ಭಾರತ ಕಳಪೆ ಬ್ಯಾಟಿಂಗ್ 
ಕ್ರಿಕೆಟ್

1st test: ಭಾರತ ತಂಡದ 5 ಬ್ಯಾಟರ್ ಗಳು ಡಕೌಟ್, ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ದಾಖಲೆ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 40 ರನ್ ಗಳಿಗೆ ತನ್ನ 9 ವಿಕೆಟ್ ಕಳೆದುಕೊಂಡಿದೆ.

ಬೆಂಗಳೂರು: ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ ತಂಡ ಹೀನಾಯ ದಾಖಲೆಗೆ ಸಾಕ್ಷಿಯಾಗಿದ್ದು, ಭಾರತ ತಂಡದ 5 ಬ್ಯಾಟರ್ ಗಳು ಡಕೌಟ್ ಆಗಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕೇವಲ 40 ರನ್ ಗಳಿಗೆ ತನ್ನ 9 ವಿಕೆಟ್ ಕಳೆದುಕೊಂಡಿದೆ.

ಈ ಪೈಕಿ ಭಾರತದ ಬರೊಬ್ಬರಿ 5 ಬ್ಯಾಟ್ಸ್ ಮನ್ ಗಳು ಶೂನ್ಯ ಸುತ್ತಿದ್ದು, ಇಬ್ಬರು ಆಟಗಾರರು ಒಂದಂಕಿಗೆ ಔಟಾಗಿದ್ದಾರೆ.

ಆರಂಭಿಕರಾದ ಯಶಸ್ವಿ ಜೈಸ್ವಾಲ್ (13 ರನ್)ಸ ರೋಹಿತ್ ಶರ್ಮಾ (2 ರನ್), ವಿರಾಟ್ ಕೊಹ್ಲಿ (ಶೂನ್ಯ), ಸರ್ಫರಾಜ್ ಖಾನ್ (ಶೂನ್ಯ), ಕೆಎಲ್ ರಾಹುಲ್ (ಶೂನ್ಯ), ರವೀಂದ್ರ ಜಡೇಜಾ (ಶೂನ್ಯ), ರಿಷಬ್ ಪಂತ್ (20 ರನ್), ಆರ್ ಅಶ್ವಿನ್ (ಶೂನ್ಯ) ಮತ್ತು ಜಸ್ ಪ್ರೀತ್ ಬುಮ್ರಾ (1 ರನ್) ವಿಕೆಟ್ ಕಳೆದುಕೊಂಡು ಭಾರತ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

Most ducks in a Test innings for India

  • 6 vs ENG, Manchester, 2014 (1st inns)

  • 6 vs SA, Cape Town, 2024 (2nd inns)

  • 5 vs AUS, Adelaide, 1948 (3rd inns)

  • 5 vs ENG, Leeds, 1952 (3rd inns)

  • 5 vs NZ, Mohali, 1999 (1st inns)

  • 5 vs NZ, Bengaluru, 2024 (1st inns)*

ಕಳಪೆ ದಾಖಲೆ

ಇನ್ನು ಭಾರತ ತಂಡದ ಈ ಕಳಪೆ ಬ್ಯಾಟಿಂಗ್ ನಿಂದಾಗಿ ಅನಗತ್ಯ ದಾಖಲೆ ಸೃಷ್ಟಿಯಾಗಿದ್ದು, ತವರಿನ ಪಂದ್ಯವೊಂದರಲ್ಲಿ ಭಾರತದ 7 ಟಾಪ್ ಬ್ಯಾಟರ್ ಗಳ ಪೈಕಿ 5 ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿರುವುದು ಇದೇ ಮೊದಲಾಗಿದೆ.

ಈ ಹಿಂದೆ 1952ರಲ್ಲಿ 3ನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 4 ಬ್ಯಾಟರ್ ಗಳು ಶೂನ್ಯ ಸುತ್ತಿದ್ದರು. ಬಳಿಕ 2014ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಇಂತಹುದೇ ದಾಖಲೆ ಸೃಷ್ಟಿಯಾಗಿತ್ತು. ಇದೀಗ ಈ ದಾಖಲೆಯನ್ನೂ ಮೀರಿಸುವಂತೆ 5 ಬ್ಯಾಟರ್ ಗಳು ಶೂನ್ಯ ಸುತ್ತಿದ್ದಾರೆ.

STATS: This is the first time 4 of the top 7 Indian batters have got out for a duck in a home Test.

4 of the top 7 Indian batters scoring ducks in a Test innings

  • vs ENG, Leeds, 1952 (3rd inns)

  • vs ENG, Manchester, 2014 (1st inns)

  • vs NZ, Bengaluru, 2024 (1st inns)*

34 ರನ್ ಅಂತರದಲ್ಲಿ 6 ವಿಕೆಟ್ ಪತನ

ಅಂತೆಯೇ 1969ರಿಂದೀಚೆಗೆ ಭಾರತ ತಂಡ ಇಂತಹ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿರಲಿಲ್ಲ. ಇಂದು ಕೇವಲ 34 ರನ್ ಗಳ ಅಂತರದಲ್ಲಿ ತನ್ನ 6 ವಿಕೆಟ್ ಕಳೆದುಕೊಂಡಿದ್ದು, ಈ ಹಿಂದೆ ಇದೇ ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ 27 ರನ್ ಗೆ 6 ವಿಕೆಟ್ ಕಳೆದುಕೊಂಡಿತ್ತು.

34 runs is the lowest at the fall of the 6th wicket for India at home since 1969. The previous lowest was 27 runs against New Zealand at Hyderabad.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT