ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 
ಕ್ರಿಕೆಟ್

IPL 2025: '6 ಪಂದ್ಯಗಳಿಂದ ಜೇಬಿನಲ್ಲಿಟ್ಟುಕೊಂಡಿದ್ದ.. ಈಗ ಹೊರ ಬಂತು..': Abhishek Sharma 'Note' Celebration ಗುಟ್ಟು ಬಹಿರಂಗ!

ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು.

ಹೈದರಾಬಾದ್: ಐಪಿಎಲ್ ಟೂರ್ನಿಯ ನಿನ್ನೆಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟರ್ ಅಭಿಷೇಕ್ ಶರ್ಮಾ ಶತಕದ ಬಳಿಕ ಜೇಬಿಂದ ನೋಟ್ ತೆಗೆದು ಅದನ್ನು ಎಲ್ಲರಿಗೂ ತೋರಿಸಿ ಸಂಭ್ರಮಿಸಿದ್ದರು. ಆದರೆ ಇದೀಗ ಈ ನೋಟ್ ಸೆಲೆಬ್ರೇಷನ್ ನ ಗುಟ್ಟನ್ನು ಅವರದ್ದೇ ತಂಡದ ಆಟಗಾರ ರಟ್ಟು ಮಾಡಿದ್ದಾರೆ.

ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಅಸಾಧ್ಯವಾಗಿದ್ದ ಗುರಿಯನ್ನು ಹೈದರಾಬಾದ್ ಯಶಸ್ವಿಯಾಗಿ ಮುಟ್ಟಿತ್ತು.

ಹೈದಾರಾಬಾದ್ ಗೆಲುವಿನಲ್ಲಿ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 141 ರನ್ ಚಚ್ಚಿದರು.

ಅಭಿಷೇಕ್ ಶರ್ಮಾ ನೋಟ್ ಸೆಲೆಬ್ರೇಷನ್

ಇನ್ನು ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಶತಕ ಸಿಡಿಸುತ್ತಲೇ ತಮ್ಮ ಜೇಬಿನಿಂದ ಒಂದು ಪೇಪರ್ ತೆಗೆದು ಅದನ್ನು ಮೈದಾನದಲ್ಲಿ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆ ಪೇಪರ್ ನಲ್ಲಿ 'This one is for Orange Army' (ಇದು ಆರೆಂಜ್ ಆರ್ಮಿಗೆ ಅರ್ಪಣೆ)ಎಂದು ಬರೆದಿದ್ದ ಅಭಿಷೇಕ್ ಶರ್ಮಾ ಅದನ್ನು ತೋರಿಸಿ ಸಂಭ್ರಮಿಸಿದ್ದರು. ಈ ಸಂಭ್ರಮಾಚರಣೆ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಸಂಭ್ರಮದ ಹಿಂದಿನ ಗುಟ್ಟನ್ನು ಹೈದರಾಬಾದ್ ಆಟಗಾರ ರಟ್ಟು ಮಾಡಿದ್ದಾರೆ.

4 ಪಂದ್ಯಗಳಿಂದ ಜೇಬಿನಲ್ಲಿಟ್ಟುಕೊಂಡಿದ್ದ

ಇನ್ನು ಅಭಿಷೇಕ್ ಶರ್ಮಾ ನೋಟ್ ಸೆಲೆಬ್ರೇಷನ್ ಕುರಿತು ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಮಾತನಾಡಿದ್ದು, ಈ ಗುಟ್ಟನ್ನು ಕೇಳಿದ ಪ್ರೇಕ್ಷಕರು ಮತ್ತು ಅಭಿಮಾನಿಗಳು ಬಿದ್ದು ಬಿದ್ದು ನಕ್ಕಿದ್ದಾರೆ. ಪಂದ್ಯದ ನಂತರ ಪ್ರಶಸ್ತಿ ಪ್ರದಾನ ವೇಳೆ ಮಾತನಾಡಿದ ಟ್ರಾವಿಸ್ ಹೆಡ್, 'ಆ ನೋಟ್ ಹೊಸದೇನಲ್ಲ.. ಸೀಸನ್ ಆರಂಭದಿಂದಲೂ ಆ ನೋಟು ಅಭಿಷೇಕ್ ಜೇಬಿನಲ್ಲೇತ್ತು. ಸದ್ಯ 6 ನೇ ಪಂದ್ಯದಲ್ಲಿ ಅದನ್ನು ಕೊನೆಗೂ ಹೊರತೆಗೆಯಲು ಅವನಿಗೆ ಅವಕಾಶ ಸಿಕ್ಕಿತು. ನೋಟು ಅಭಿಷೇಕ್ ಶರ್ಮಾ ಜೇಬಿನಲ್ಲಿ 6 ಪಂದ್ಯಗಳಿಂದ ಇದೆ, ಇಂದು ರಾತ್ರಿ ಅದು ಹೊರಬಂದಿದ್ದಕ್ಕೆ ಸಂತೋಷವಾಗಿದೆ" ಎಂದು ಟ್ರಾವಿಸ್ ಹೇಡ್ ಹೇಳಿದ್ದಾರೆ.

ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು

ಇನ್ನು ಟ್ರಾವಿಸ್ ಹೆಡ್ ಉತ್ತರ ಕೇಳಿ ಆಯೋಜಕರು ಮಾತ್ರವಲ್ಲ.. ಮೈದಾನದಲ್ಲಿದ್ದ ಪ್ರೇಕ್ಷಕರೂ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT