ವಿರಾಟ್ ಕೊಹ್ಲಿ 
ಕ್ರಿಕೆಟ್

IPL 2025: ವಿರಾಟ್ ಕೊಹ್ಲಿಗೆ ಮತ್ತೆ RCB ನಾಯಕತ್ವ? ಫ್ರಾಂಚೈಸಿ ತಂತ್ರವೇನು?

2008ರಲ್ಲಿ IPL ಪ್ರಾರಂಭವಾದಾಗಿನಿಂದ RCB ಮೂರು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ ಪ್ರತಿ ಬಾರಿಯೂ ರನ್ನರ್ಸ್-ಅಪ್ ಆಗಿತ್ತು. ಕೊಹ್ಲಿ 2013 ರಿಂದ 2021ರವರೆಗೆ ಆರ್‌ಸಿಬಿಯನ್ನು ಮುನ್ನಡೆಸಿದ್ದು ನಂತರ ನಾಯಕತ್ವದಿಂದ ಕೆಳಗಿಳಿದರು.

ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಮ್ಮ ತಂಡ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರನ್ನು ಮುಂದಿನ ಋತುವಿಗೆ ಮತ್ತೊಮ್ಮೆ ನಾಯಕನಾಗಿ ಪುನರ್ ಆಯ್ಕೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಕೊಹ್ಲಿ ಐಪಿಎಲ್ 2022ರ ಮೊದಲು ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ನಂತರ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು.

2008ರಲ್ಲಿ IPL ಪ್ರಾರಂಭವಾದಾಗಿನಿಂದ RCB ಮೂರು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ ಪ್ರತಿ ಬಾರಿಯೂ ರನ್ನರ್ಸ್-ಅಪ್ ಆಗಿತ್ತು. ಕೊಹ್ಲಿ 2013 ರಿಂದ 2021ರವರೆಗೆ ಆರ್‌ಸಿಬಿಯನ್ನು ಮುನ್ನಡೆಸಿದ್ದು ನಂತರ ನಾಯಕತ್ವದಿಂದ ಕೆಳಗಿಳಿದರು.

ಇನ್ನೂ ಅಧಿಕೃತ ದೃಢೀಕರಣವಿಲ್ಲವಾದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕನಾಗಿ ವಿರಾಟ್ ಕೊಹ್ಲಿ ಮರಳಲು ವೇದಿಕೆ ಸಿದ್ಧವಾಗಿದೆ ಎಂದು ತೋರುತ್ತದೆ. ಈ ಸುದ್ದಿಯನ್ನು ಆರಂಭದಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಹರಡಲಾಗಿದ್ದರೂ, ಟೈಮ್ಸ್ ಆಫ್ ಇಂಡಿಯಾ (TOI) ವರದಿಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅವರು ಪ್ರತಿನಿಧಿಸುವ ಏಕೈಕ ಫ್ರಾಂಚೈಸಿಯ ಜವಾಬ್ದಾರಿಯನ್ನು ಕೊಹ್ಲಿ ವಹಿಸಿಕೊಳ್ಳುತ್ತಾರೆ.

ನಾಯಕತ್ವಕ್ಕೆ ಕೊಹ್ಲಿ ಹೊಸಬರೇನಲ್ಲ. ಈ ಹಿಂದೆ ಆರ್‌ಸಿಬಿ ಮತ್ತು ಟೀಂ ಇಂಡಿಯಾ ನಾಯಕರಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಕೊಹ್ಲಿ ಈಗಾಗಲೇ ಮ್ಯಾನೇಜ್‌ಮೆಂಟ್‌ನೊಂದಿಗೆ ಚರ್ಚೆ ನಡೆಸಿದ್ದಾರೆ. ತಂಡಕ್ಕೆ ಮತ್ತೆ ನಾಯಕನಾಗಲು ಬಯಸುತ್ತಿದ್ದಾರೆ ಎಂದು ಮಾಧ್ಯಮ ವರದಿ ಹೇಳುತ್ತದೆ. ಅಲ್ಲಿ ನಾಯಕತ್ವದ ಕೊರತೆ ಇರಬಹುದು. ಕಳೆದ ಕೆಲವು ಋತುಗಳಲ್ಲಿ ಫಾಫ್ ಡುಪ್ಲೆಸಿಸ್ ತಂಡವನ್ನು ಮುನ್ನಡೆಸಿದ್ದರು. ಕೊಹ್ಲಿ ಇನ್ನು ಮುಂದೆ ತಂಡವನ್ನು ಮುನ್ನಡೆಸುವುದಿಲ್ಲ ಎಂದು ನಿರ್ಧರಿಸಿದರು. ಆದರೆ ಫಾಫ್ ಡುಪ್ಲೆಸಿಸ್ ಅವರಿಗೆ 40 ವರ್ಷ ವಯಸ್ಸಾಗಿದ್ದು ಅವರ ನಾಯಕತ್ವದ ಪರ ಯಾರಿಗೂ ಒಲವಿಲ್ಲ. ಅದಕ್ಕಾಗಿಯೇ ಕೊಹ್ಲಿ ಮತ್ತೆ ನಾಯಕನಾಗುತ್ತಾನೆ ಎಂಬು ವಿಚಾರ ನಂಬಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT