ರಾಜಸ್ಥಾನ್ ರಾಯಲ್ಸ್ 
ಕ್ರಿಕೆಟ್

IPl 2025: 'ರಾಜಸ್ಥಾನ್ ರಾಯಲ್ಸ್ ತಂಡದ ಈ ಸೀಸನ್ ಬಹುತೇಕ ಮುಗಿದಿದೆ'- ಬೌಲಿಂಗ್ ಕೋಚ್

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಡ್, ಪಾಯಿಂಟ್ ಟೇಬಲ್ ವಿಷಯದಲ್ಲಿ ತಂಡಕ್ಕೆ ಈ ಆವೃತ್ತಿ ಮುಗಿದಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್, ಐಪಿಎಲ್ 2025ರ ಪ್ಲೇಆಫ್‌ಗೆ ಪ್ರವೇಶಿಸುವ ಭರವಸೆಯನ್ನು ಕೈಬಿಟ್ಟಿದ್ದಾರೆ. ಆರ್‌ಆರ್ ಸದ್ಯ ಆಡಿರುವ 9 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಸೋಮವಾರ ಜಿಟಿ ವಿರುದ್ಧದ ತಂಡದ ಪಂದ್ಯಕ್ಕೂ ಮುನ್ನ, ರಿಯಾನ್ ಪರಾಗ್ ಮತ್ತು ತಂಡದ ಈ ಸೀಸನ್ ಬಹುತೇಕ ಮುಗಿದಿದೆ ಎಂದು ಬಾಂಡ್ ಒಪ್ಪಿಕೊಂಡಿದ್ದಾರೆ.

ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಡ್, ಪಾಯಿಂಟ್ ಟೇಬಲ್ ವಿಷಯದಲ್ಲಿ ತಂಡಕ್ಕೆ ಈ ಆವೃತ್ತಿ ಮುಗಿದಿದೆ. ಆದರೆ, ಈ ಆವೃತ್ತಿಯನ್ನು ಕನಿಷ್ಠ ಉತ್ತಮ ರೀತಿಯಲ್ಲಿ ಮುಗಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

'ನನಗೆ ಅದೇ ನೋವುಂಟು ಮಾಡುತ್ತಿದೆ ಅಂತ ನಾನು ಭಾವಿಸುತ್ತೇನೆ. ನಾವು 2 ಗೆಲುವು ಮತ್ತು 7 ಪಂದ್ಯಗಳನ್ನು ಸೋತಿದ್ದೇವೆ. ಹೌದು, ಇದು ತಂಡದ ಮಟ್ಟಿಗೆ ಉತ್ತಮವಾಗಿಲ್ಲ. ಆದರೆ, ಈಗ ಅದರ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಪಾಯಿಂಟ್ ಟೇಬಲ್ ವಿಷಯದಲ್ಲಿ ನಾವು ಬಹುಶಃ ಟೂರ್ನಮೆಂಟ್‌ನಿಂದ ಹೊರಗುಳಿದಿದ್ದೇವೆ. ಆದರೆ, ಅದರರ್ಥ ಆಡಲು ಈಗ ಬೇರೇನು ಉಳಿದಿಲ್ಲ ಎಂದು ಅರ್ಥವಲ್ಲ' ಎಂದು ಬಾಂಡ್ ಹೇಳಿದರು.

ಸಂಜು ಸ್ಯಾಮ್ಸನ್ ಅವರ ಗಾಯ ಮತ್ತು ರನ್-ಚೇಸ್‌ಗಳಲ್ಲಿ ತಂಡದ ಅಸಮರ್ಥತೆಯಿಂದ ಆರ್‌ಆರ್ ಕಂಗೆಟ್ಟಿದೆ. ಗೆಲ್ಲುವ ಪಂದ್ಯಗಳನ್ನು ಕೂಡ ಸೋತು ತಂಡವು ಹೀನಾಯ ಪರಿಸ್ಥಿತಿಗೆ ಇಳಿದಿದೆ.

'ಆರಂಭದಲ್ಲಿ ತಂಡದ ಹೋರಾಟವು ಪ್ಲೇಆಫ್‌ಗೆ ತಲುಪುವುದಾಗಿತ್ತು. ಆದರೆ, ನಾವು ಈಗ ಪ್ಲೇಆಫ್‌ಗೆ ತಲುಪುವುದಿಲ್ಲ. ಆದ್ದರಿಂದ ನೀವು ಇದಕ್ಕೆ ಕಾರಣ ಏನೆಂಬುದನ್ನು ಗುರುತಿಸಬೇಕು ಮತ್ತು ಅದರೊಂದಿಗೆ ಪ್ರಾಮಾಣಿಕವಾಗಿರಬೇಕು ಎಂದು ನಾನು ಭಾವಿಸುತ್ತೇನೆ. ನಾವು ಇಲ್ಲಿಯವರೆಗೆ ಸಾಕಷ್ಟು ಉತ್ತಮವಾಗಿಲ್ಲ. ಆದರೆ, ಅದರರ್ಥ ನಾವು ಅಲ್ಲಿಂದ ಹೊರಬರಲು ಮತ್ತು ಮುಂದಿನ ನಾಲ್ಕು ಅಥವಾ ಐದು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ದೃಢನಿಶ್ಚಯ ಹೊಂದಿಲ್ಲ ಎಂದರ್ಥವಲ್ಲ. ಅದು ಎಂದಿಗೂ ಬದಲಾಗುವುದಿಲ್ಲ' ಎಂದು ಬಾಂಡ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT