ಅನಯಾ ಬಂಗಾರ್ 
ಕ್ರಿಕೆಟ್

ಮಾಜಿ ಕ್ರಿಕೆಟಿಗ Sanjay Bangar ಪುತ್ರಿ(ತ್ರ) Anaya Bangarಗೆ 'ನಗ್ನ ಚಿತ್ರ ಕಳುಹಿಸಿ' ಕಿರುಕುಳ ನೀಡಿದ ಕ್ರಿಕೆಟಿಗ!

ಇತ್ತೀಚೆಗೆ ಹಾರ್ಮೋನಲ್‌ ರಿಪ್ಲೇಸ್‌ ಮೆಂಟ್‌ ಥೆರಪಿ ಮಾಡಿಕೊಂಡು ಹೆಣ್ಣಾಗಿ ಬದಲಾದ ಬಗ್ಗೆ ಸುದ್ದಿಯಾಗಿತ್ತು. ಆರ್ಯನ್‌ ಬಂಗಾರ್‌ ಈಗ ಅನಯಾ ಬಂಗಾರ್‌ ಆಗಿದ್ದಾರೆ.

ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಮಾಜಿ ಕೋಚ್‌ ಸಂಜಯ್‌ ಬಂಗಾರ್‌ ಅವರ ಮಗ ಆರ್ಯನ್‌ ಅಲಿಯಾಸ್ ಅನಯಾ ಬಂಗಾರ್ ಗೆ ಕ್ರಿಕೆಟಿಗನೋರ್ವ 'ನಗ್ನ ಚಿತ್ರ ಕಳುಹಿಸಿ' ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಹಾರ್ಮೋನಲ್‌ ರಿಪ್ಲೇಸ್‌ ಮೆಂಟ್‌ ಥೆರಪಿ ಮಾಡಿಕೊಂಡು ಹೆಣ್ಣಾಗಿ ಬದಲಾದ ಬಗ್ಗೆ ಸುದ್ದಿಯಾಗಿತ್ತು. ಆರ್ಯನ್‌ ಬಂಗಾರ್‌ ಈಗ ಅನಯಾ ಬಂಗಾರ್‌ ಆಗಿದ್ದಾರೆ. ಇದೀಗ ಇದೇ ಅನಯಾಗೆ ಕ್ರಿಕೆಟಿಗನೋರ್ವ ನಗ್ನ ಚಿತ್ರ ಕಳುಹಿಸಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಅನಯಾ ಬಂಗಾರ್ ಆರೋಪ ಮಾಡಿದ್ದು, ಈ ಕುರಿತು ಲಲ್ಲಂಟಾಪ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನಯಾ ಬಂಗಾರ್, 'ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯ ನಂತರ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುವಲ್ಲಿ ಅಡೆತಡೆಗಳು ಎದುರಾಗಿವೆ. ನಾನು ಮುಶೀರ್ ಖಾನ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ಅವರಂತಹ ಕೆಲವು ಪ್ರಸಿದ್ಧ ಕ್ರಿಕೆಟಿಗರೊಂದಿಗೆ ಆಡಿದ್ದೇನೆ. ತಂದೆ ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ನಾನು ನನ್ನ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕಾಯಿತು. ಕ್ರಿಕೆಟ್ ಜಗತ್ತು ಅಭದ್ರತೆ ಮತ್ತು ವಿಷಕಾರಿ ಪುರುಷತ್ವದಿಂದ ತುಂಬಿದೆ ಎಂದು ಹೇಳಿದರು.

ನಗ್ನ ಚಿತ್ರ ಕಳುಹಿಸಿದ ಕ್ರಿಕೆಟಿಗ

ಲಿಂಗ ಮರು ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಸಹ ಕ್ರಿಕೆಟಿಗರ ಪ್ರತಿಕ್ರಿಯೆಯ ಬಗ್ಗೆ ಹೇಳಿದ ಅನಯಾ, ಈ ಪ್ರಕ್ರಿಯೆಯಲ್ಲಿ 'ಬೆಂಬಲ ಸಿಕ್ಕಿದೆ ಮತ್ತು ಸ್ವಲ್ಪ ಕಿರುಕುಳವೂ ಆಗಿದೆ. ಕೆಲ ಕ್ರಿಕೆಟಿಗರು ನನಗೆ ಅವರ ನಗ್ನ ಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಅನಯಾ ಹೇಳಿದ್ದಾರೆ.

“ಆ ವ್ಯಕ್ತಿ ಎಲ್ಲರ ಮುಂದೆ ಬಯ್ಗುಳ ನೀಡುತ್ತಿದ್ದ. ಅದೇ ವ್ಯಕ್ತಿ ಬಳಿಕ ನನ್ನ ಪಕ್ಕದಲ್ಲಿ ಕುಳಿತು ನನ್ನ ಫೋಟೋಗಳನ್ನು ಕೇಳುತ್ತಿದ್ದ. ಇನ್ನೊಂದು ಉದಾಹರಣೆಯೆಂದರೆ, ನಾನು ಭಾರತದಲ್ಲಿದ್ದಾಗ, ಅನುಭವಿ ಕ್ರಿಕೆಟಿಗನಿಗೆ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿದೆ. ಅವನು ಕಾರಿನಲ್ಲಿ ಹೋಗೋಣ, ನಾನು ನಿಮ್ಮೊಂದಿಗೆ ಮಲಗಲು ಬಯಸುತ್ತೇನೆ ಎಂದು ಹೇಳಿದನು” ಎಂದು ಅನಯಾ ಹೇಳಿದರು.

ಲಿಂಗ ಬದಲಾವಣೆ ಹಾದಿ ಕಠಿಣವಾಗಿತ್ತು

ಇದೇ ವೇಳೆ ಲಿಂಗ ಬದಲಾವಣೆ ಹಾದಿ ಕುರಿತು ಮಾತನಾಡಿದ ಅನಯಾ, 'ನನಗೆ ಎಂಟು ಅಥವಾ ಒಂಬತ್ತು ವರ್ಷದವನಿದ್ದಾಗ, ನಾನು ನನ್ನ ತಾಯಿಯ ಕಪಾಟಿನಿಂದ ಬಟ್ಟೆಗಳನ್ನು ತೆಗೆದುಕೊಂಡು ಧರಿಸುತ್ತಿದ್ದೆ. ನಂತರ, ನಾನು ಕನ್ನಡಿಯಲ್ಲಿ ನೋಡಿಕೊಂಡು, ‘ನಾನು ಹುಡುಗಿ. ನಾನು ಹುಡುಗಿಯಾಗಲು ಬಯಸುತ್ತೇನೆ’ ಎಂದು ಹೇಳುತ್ತಿದ್ದೆ,” ಎಂದು ಅನಯಾ ಹೇಳಿದರು.

ನಿರಾಶೆ ಇದೆ

ತೃತೀಯಲಿಂಗಿ ಕ್ರೀಡಾಪಟುಗಳನ್ನು ಮಹಿಳಾ ಕ್ರಿಕೆಟ್‌ನಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ ಎಂದು ನವೆಂಬರ್ 2023 ರಲ್ಲಿ ICC ಸ್ಪಷ್ಟವಾಗಿ ಹೇಳಿದೆ. “ನಮಗೆ ಎಲ್ಲರನ್ನೂ ಸೇರಿಸಿಕೊಳ್ಳುವುದು ಮುಖ್ಯ. ಆದರೆ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಘನತೆ ಮತ್ತು ಆಟಗಾರರ ಸುರಕ್ಷತೆಯನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆʼ ಎಂದು ಆಗಿನ ICC ಸಿಇಒ ಜಿಯೋಫ್ ಅಲಾರ್ಡಿಸ್ ಹೇಳಿದ್ದರು. ಈ ನಿಯಮದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಅನಯಾ ಪ್ರಸ್ತುತ ಯುನೈಟೆಡ್ ಕಿಂಗ್‌ಡಂ (ಬ್ರಿಟನ್)ನಲ್ಲಿ ವಾಸಿಸುತ್ತಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಅನಯಾ‌ (ಆರ್ಯನ್ ಬಂಗಾರ್) ಬಾಲ್ಯದಿಂದಲೇ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದರು. ಅಲ್ಲದೆ ಲೀಸೆಸ್ಟರ್‌ಶೈರ್‌ನ ಹಿಂಕ್ಲೆ ಕ್ರಿಕೆಟ್ ಕ್ಲಬ್‌ ಪರ ಆಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT