ರಾಯಲ್ ಚಾಲೆಂಜರ್ಸ್ ಬೆಂಗಳೂರು 
ಕ್ರಿಕೆಟ್

IPL 2025: 'ವಧುವಿನ ಗೆಳತಿಯಾಗುವ ಬದಲು ತಾನೇ ವಧುವಾಗಲು RCB ಬಯಸಿದರೆ...': ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಹೇಳಿದ್ದೇನು?

ಹಿಂದಿನ ಆವೃತ್ತಿಗಳಲ್ಲಿ, ಬೌಲಿಂಗ್ ಅವರ ದೌರ್ಬಲ್ಯ ಎಂದು ನಾನು ಹೇಳುತ್ತೇನೆ. ಆದರೆ ಈಗ, ಅವರು ಬಹಳಷ್ಟು ಬೇಸ್‌ಗಳನ್ನು ಆವರಿಸಿದ್ದಾರೆಂದು ನಾನು ಭಾವಿಸುತ್ತೇನೆ. ಈ ಪಂದ್ಯವು ಅವರಿಗೆ ಗೆಲ್ಲಲೇಬೇಕಾದ ಪಂದ್ಯವಾಗಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧದ ಪಂದ್ಯವು ಆರ್‌ಸಿಬಿಗೆ ಗೆಲ್ಲಲೇಬೇಕಾದ ಪಂದ್ಯವಾಗಿದೆ ಎಂದು ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ. ರಜತ್ ಪಾಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಿಂದ ಹೊರಗೆ ಆಡಿರುವ ಎಲ್ಲ ಸ್ಥಳಗಳಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಆದರೆ, ಐಪಿಎಲ್ 2025ರಲ್ಲಿ ತವರಿನಲ್ಲಿ ಇನ್ನೂ ಒಂದು ಪಂದ್ಯವನ್ನು ಗೆದ್ದಿಲ್ಲ. ಇಲ್ಲಿಯವರೆಗೆ, ಆರ್‌ಸಿಬಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿಟಿ, ಡಿಸಿ ಮತ್ತು ಪಿಬಿಕೆಎಸ್ ವಿರುದ್ಧ ಆಡಿರುವ ಪಂದ್ಯಗಳಲ್ಲಿ ಸೋಲು ಕಂಡಿದೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಹೇಡನ್, ಆರ್‌ಸಿಬಿ ತವರಿನಲ್ಲಿ ಗೆಲುವಿನ ಹಾದಿಗೆ ಮರಳುವುದು ಹೇಗೆ ಎಂಬುದನ್ನು ಲೆಕ್ಕಾಚಾರ ಮಾಡಬೇಕಾಗಿದೆ. ಕೆಕೆಆರ್, ಎಂಐ ಮತ್ತು ಸಿಎಸ್‌ಕೆಯಂತಹ ತಂಡಗಳು ವರ್ಷಗಳಿಂದ ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿವೆ. ಏಕೆಂದರೆ, ಅವರು ತಮ್ಮ ತವರು ಮೈದಾನಗಳನ್ನು ತಮ್ಮ ಭದ್ರಕೋಟೆಗಳನ್ನಾಗಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

'ಮುಂಬೈ, ಚೆನ್ನೈ, ಕೋಲ್ಕತ್ತಾದಂತಹ ಹೆಚ್ಚಿನ ಯಶಸ್ವಿ ಫ್ರಾಂಚೈಸಿಗಳು ತವರಿನಲ್ಲಿ ಭದ್ರಕೋಟೆಯನ್ನು ಹೊಂದಿವೆ. ಅದಕ್ಕಾಗಿಯೇ ಅವುಗಳು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌ಸಿಬಿ, ವಧುವಿನ ಗೆಳತಿಯಾಗುವುದನ್ನು ನಿಲ್ಲಿಸಿ ತಾನೇ ವಧುವಾಗಲು ಬಯಸಿದರೆ, ತವರಿನಲ್ಲಿ ಹೇಗೆ ಪಂದ್ಯವನ್ನು ಗೆಲ್ಲಬೇಕೆಂದು ಲೆಕ್ಕಾಚಾರ ಮಾಡಬೇಕಾಗುತ್ತದೆ. ಈ ಪಂದ್ಯವು ಆರ್‌ಸಿಬಿಗೆ ಗೆಲ್ಲಲೇಬೇಕಿದೆ' ಎಂದು ಹೇಡನ್ ಹೇಳಿದರು.

ಈ ಹಿಂದೆ ಆರ್‌ಸಿಬಿಯ ಬೌಲಿಂಗ್ ವಿಭಾಗ ದುರ್ಬಲವಾಗಿತ್ತು. ಆದಾಗ್ಯೂ, ಅವರು ಬಹಳಷ್ಟು ಪಂದ್ಯಗಳನ್ನು ಗೆದ್ದಿದ್ದರು. ಹಿಂದಿನ ಆವೃತ್ತಿಗಳಲ್ಲಿ, ಬೌಲಿಂಗ್ ಅವರ ದೌರ್ಬಲ್ಯ ಎಂದು ನಾನು ಹೇಳುತ್ತೇನೆ. ಆದರೆ ಈಗ, ಅವರು ಬಹಳಷ್ಟು ಬೇಸ್‌ಗಳನ್ನು ಆವರಿಸಿದ್ದಾರೆಂದು ನಾನು ಭಾವಿಸುತ್ತೇನೆ. ಈ ಪಂದ್ಯವು ಅವರಿಗೆ ಗೆಲ್ಲಲೇಬೇಕಾದ ಪಂದ್ಯವಾಗಿದೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT