ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್ 
ಕ್ರಿಕೆಟ್

IPL 2025: MI vs DC ಪಂದ್ಯದ ನಡುವೆ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್!

ಅಂಪೈರ್ ಗೇಜ್ ಬಳಸಿ ಪಾಂಡ್ಯ ಅವರ ಬ್ಯಾಟ್‌ ಅನ್ನು ಅಳತೆ ಮಾಡಿದರು. ಇದಕ್ಕೂ ಮುನ್ನ ಆರ್‌ಸಿಬಿಯ ಫಿಲ್ ಸಾಲ್ಟ್ ಮತ್ತು ಆರ್‌ಆರ್ ತಂಡದ ಶಿಮ್ರಾನ್ ಹೆಟ್ಮೇಯರ್ ಅವರ ಬ್ಯಾಟ್‌ಗಳನ್ನು ಬದಲಿಸಲಾಗಿತ್ತು.

ಭಾನುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪಂದ್ಯದಲ್ಲಿ ಅಂಪೈರ್‌ಗಳು ಆಟಗಾರರ ಬ್ಯಾಟ್ ಗಾತ್ರವನ್ನು ಪರಿಶೀಲಿಸಿದರು. ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮತ್ತು ಮುಂಬೈ ಇಂಡಿಯನ್ಸ್ (ಎಂಐ) ನಡುವಿನ ಪಂದ್ಯದಲ್ಲಿ ಆನ್-ಫೀಲ್ಡ್ ಅಂಪೈರ್ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್‌ನ ಅಗಲವನ್ನು ಅಳೆದರು. ಅದೃಷ್ಟವಶಾತ್ ಪಾಂಡ್ಯ ಅವರ ಬ್ಯಾಟ್ ಅನುಮತಿ ನೀಡಲಾದ 4.25 ಇಂಚುಗಳ ಗಾತ್ರದಲ್ಲಿತ್ತು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಪಂದ್ಯದ ವೇಳೆ, ಆರ್‌ಸಿಬಿಯ ಫಿಲ್ ಸಾಲ್ಟ್ ಮತ್ತು ಆರ್‌ಆರ್ ತಂಡದ ಶಿಮ್ರಾನ್ ಹೆಟ್ಮೇಯರ್ ಅವರ ಬ್ಯಾಟ್‌ಗಳನ್ನು ಬದಲಿಸಲಾಗಿತ್ತು.

ಯಾವುದೇ ಹಂತದಲ್ಲಿ ನಿಗದಿಪಡಿಸಿದ ಆಯಾಮಗಳನ್ನು ಮೀರದಂತೆ ಖಚಿತಪಡಿಸಿಕೊಳ್ಳಲು ಅಂಪೈರ್ ಗೇಜ್ ಬಳಸಿ ಪಾಂಡ್ಯ ಅವರ ಬ್ಯಾಟ್‌ ಅನ್ನು ಅಳತೆ ಮಾಡಿದರು. ಐಪಿಎಲ್ ನಿಯಮಗಳ ಪ್ರಕಾರ, ಯಾವುದೇ ಬ್ಯಾಟ್ 4.25 ಇಂಚು ಅಥವಾ 10.8 ಸೆಂಟಿಮೀಟರ್ ಅಗಲವನ್ನು ಮೀರಬಾರದು.

ಐಪಿಎಲ್ 2025ರ ಆಟದ ನಿಯಮಗಳ ಪ್ರಕಾರ, 'ಬ್ಯಾಟ್‌ನ ಬ್ಲೇಡ್ ಈ ಆಯಾಮಗಳನ್ನು ಮೀರಬಾರದು. ಅಗಲ: 4.25 ಇಂಚು/10.8 ಸೆಂಮೀ, ಆಳ: 2.64 ಇಂಚು/6.7 ಸೆಂಮೀ, ಅಂಚುಗಳು: 1.56 ಇಂಚು/4.0 ಸೆಂಮೀ ಇರಬೇಕು. ಇದಲ್ಲದೆ, ಯಾವುದೇ ಬ್ಯಾಟ್ 'ಬ್ಯಾಟ್ ಗೇಜ್' ಮೂಲಕವೇ ಹಾದುಹೋಗುವಂತಿರಬೇಕು' ಎಂಬ ನಿಯಮವಿದೆ.

ಈ ಆವೃತ್ತಿಯಲ್ಲಿ ರನ್ ಸ್ಕೋರಿಂಗ್ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದು, ಎಲ್ಲ ತಂಡಗಳು ಪ್ರತಿದಿನ ಒಟ್ಟು 200 ರನ್‌ಗಳನ್ನು ದಾಟುತ್ತಿರುವುದರಿಂದ, ಬ್ಯಾಟ್ಸ್‌ಮನ್‌ಗಳು ಯಾವುದೇ ಅನಗತ್ಯ ಮತ್ತು ಕಾನೂನುಬಾಹಿರ ಪ್ರಯೋಜನವನ್ನು ಪಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಂಪೈರ್‌ಗಳು ಮುಂದಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಆರ್‌ಆರ್ ಪರ ಶಿಮ್ರಾನ್ ಹೆಟ್ಮೇಯರ್ ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲ.

ಮತ್ತೊಂದೆಡೆ, ಹಾರ್ದಿಕ್ ಪಾಂಡ್ಯ ಕೇವಲ 2 ರನ್‌ಗಳಿಗೆ ಔಟಾಗುವ ಮೂಲಕ ತಂಡಕ್ಕೆ ಹೆಚ್ಚಿನ ರನ್ ಕಲೆಹಾಕುವಲ್ಲಿ ವಿಫಲರಾದರು. ಆದರೂ, ಅಂತಿಮ ಓವರ್‌ನಲ್ಲಿ ಮೂರು ರನೌಟ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಈ ಆವೃತ್ತಿಯಲ್ಲಿ ಎರಡನೇ ಗೆಲುವು ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT