ಹೈದರಾಬಾದ್: ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಉದಯೋನ್ಮುಖ ಆಟಗಾರ ರವಿ ಬಿಷ್ಣೋಯ್ ಯಜುವೇಂದ್ರ ಚಹಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದು, ಅಪರೂಪದ ದಾಖಲೆ ಪಟ್ಟಿಗೆ ಮಯಾಂಕ್ ಯಾದವ್ ಸೇರ್ಪಡೆಯಾಗಿದ್ದಾರೆ.
ಹೌದು.. ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಪರ 3 ವಿಕೆಟ್ ಕಬಳಿಸಿದ ಉದಯೋನ್ಮುಖ ಆಟಗಾರ ರವಿ ಬಿಷ್ಣೋಯ್ ಟಿ20ಯಲ್ಲಿ 50 ವಿಕೆಟ್ ಗಳಿಸಿದ ಸಾಧನೆ ಮಾಡಿದರು.
ಅಂತೆಯೇ ಇದೇ ಪಂದ್ಯದ ಮೂಲಕ ಭಾರತದ ವೇಗದ 50 ವಿಕೆಟ್ ಸಾಧನೆ ಮಾಡಿದ 3ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಇದಕ್ಕೂ ಮೊದಲು ಭಾರತದ ಕುಲದೀಪ್ ಯಾದವ್ 30 ಪಂದ್ಯಗಳಲ್ಲಿ 50 ವಿಕೆಟ್ ಸಾಧನೆ ಮಾಡಿದ್ದರೆ, ಅರ್ಶ್ ದೀಪ್ ಸಿಂಗ್ 33 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ರವಿಬಿಷ್ಣೋಯ್ ಕೂಡ 33 ಪಂದ್ಯಗಳಲ್ಲಿ 50 ವಿಕೆಟ್ ಪಡೆದ ಸಾಧನೆ ಮಾಡಿದರು.
Fastest to 50 T20I wickets for India (by matches taken)
30 - Kuldeep Yadav
33 - Arshdeep Singh
33 - Ravi Bishnoi
34 - Yuzvendra Chahal
41 - Jasprit Bumrah
50 ವಿಕೆಟ್ ಪಡೆದ ಅತಿ ಕಿರಿಯ ಭಾರತದ ಬೌಲರ್
ಇನ್ನು ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ 50 ವಿಕೆಟ್ ಪಡೆದ ಅತಿ ಕಿರಿಯ ಆಟಗಾರ ಎಂಬ ಕೀರ್ತಿಗೂ ರವಿ ಬಿಷ್ಣೋಯ್ ಪಾತ್ರರಾಗಿದ್ದಾರೆ. ನಿನ್ನೆ ರವಿ ಬಿಷ್ಣೋಯ್ ಅವರ ವಯಸ್ಸು 24 ವರ್ಷ 37 ದಿನಗಳಾಗಿವೆ. ಇದಕ್ಕೂ ಮೊದಲು ಈ ಸಾಧನೆ ಭಾರತ ಅರ್ಶ್ ದೀಪ್ ಸಿಂಗ್ ಹೆಸರಲ್ಲಿತ್ತು. ಆರ್ಶ್ ದೀಪ್ 50 ವಿಕೆಟ್ ಸಾಧನೆ ಮಾಡಿದಾಗ ಅವರ ವಯಸ್ಸು 24 ವರ್ಷ 196 ದಿನಗಳಾಗಿದ್ದವು.
Youngest to 50 T20I wickets for India
24y 37d - Ravi Bishnoi
24y 196d - Arshdeep Singh
25y 80d - Jasprit Bumrah
28y 237d - Kuldeep Yadav
28y 295d - Hardik Pandya
ಮೊದಲ ಎಸೆತದಲ್ಲೇ ವಿಕೆಟ್; ಎಲೈಟ್ ಗ್ರೂಪ್ ಸೇರ್ಪಡೆಯಾದ ಮಯಾಂಕ್ ಯಾದವ್
ಇನ್ನು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಸಾಧಕರ ಪಟ್ಟಿಗೆ ಇದೀಗ ಮಯಾಂಕ್ ಯಾದವ್ ಸೇರ್ಪಡೆಯಾಗಿದ್ದಾರೆ. ನಿನ್ನೆ ತಾವು ಎಸೆದ ಮೊದಲ ಎಸೆತದಲ್ಲೇ ಬಾಂಗ್ಲಾದೇಶದ ಪರ್ವೇಜ್ ಹೊಸೇನ್ ಎಮಾನ್ ರನ್ನು ಔಟ್ ಮಾಡಿದ್ದರು.
ಆ ಮೂಲಕ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಭಾರತದ ಬೌಲರ್ ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಭುವನೇಶ್ವರ್ ಕುಮಾರ್ (3 ಬಾರಿ), ಹಾರ್ದಿಕ್ ಪಾಂಡ್ಯಾ, ಆರ್ಶ್ ದೀಪ್ ಸಿಂಗ್ ತಲಾ ಒಂದು ಬಾರಿ ಈ ಸಾಧನೆ ಮಾಡಿದ್ದಾರೆ.
India bowlers bagging a wicket on the first ball of a T20I innings
Bhuvneshwar Kumar (thrice)
Hardik Pandya
Arshdeep Singh
Mayank Yadav