ವೈಭವ್ ಸೂರ್ಯವಂಶಿ 
ಕ್ರಿಕೆಟ್

''ವೈಭವ್ ಸೂರ್ಯವಂಶಿ ಕ್ರಿಕೆಟ್ ಜೀವನ ಅಂದುಕೊಂಡಷ್ಟು ಸುಲಭವಲ್ಲಾ''; ಆರ್ ಪಿ ಸಿಂಗ್ ವಾರ್ನಿಂಗ್, ಯಾಕೆ?

ರಾಜಸ್ಥಾನ ರಾಯಲ್ಸ್ 1.10 ಕೋಟಿಗೆ ಖರೀದಿಸಿದ ಸೂರ್ಯವಂಶಿ, ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭರ್ಜರಿ 11 ಸಿಕ್ಸರ್, 7 ಬೌಂಡರಿಗಳ ಮೂಲಕ ಗುಜರಾತ್ ಟೈಟನ್ಸ್ ಗೆ ಭರ್ಜರಿ ಗೆಲುವು ತಂದುಕೊಟ್ಟರು.

ಜೈಪುರ: ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ ಸ್ಟನಿಂಗ್ ಶತಕ ಸಿಡಿಸುವ ಮೂಲಕ ರಾತ್ರೋ ರಾತ್ರಿ ಕ್ರಿಕೆಟ್ ಜಗತ್ತನ್ನು ನಿದ್ದೆಗೆಡಿಸಿದ ರಾಜಸ್ಥಾನ ರಾಯಲ್ಸ್ ತಂಡದ ಕಿರಿಯ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಎಚ್ಚರಿಕೆಗಳು ಬರಲಾರಂಭಿಸಿವೆ.ವಿಶೇಷವಾಗಿ ಅವರಿಗೆ ಮುಂಬರುವ ಸವಾಲುಗಳನ್ನು ನೆನಪಿಸಿ ಆರ್ ಪಿ ಸಿಂಗ್ ವಾರ್ನಿಂಗ್ ನೀಡಿದ್ದಾರೆ.

ರಾಜಸ್ಥಾನ ರಾಯಲ್ಸ್ 1.10 ಕೋಟಿಗೆ ಖರೀದಿಸಿದ ಸೂರ್ಯವಂಶಿ, ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭರ್ಜರಿ 11 ಸಿಕ್ಸರ್, 7 ಬೌಂಡರಿಗಳ ಮೂಲಕ ಗುಜರಾತ್ ಟೈಟನ್ಸ್ ಗೆ ಭರ್ಜರಿ ಗೆಲುವು ತಂದುಕೊಟ್ಟರು.

ಎರಡನೇ ಇನ್ನಿಂಗ್ಸ್ ನಲ್ಲಿ ಗುಜರಾತ್ ಟೈಟನ್ಸ್ ಆಟ ಆಡುತ್ತಿದ್ದೆಯೋ, ಅಥವಾ ಇಲ್ಲವೋ ಎಂಬುದೇ ಕಾಣುತ್ತಿರಲಿಲ್ಲ. ರಾಜಸ್ಥಾನ ಕೇವಲ 15.5 ಓವರ್‌ಗಳಲ್ಲಿ 210 ರನ್‌ಗಳ ಗುರಿಯನ್ನು ತಲುಪಿತು. ಯಶಸ್ವಿ ಜೈಸ್ವಾಲ್ ಅಜೇಯ ಅರ್ಧ ಶತಕ ಬಾರಿಸಿದರು.

14 ವರ್ಷದ ಯುವ ಬ್ಯಾಟರ್‌ ವೇಗಿಗಳು ಮತ್ತು ಸ್ಪಿನ್ನರ್‌ಗಳ ವಿರುದ್ಧ ನಿರ್ಭಯವಾಗಿ ಬ್ಯಾಟ್ ಮಾಡುವ ಮೂಲಕ ಎದುರಾಗಳಿಗೆ ನಡುಕ ಹುಟ್ಟಿಸಿದರು.

ಈ ಮಧ್ಯೆ ''ವೈಭವ್ ಸೂರ್ಯವಂಶಿ ಕ್ರಿಕೆಟ್ ಜೀವನ ಅಂದುಕೊಂಡಷ್ಟು ಸುಲಭವಲ್ಲಾ ಎಂದು ಆರ್ ಪಿ ಸಿಂಗ್ ಹೇಳಿದ್ದಾರೆ. ಏಕೆಂದರೆ ಇತರ ತಂಡಗಳು ವೈಭವ್ ಗಾಗಿ ಸಿದ್ಧರಾಗಿ ಬರುತ್ತವೆ. ಅವರು ಈಗಾಗಲೇ ಆತನ ಪ್ರಬಲ ಮತ್ತು ದುರ್ಬಲ ಅಂಶಗಳನ್ನು ವಿಮರ್ಶಿಸಲು ಪ್ರಾರಂಭಿಸಿದ್ದಾರೆ. ಅವರಿನ್ನೂ ಹೊಸಬರು. ಆಡಿರುವ ಮೊದಲ ಮೂರು ಪಂದ್ಯಗಳಲ್ಲಿ ವಿರೋಧಿಗಳು ಸಿದ್ಧವಾಗಿರಲಿಲ್ಲ. ಆದಾಗ್ಯೂ, ಅವರು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನಾ ಅವರಿಗಾಗಿ ಯೋಜನೆಗಳನ್ನು ಸಿದ್ಧಪಡಿಸುತ್ತಾರೆ ಎಂದು ಹೇಳಿದರು.

ವೈಭವ್ ಅವರ ಹೊಡೆತಗಳಿಂದ ದಿಗ್ಭ್ರಮೆಗೊಂಡಿದ್ದೆ. ಅವರ ವಯಸ್ಸನ್ನು ಮರೆತುಬಿಡಿ ಮತ್ತು ಅವರ ಹೊಡೆತಗಳನ್ನು ನೋಡಿ. ಅವರ ಲಾಂಗ್ ಶಾಟ್ ಗಳಿಂದ ನಾನು ಪ್ರಭಾವಿತನಾಗಿದ್ದೇನೆ ಮತ್ತು ದಿಗ್ಭ್ರಮೆಗೊಂಡಿದ್ದೇನೆ ಎಂದು ಆರ್ ಪಿಸಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT