಂದಕ್ಕೆ ಖರೀದಿಸಿತ್ತು. ನಂತರ, ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಮುಂಬೈ ನಾಯಕನನ್ನಾಗಿ ಮಾಡಲಾಯಿತು. ಈ ವೇಳೆ ಅಭಿಮಾನಿಗಳಿಂದ ಕೆಟ್ಟ ಪ್ರತಿಕ್ರಿಯೆ ವ್ಯಕ್ತಗೊಂಡಿತು.

ಕ್ರೀಡಾ ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಹರ್ಭಜನ್ ಸಿಂಗ್, 'ಮುಂಬೈ ಇಂಡಿಯನ್ಸ್​ ದೊಡ್ಡ ಬಳಗವನ್ನು ಹೊಂದಿದೆ. ನಾನು ಆ ತಂಡಕ್ಕೆ ಆಡಿದ್ದೇನೆ. ಮ್ಯಾನೇಜ್ಮೆಂಟ್ ಉತ್ತಮವಾಗಿದೆ. ತಂಡವನ್ನು ಉತ್ತಮವಾಗಿ ನಡೆಸುತ್ತದೆ. ಆದರೆ ಈ ನಿರ್ಧಾರವು ಹಿನ್ನಡೆಯನ್ನುಂಟು ಮಾಡಿದೆ. ಬಹುಶಃ ಭವಿಷ್ಯವನ್ನು ಹುಡುಕುವ ಆಲೋಚನೆ ಇತ್ತು. ಅವರು ಒಗ್ಗಟ್ಟಾಗಿ ಕಾಣದ ಕಾರಣ ಅದು ತಂಡದೊಂದಿಗೆ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ತೋರುತ್ತದೆ. ಇಷ್ಟು ದೊಡ್ಡ ತಂಡವಾಗಿದ್ದು ನನ್ನ ಹಳೆಯ ತಂಡವು ಇಂತಹ ಕಳಪೆ ಫಲಿತಾಂಶಗಳನ್ನು ಎದುರಿಸುತ್ತಿರುವುದನ್ನು ನೋಡಿ ನನಗೆ ನೋವಾಗುತ್ತದೆ ಎಂದು ಹೇಳಿದ್ದಾರೆ.

ಅಂತೆಯೇ ಬಹುಶಃ ನಿರ್ಧಾರದ ಸಮಯ ಸರಿಯಾಗಿರಲಿಲ್ಲ. ಒಂದು ವರ್ಷದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಉತ್ತಮವಾಗುತ್ತಿತ್ತು. ಇದು ಹಾರ್ದಿಕ್ ಅವರ ತಪ್ಪಲ್ಲ, ಅವರು ಜಿಟಿಯಲ್ಲಿ ನಿಜವಾಗಿಯೂ ಉತ್ತಮವಾಗಿ ನಾಯಕರಾಗಿದ್ದರು. ನಾಯಕ ಯಾರೇ ಆಗಿರಲಿ ಆಟಗಾರರನ್ನು ಒಗ್ಗಟ್ಟಾಗಿಡುವುದು ಹಿರಿಯ ಆಟಗಾರರ ಕರ್ತವ್ಯ. ಕ್ಯಾಪ್ಟನ್ ಗಳು ಬರುತ್ತಾರೆ ಮತ್ತು ಹೋಗುತ್ತಾರೆ. ಆದರೆ ಅವರು ಒಂದು ತಂಡದಂತೆ ಆಡಲಿಲ್ಲ ಎಂದು ಭಜ್ಜಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

ಜ್ವಾಲಾಮುಖಿ ಕುಳಿಗೆ ಬಿದ್ದ 'ಯೆಮೆನ್‌ನ ಸ್ಪೈಡರ್-ಮ್ಯಾನ್': ದುರಂತ ಕ್ಯಾಮೆರಾದಲ್ಲಿ ಸೆರೆ! Video

Women's T20 World Cup 2026: ಪ್ರೇಕ್ಷಕರ ಸಂಖ್ಯೆಯಲ್ಲೂ ಐತಿಹಾಸಿಕ ದಾಖಲೆ ಬರೆದ India vs Pakistan ಪಂದ್ಯ!

ಉಡುಪಿ: ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಮುಖೇಶ್ ಅಂಬಾನಿ ಪುತ್ರ ಅನಂತ್ ಭೇಟಿ

Women's T20 World Cup 2026: ಇತಿಹಾಸ ಬರೆದ Deepti Sharma; ಪಾಕಿಸ್ತಾನ ವಿರುದ್ಧ ಭಾರತಕ್ಕೆ 64 ರನ್ ಭರ್ಜರಿ ಜಯ

SCROLL FOR NEXT