ಜಹೀರ್ ಖಾನ್ 
ಕ್ರಿಕೆಟ್

'ಅವರೇ ಪಿಚ್ ಸಿದ್ಧ ಮಾಡಿದಂತಿದೆ': ಪಂಜಾಬ್ ವಿರುದ್ಧದ ಪಂದ್ಯದ ಕುರಿತು LSG ಮೆಂಟರ್ Zaheer Khan ತೀವ್ರ ಅಸಮಾಧಾನ!

ಇದು ತವರು ಪಂದ್ಯ ಎಂದು ಪರಿಗಣಿಸಿ ಮತ್ತು ಐಪಿಎಲ್‌ನಲ್ಲಿ ತಂಡಗಳು ಸ್ವಲ್ಪ ತವರು ಪ್ರಯೋಜನವನ್ನು ಪಡೆಯುವತ್ತ ಹೇಗೆ ನೋಡಿವೆ ಎಂಬುದನ್ನು ನೀವು ನೋಡಿದ್ದೀರಿ..

ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಕುರಿತು LSG ಮೆಂಟರ್ ಜಹೀರ್ ಖಾನ್ ಅಮಾಧಾನದ ಮಾತುಗಳನ್ನಾಡಿದ್ದು, ಪ್ರಮುಖವಾಗಿ ಪಿಚ್ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ಐಪಿಎಲ್‌ನ ಮತ್ತೊಂದು ತವರು ತಂಡವು ತನ್ನದೇ ಮೈದಾನದಲ್ಲಿ ಮುಖಭಂಗ ಅನುಭವಿಸಿದ್ದು, ಪರಿಸ್ಥಿತಿಯಿಂದ ತೀವ್ರ ನಿರಾಶೆಗೊಂಡಿದೆ. ನಿನ್ನೆ ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಲ್ ಎಸ್ ಜಿ ವಿರುದ್ಧ ಪಂಜಾಬ್ ಕಿಂಗ್ಸ್ 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 16.2 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ 8 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು.

ಜಹೀರ್ ಖಾನ್ ಅಸಮಾಧಾನ

ಲಕ್ನೋ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ LSG ಮೆಂಟರ್ ಜಹೀರ್ ಖಾನ್, 'ಪಂಜಾಬ್ ಕ್ಯುರೇಟರ್ ಪಿಚ್ ಮಾಡಿದಂತೆ ಭಾಸವಾಯಿತು" ಎಂದು ಹೇಳಿದ್ದಾರೆ. 'ಎದುರಾಳಿಗಳು ಪಿಚ್ ಸಿದ್ಧಪಡಿಸಲು ತಮ್ಮದೇ ಆದ ಕ್ಯುರೇಟರ್ ಅನ್ನು ಕರೆತಂದಂತೆ ಭಾಸವಾಗುತ್ತಿದೆ. ಇಲ್ಲಿ ನನಗೆ ಸ್ವಲ್ಪ ನಿರಾಶಾದಾಯಕವಾಗಿತ್ತು.

ಇದು ತವರು ಪಂದ್ಯ ಎಂದು ಪರಿಗಣಿಸಿ ಮತ್ತು ಐಪಿಎಲ್‌ನಲ್ಲಿ ತಂಡಗಳು ಸ್ವಲ್ಪ ತವರು ಪ್ರಯೋಜನವನ್ನು ಪಡೆಯುವತ್ತ ಹೇಗೆ ನೋಡಿವೆ ಎಂಬುದನ್ನು ನೀವು ನೋಡಿದ್ದೀರಿ, ಆ ದೃಷ್ಟಿಕೋನದಿಂದ ಕ್ಯುರೇಟರ್ ನಿಜವಾಗಿಯೂ ಇದು ತವರು ಪಂದ್ಯ ಎಂದು ಯೋಚಿಸುತ್ತಿಲ್ಲ. ಬಹುಶಃ ಅದು ಪಂಜಾಬ್ ಕ್ಯುರೇಟರ್ ಇಲ್ಲಿ ಇದ್ದಂತೆ ಕಾಣುತ್ತಿದೆ ಎಂದು ನಾನು ಭಾವಿಸುತ್ತೇನೆ" ಎಂದು ಜಹೀರ್ ಖಾನ್ ಆರೋಪಿಸಿದ್ದಾರೆ.

"ಇದು ನನಗೆ ಹೊಸ ಸೆಟಪ್, ಆದರೆ ಆ ವಿಷಯಕ್ಕೆ ಬಂದಾಗ ಇದು ಮೊದಲ ಮತ್ತು ಕೊನೆಯ ಪಂದ್ಯ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ಲಕ್ನೋ ಅಭಿಮಾನಿಗಳನ್ನು ಸಹ ನಿರಾಶೆಗೊಳಿಸುತ್ತಿದ್ದೀರಿ. ಅವರು ಇಲ್ಲಿ ಮೊದಲ ತವರಿನ ಪಂದ್ಯವನ್ನು ಗೆಲ್ಲುವ ಹಲವು ನಿರೀಕ್ಷೆಗಳನ್ನು ಹೊಂದಿದ್ದರು. ಒಂದು ತಂಡವಾಗಿ, ನಮಗೆ ವಿಶ್ವಾಸವಿದೆ. ನಾವು ಪಂದ್ಯವನ್ನು ಸೋತಿದ್ದೇವೆ ಎಂದು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ತವರಿನ ಪಂದ್ಯದಲ್ಲಿ ಆ ಪರಿಣಾಮ ಬೀರಲು ನಾವು ಏನು ಬೇಕಾದರೂ ಮಾಡಬೇಕು.

ನಾವು ಇನ್ನೂ ಆರು ಪಂದ್ಯಗಳನ್ನು ಆಡಬೇಕಾಗಿದೆ, ಮತ್ತು ಈ ತಂಡವು ಇಲ್ಲಿಯವರೆಗೆ ಋತುವಿನಲ್ಲಿ ತನ್ನ ಸಾಮರ್ಥ್ಯ ತೋರಿಸಿದೆ, ಯಾವುದೇ ಸಣ್ಣ ಕ್ರಿಕೆಟ್ ಆಡಿದರೂ, ನಾವು ಸರಿಯಾದ ದೃಷ್ಟಿಕೋನ ಮತ್ತು ಐಪಿಎಲ್ ಅನ್ನು ನೋಡುವ ಮನಸ್ಥಿತಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT