ರೋಹಿತ್ ಶರ್ಮಾ ಮತ್ತಿತರರು 
ಕ್ರಿಕೆಟ್

IPL 2025, DC vs MI: ರಾಹುಲ್, ಅಕ್ಷರ್ ಪಟೇಲ್ ಬ್ಯಾಟಿಂಗ್ ವೈಫಲ್ಯ; ಮುಂಬೈ ಇಂಡಿಯನ್ಸ್ 12 ರನ್ ಗೆಲುವು!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಮತ್ತೆ ವೈಫಲ್ಯಕ್ಕೊಳಗಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ 18 ರನ್ ಗಳಿಸಿದಾಗ ಎಲ್ ಬಿಡಬ್ಲ್ಯೂಗೆ ಬಲಿಯಾದರು.

ನವದೆಹಲಿ: ರಾಷ್ಟ್ರ ರಾಜಧಾನಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ 29 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ್ ಗಳಿಂದ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತು

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಮತ್ತೆ ವೈಫಲ್ಯಕ್ಕೊಳಗಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ 18 ರನ್ ಗಳಿಸಿದಾಗ ಎಲ್ ಬಿಡಬ್ಲ್ಯೂಗೆ ಬಲಿಯಾದರು. ರಿಯಾನ್ ರಿಕಲ್ಟನ್ 41 ರನ್ ಗಳಿಸಿ ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ನಂತರ ಬಂದ ಸೂರ್ಯ ಕುಮಾರ್ ಯಾದರ್ 40, ತಿಲಕ್ ವರ್ಮಾ 59 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಸ್ವಲ್ಪ ಹಿಗ್ಗಿಸಿದರು.

ನಮನ್ ಧಿರ್ 38 ರನ್ ಗಳಿಸುವುದರೊಂದಿಗೆ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 205 ರನ್ ಕಲೆಹಾಕಿತು. ಇನ್ನೂ ಡೆಲ್ಲಿ ಕ್ಯಾಪಿಟಲ್ಸ್ ಪರ ವಿಪ್ರಾಜ್ ನಿಗಮ್ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ 1 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ ನೀಡಿದ 206 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಜೇಕ್ ಫ್ರೇಸರ್ ಎಂಸಿ ಗುರ್ಕ್, ಚಹಾರ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ, ಯಾವುದೇ ರನ್ ಗಳಿಸಿದೆ ಶೂನ್ಯಕ್ಕೆ ಔಟಾದರು. ಬಳಿಕ ಅಭಿಷೇಕ್ ಪೊರೆಲ್ 33, ಕರುಣ್ ನಾಯರ್ 89 ರನ್ ಗಳಿಸಿದರೆ, ಕೆಎಲ್ ರಾಹುಲ್ ಕೇವಲ 15 ರನ್ ಗಳಿಸಿ ಕ್ಯಾಚ್ ನೀಡಿ ನಿರ್ಗಮಿಸಿದರು.

ಅಕ್ಷರ್ ಪಟೇಲ್ 9 ರನ್ ಗಳಿಸಿ ಬೂಮ್ರಾ ಬೌಲಿಂಗ್ ನಲ್ಲಿ ಔಟಾದರು. ಅಶುಷೋಶ್ ಶರ್ಮಾ 17,ವಿಪ್ರಾಜ್ ನಿಗಮ್ 14 ರನ್ ಗಳಿಸಿ ಔಟಾದರೆ ಮಿಚೆಲ್ ಸ್ಟಾರ್ಕ್ ಕೇವಲ 1 ರನ್ ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಇಂಡಿಯನ್ಸ್ 12 ರನ್ ಗಳಿಂದ ಗೆಲುವಿನ ನಗೆ ಬೀರಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ