ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ (ಸಂಗ್ರಹ ಚಿತ್ರ) 
ಕ್ರಿಕೆಟ್

2026 Asian Games: ಮತ್ತಷ್ಟು ರಂಗು; ಮಾರ್ಷಲ್‌ ಆರ್ಟ್‌, Cricket ಸೇರ್ಪಡೆ!

ಜಪಾನ್‌ನ ಐಚಿ ಮತ್ತು ನಗೋಯಾದಲ್ಲಿ 2026ರ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರ ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮತ್ತು ಮಾರ್ಷಲ್‌ ಆರ್ಟ್‌ ಕ್ರೀಡೆಗಳನ್ನುಸೇರ್ಪಡೆ ಮಾಡಲಾಗಿದೆ.

ನವದೆಹಲಿ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಸೇರ್ಪಡೆ ಮಾಡಲಾಗಿದ್ದು, ಕ್ರೀಡಾಕೂಟಕ್ಕೆ ಮತ್ತಷ್ಟು ರಂಗು ತಂದಿದೆ.

ಹೌದು.. ಜಪಾನ್‌ನ ಐಚಿ ಮತ್ತು ನಗೋಯಾದಲ್ಲಿ 2026ರ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4ರ ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮತ್ತು ಮಾರ್ಷಲ್‌ ಆರ್ಟ್‌ ಕ್ರೀಡೆಗಳನ್ನುಸೇರ್ಪಡೆ ಮಾಡಲಾಗಿದೆ. ಈಗಾಗಲೇ ಕ್ರೀಡಾಕೂಟ ಆಯೋಜನೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ತಯಾರಿಯ ಭಾಗವಾಗಿ ಏಪ್ರಿಲ್ 28ರಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಮತ್ತು AINAGOC ಜಪಾನ್‌ನ ನಗೋಯಾದಲ್ಲಿ ಸಭೆ ನಡೆಸಿವೆ.

ಈ ಸಭೆ ವೇಳೆ AINAGOC ನಿರ್ದೇಶಕರ ಮಂಡಳಿ ಏಷ್ಯನ್ ಗೇಮ್ಸ್‌ಗೆ ಕ್ರಿಕೆಟ್ ಮತ್ತು ಮಿಕ್ಸ್ ಮಾರ್ಷಲ್ ಆರ್ಟ್ಸ್ (MMA) ಅನ್ನು ಅಧಿಕೃತವಾಗಿ ಸೇರಿಸಿಕೊಂಡಿದೆ. ಈ ಮೂಲಕ ಕ್ರಿಕೆಟ್‌ ಮತ್ತು ಮಾರ್ಷಲ್‌ ಆರ್ಟ್‌ ಚೊಚ್ಚಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ. ಕುರಾಶ್ ಮತ್ತು ಜುಜಿಟ್ಸು ಜೊತೆಗೆ ಆರು ಸ್ಪರ್ಧೆಗಳು ಕಾಂಬ್ಯಾಟ್ ಸ್ಪೋರ್ಟ್ಸ್ ಅಡಿಯಲ್ಲಿ ನಡೆಯಲಿವೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಐಚಿ ಮತ್ತು ನಗೋಯಾ ಪ್ರಾಂತ್ಯಗಳಲ್ಲಿ ಏಷ್ಯನ್ ಗೇಮ್ಸ್ ಕ್ರೀಡಾಕೂಟ ನಡೆಯಲಿವೆ. 41 ಕ್ರೀಡೆಗಳು ಮತ್ತು 45 ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳಿಂದ 15,000 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಕ್ರಿಕೆಟ್ ಪಂದ್ಯಗಳು ಐಚಿ ಪ್ರಾಂತ್ಯದಲ್ಲಿ ನಡೆಯಲಿವೆ. ಈಗಾಗಲೇ T20 ಮಾದರಿಯ ಕ್ರಿಕೆಟ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡಲಿರುವುದರಿಂದ ಈ ಬಗ್ಗೆ ಹೆಚ್ಚಿನ ಆಸಕ್ತಿ ಇದೆ.

ಈ ಬಾರಿ ಕ್ರಿಕೆಟ್‌ ಮತ್ತು ಮಾರ್ಷಲ್‌ ಆರ್ಟ್ಸ್‌ ಅನ್ನು ಸೇರಿಸಿರುವುದು ಏಷ್ಯನ್ ಗೇಮ್ಸ್‌ ಟೂರ್ನಿಯ ರಂಗು ಇನ್ನಷ್ಟು ಹೆಚ್ಚಲಿದೆ. ಕ್ರಿಕೆಟ್ ಕೂಡಾ ಬಹಳ ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಒಟ್ಟಾರೆಯಾಗಿ, 2026ರ ಏಷ್ಯನ್ ಗೇಮ್ಸ್ ಒಂದು ದೊಡ್ಡ ಕ್ರೀಡಾ ಹಬ್ಬವಾಗಲಿದೆ. ಜಪಾನ್ ಈ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಸಜ್ಜಾಗಿದೆ.

ಭರ್ಜರಿ ಸಿದ್ಧತೆ

ಮೇ 1ರಂದು OCA ಸಮನ್ವಯ ಸಮಿತಿಯ ಮೂರನೇ ಸಭೆ ಆರಂಭವಾಗಲಿದೆ. ಇದರಲ್ಲಿ AINAGOCಯ 18 ವಿಭಾಗಗಳು ಕ್ರೀಡೆ, ವಸತಿ, ಸಾರಿಗೆ, ಮಾನ್ಯತೆ, ಮಾರುಕಟ್ಟೆ, ಟಿಕೆಟಿಂಗ್ ಮತ್ತು ಐಟಿ ಸೇವೆಗಳಂತಹ ವಿಷಯಗಳ ಬಗ್ಗೆ ಪ್ರೆಸೆಂಟೇಶನ್ ನೀಡಲಿವೆ. ಸಮನ್ವಯ ಸಮಿತಿ ಸಭೆಯಲ್ಲಿ ಎರಡು ಪ್ರಾಯೋಜಕತ್ವ ಸಹಿ ಸಮಾರಂಭಗಳು ನಡೆಯಲಿವೆ. ಸಮಿತಿಯ ಸಭೆಯ ಎರಡನೇ ದಿನದಂದು ನಗೋಯಾ ಬಂದರಿನ ಗಾರ್ಡನ್ ಪಿಯರ್‌ನಲ್ಲಿರುವ ಅಥ್ಲೀಟ್ಸ್ ಪ್ಲಾಜಾ ಮತ್ತು ಇಚಿನೋಮಿಯಾ ಸಿಟಿ ಮುನ್ಸಿಪಲ್ ಜಿಮ್ನಾಷಿಯಂನಲ್ಲಿರುವ ಬ್ಯಾಡ್ಮಿಂಟನ್ ಕ್ರೀಡಾಂಗಣಕ್ಕೆ ಭೇಟಿ ನೀಡಲಾಗುತ್ತದೆ. OCA ಮತ್ತು AINAGOC ನಡುವಿನ ಜಂಟಿ ಪತ್ರಿಕಾಗೋಷ್ಠಿಯೊಂದಿಗೆ ಸಮನ್ವಯ ಸಮಿತಿ ಸಭೆ ಶುಕ್ರವಾರ ಮಧ್ಯಾಹ್ನ ಮುಕ್ತಾಯವಾಗಲಿದೆ.

ಕೊನೆಯ ಬಾರಿಗೆ ಕ್ರಿಕೆಟ್

ಇನ್ನು 1900ರಲ್ಲಿ ಪ್ಯಾರಿಸ್‌ನಲ್ಲಿ ಕ್ರಿಕೆಟ್ ಆಡಿಸಲಾಗಿತ್ತು. "1900 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಎರಡು ತಂಡಗಳ ಪಂದ್ಯಾವಳಿಯ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ತಂಡ ಫ್ರಾನ್ಸ್ ತಂಡವನ್ನು 158 ರನ್‌ಗಳಿಂದ ಸೋಲಿಸಿತ್ತು. ಇದಾದ ಬಳಿಕ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.

ಏಷ್ಯನ್ ಗೇಮ್ಸ್ ಕ್ರಿಕೆಟ್ ಇತಿಹಾಸ

ದಕ್ಷಿಣ ಏಷ್ಯಾದ ತಂಡಗಳು ಈ ಹಿಂದೆ ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ. ಬಾಂಗ್ಲಾದೇಶ 2010ರಲ್ಲಿ ಪುರುಷರ ಚಿನ್ನದ ಪದಕ ಗೆದ್ದುಕೊಂಡಿತು. ಶ್ರೀಲಂಕಾ 2014ರಲ್ಲಿ ಮತ್ತು ಭಾರತ 2022ರಲ್ಲಿ ಚಿನ್ನದ ಪದಕ ಗೆದ್ದಿವೆ. ಅಂದಿನ ಕ್ರೀಡಾಕೂಟದಲ್ಲಿ ಭಾರತ ತಂಡದಲ್ಲಿ ಋತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಅವರಂತಹ T20 ಸ್ಟಾರ್ ಆಟಗಾರರು ಇದ್ದರು. ಅಂತೆಯೇ ಅಫ್ಘಾನಿಸ್ತಾನ ಮೂರು ಆವೃತ್ತಿಗಳಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿದೆ. ಭಾರತ 2022ರಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಚಿನ್ನ ಗೆದ್ದರೆ, ಪಾಕಿಸ್ತಾನ 2010 ಮತ್ತು 2014ರಲ್ಲಿ ಮಹಿಳೆಯರ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT