ಅಂಬಟಿ ರಾಯುಡು 
ಕ್ರಿಕೆಟ್

IPL 2025: 'ಈ ಸಲ ಕಪ್ RCB ದೇ..'; ಕೊನೆಗೂ Rajat Patidar ಪಡೆ ಶ್ಲಾಘಿಸಿದ Ambati Rayudu!

ತವರು ಮೈದಾನ ಹೊರತು ಪಡಿಸಿ ಹೊರಗಿನ ಮೈದಾನಗಳಲ್ಲಿ ಆರ್ ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೇ ಪ್ರದರ್ಶನ ತಂಡವನ್ನು ಟೂರ್ನಿ ಆರಂಭದಿಂದಲೂ ಟೇಬಲ್ ನಲ್ಲಿ ಟಾಪ್ 5ನೊಳಗೇ ಇರಿಸಿದೆ.

ಬೆಂಗಳೂರು: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರದರ್ಶನ ಉತ್ತಮವಾಗಿದ್ದು, ಪ್ಲೇಆಫ್ ಗೇರುವ ಸಾಧ್ಯತೆ ಇದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿದ್ದಾರೆ.

ತವರು ಮೈದಾನ ಹೊರತು ಪಡಿಸಿ ಹೊರಗಿನ ಮೈದಾನಗಳಲ್ಲಿ ಆರ್ ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೇ ಪ್ರದರ್ಶನ ತಂಡವನ್ನು ಟೂರ್ನಿ ಆರಂಭದಿಂದಲೂ ಟೇಬಲ್ ನಲ್ಲಿ ಟಾಪ್ 5ನೊಳಗೇ ಇರಿಸಿದೆ. ಆರ್​ಸಿಬಿ ತಂಡವು 8 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿದ್ದು, ಈ ಐದು ಗೆಲುವುಗಳೊಂದಿಗೆ 10 ಅಂಕಗಳನ್ನು ಪಡೆದಿದೆ.

ಪ್ಲೇ ಆಫ್ ಗೆ ಆರ್ ಸಿಬಿ

ಆರ್ ಸಿಬಿ ತಂಡ ತನ್ನ ಹಾಲಿ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದರೆ, ತಂಡ ಪ್ಲೇ ಆಫ್ ಗೇರುವ ಸಾಧ್ಯತೆ ಇದೆ. ಆರ್​ಸಿಬಿ ತಂಡದ ಮುಂದಿನ ಎದುರಾಳಿ ರಾಜಸ್ಥಾನ್ ರಾಯಲ್ಸ್ ಆಗಿದ್ದು, ಈ ಪಂದ್ಯವನ್ನೂ ಆರ್ ಸಿಬಿಯೇ ಗೆಲ್ಲುವ ಸಾಧ್ಯತೆ ಇದೆ.

ಆರ್​ಸಿಬಿ ಪಡೆ ಇದೇ ಪ್ರದರ್ಶನ ಮುಂದುವರೆಸಿದರೆ, ಅವರು ಪ್ಲೇಆಫ್ ಹಂತಕ್ಕೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿದ್ದಾರೆ.

ಖಾಸಗಿ ಚಾನೆಲ್​ನಲ್ಲಿ ಮಾತನಾಡಿದ ಅಂಬಾಟಿ ರಾಯುಡು, 'ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೇ ಪ್ರದರ್ಶನದೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಟ್ಟರೆ ಅವರನ್ನು ತಡೆಯುವುದು ಕಷ್ಟ. ಆರ್​ಸಿಬಿ ಏನಾದ್ರೂ ಪ್ಲೇಆಫ್ ಹಂತಕ್ಕೇರಿದರೆ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಳ್ಳಲಿದೆ.

ಒಂದು ವೇಳೆ ಆರ್​ಸಿಬಿ ತಂಡವು ತನ್ನ ತವರಿನಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಹಂತಕ್ಕೇರುವುದು ಸುಲಭವಾಗಲಿದೆ. ಆದರೆ ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಮೂರು ಪಂದ್ಯ ಸೋತಿರುವುದೇ ಈಗ ಅವರ ದೊಡ್ಡ ಚಿಂತೆ.

ಇದಾಗ್ಯೂ ಮುಂದಿನ ಪಂದ್ಯಗಳಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ಗೆಲುವು ದಾಖಲಿಸಿದರೆ, ನಾಕೌಟ್ ಹಂತಕ್ಕೇರುವುದನ್ನು ಎದುರು ನೋಡಬಹುದು. ಪ್ಲೇಆಫ್ ಹಂತಕ್ಕೇರಿದರೆ, ಆರ್​ಸಿಬಿ ತಂಡವನ್ನು ಫೈನಲ್​ನಲ್ಲಿ ಎದುರು ನೋಡಬಹುದು. ಏಕೆಂದರೆ ಪ್ಲೇಆಫ್‌ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿದೆ. ಹೀಗಾಗಿ ಈ ಪಂದ್ಯಗಳಲ್ಲಿ ಆರ್​ಸಿಬಿ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.

ಆರ್ ಸಿಬಿ ಗೆಲ್ಲಬಾರದು ಎಂದು ಹೇಳಿದ್ದ ರಾಯುಡು

ಈ ಹಿಂದೆ ಐಪಿಎಲ್ ಆರಂಭವಾದಾಗಿನಿಂದ ಇದೇ ಅಂಬಾಟಿ ರಾಯುಡು ಆರ್ ಸಿಬಿ ವಿರುದ್ದ ಮುಗಿಬೀಳುತ್ತಿದ್ದರು. ಆರ್ ಸಿಬಿ ಟ್ರೋಫಿ ಗೆಲ್ಲಬಾರದು ಎಂದು ಹೇಳಿದ್ದರು. ಪೋಡ್​ ಕಾಸ್ಟ್​ವೊಂದರಲ್ಲಿ ಮಾತನಾಡಿದ ರಾಯುಡು, ಆರ್​ಸಿಬಿ ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ.

ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲಬೇಕು. ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದು ಕೊನೆಯ ಐಪಿಎಲ್ ಆಗಬಹುದು. ಹೀಗಾಗಿ ನಾನು ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಆಶಿಸುತ್ತೇನೆ ಎಂದು ರಾಯುಡು ಹೇಳಿದ್ದರು.

ಆದರೆ ಅಂಬಟಿ ರಾಯುಡು ನಿರೀಕ್ಷೆ ಇದೀಗ ಹುಸಿಯಾಗಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಪ್ರದರ್ಶನ ನೀಡಿ ಟೇಬಲ್ ನ ಅಂತಿಮ ಸ್ಥಾನದಲ್ಲಿದ್ದು, ಆರ್ ಸಿಬಿ ಅದ್ಭುತ ಪ್ರದರ್ಶನದ ಮೂಲಕ ಅಗ್ರ 5ರೊಳಗೆ ಇದೆ. ಇದರ ಬೆನ್ನಲ್ಲೇ ಉಲ್ಟಾ ಹೊಡೆದಿರುವ ಅಂಬಾಟಿ ರಾಯುಡು, ಈ ಬಾರಿ ಆರ್​ಸಿಬಿ ಪ್ಲೇಆಫ್​ಗೆ ಎಂಟ್ರಿ ಕೊಟ್ಟರೆ ಟ್ರೋಫಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT