ರಶೀದ್ ಲತೀಫ್ 
ಕ್ರಿಕೆಟ್

IPL ಬ್ಯಾನ್ ಮುಂದುವರಿಕೆ; ಪಾಕಿಸ್ತಾನ ಕ್ರಿಕೆಟ್ ಮೇಲೆ ಪರಿಣಾಮ: ರಶೀದ್ ಲತೀಫ್

2008 ರ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲಿ 12 ಪಾಕ್ ಆಟಗಾರರು ಲೀಗ್‌ನಲ್ಲಿ ಆಡಿದ್ದರು. ತದನಂತರ ನಡೆದ ಮುಂಬೈ ದಾಳಿಯ ನಂತರ ಪಾಕಿಸ್ತಾನಿ ಆಟಗಾರರು ಐಪಿಎಲ್ ನಲ್ಲಿ ಆಡದಂತೆ ಬಿಸಿಸಿಐ ನಿಷೇಧಿಸಿತು.

ನವದೆಹಲಿ: ಪಾಕಿಸ್ತಾನ ಆಟಗಾರರು ಐಪಿಎಲ್ ನಲ್ಲಿ ಆಡುತ್ತಿಲ್ಲ. ಇದೇ ಕಾರಣದಿಂದ ಪಾಕ್ ತಂಡ ಇತ್ತೀಚಿಗೆ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಆಡುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಹೇಳಿದ್ದಾರೆ.

2008 ರ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲಿ 12 ಪಾಕ್ ಆಟಗಾರರು ಲೀಗ್‌ನಲ್ಲಿ ಆಡಿದ್ದರು. ತದನಂತರ ನಡೆದ ಮುಂಬೈ ದಾಳಿಯ ನಂತರ ಪಾಕಿಸ್ತಾನಿ ಆಟಗಾರರು ಐಪಿಎಲ್ ನಲ್ಲಿ ಆಡದಂತೆ ಬಿಸಿಸಿಐ ನಿಷೇಧಿಸಿತು.

ಈ ಕುರಿತು ಸುದ್ದಿಸಂಸ್ಥೆ IANS ಜೊತೆಗೆ ಮಾತನಾಡಿದ ಲತೀಫ್, “ನಿಸ್ಸಂಶಯವಾಗಿ, ನಾವು ಐಪಿಎಲ್ ಕಳೆದುಕೊಳ್ಳುತ್ತಿದ್ದೇವೆ. ನಾವು ಆಡುತ್ತಿದ್ದರೆ ಅದು ಆಸಕ್ತಿ ಮತ್ತು ವ್ಯವಹಾರವನ್ನು ಹೆಚ್ಚಿಸುತಿತ್ತು. ನಮ್ಮ ಆಟಗಾರರು ಆಡುತ್ತಿದ್ದರೆ ಕೆಲವು ಪ್ರಸಾರಕರು ಖಂಡಿತವಾಗಿಯೂ ಅದನ್ನು ಇಲ್ಲಿ ತೋರಿಸುತ್ತಾರೆ ಎಂದರು

2008ರಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ ಟ್ರೋಫಿ ಗೆದ್ದಾಗ ಪಾಕಿಸ್ತಾನದ ಸೋಹೈಲ್ ತನ್ವೀರ್, ಕಮ್ರಾನ್ ಅಕ್ಮಲ್ ಮತ್ತು ಯೂನಿಸ್ ಖಾನ್ ಇದ್ದರು.

ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನದಂತಹ ದೇಶಗಳ ಸ್ಥಿರ ಪ್ರದರ್ಶನ ಏರಿಕೆಯೊಂದಿಗೆ ವಿವರಿಸಿದ ಲತೀಫ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದ ಇತರ ದೇಶಗಳನ್ನು ನೋಡಿ, ಈ ದೇಶಗಳ ಆಟಗಾರರು ಐಪಿಎಲ್‌ಗೆ ಬಂದು ವಿಶ್ವದ ಅತ್ಯುತ್ತಮ ಆಟಗಾರರ ವಿರುದ್ಧ ಆಡಿದ್ದಾರೆ. ಪ್ಯಾಟ್ ಕಮ್ಮಿನ್ಸ್, ಜೋಫ್ರಾ ಆರ್ಚರ್ ಮತ್ತು ಕಗಿಸೊ ರಬಾಡ ಅವರಂತಹ ವಿಶ್ವದ ಅತ್ಯುತ್ತಮ ಬೌಲರ್ ಗಳಿದ್ದು, ಸ್ಪರ್ಧೆಯು ಹೆಚ್ಚಾಗಿರುತ್ತದೆ. ಆದ್ದರಿಂದ ಅತ್ಯುತ್ತಮ ಸೌಕರ್ಯಗಳೊಂದಿಗೆ ಬಹಳಷ್ಟು ಕಲಿಯಬಹುದು ಎಂದರು.

ಐಪಿಎಲ್ ಮೂಲಕವೇ ಅಪ್ಘಾನಸ್ತಾನ ಉದಯೋನ್ಮುಖ ತಂಡವಾಗಿ ಹೊರಹೊಮ್ಮಿದೆ. ರಶೀದ್ ಖಾನ್ ನಂತರ ನೂರ್ ಅಹ್ಮದ್, ಅಜ್ಮತುಲ್ಲಾ ಒಮರ್ಜಾಯ್ ಮತ್ತು ಫಜಲಕ್ ಫಾರೂಕಿ ಇದ್ದಾರೆ. ಅವರು ರಾಷ್ಟ್ರ ಮಟ್ಟದಲ್ಲಿ ತ್ವರಿತ ಪರಿಣಾಮ ಬೀರಿದ್ದಾರೆ" ಎಂದು ಲತೀಫ್ ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT