ಚೆನ್ನೈ ಪರ ಸ್ಯಾಮ್ ಕರನ್ ಬ್ಯಾಟಿಂಗ್ 
ಕ್ರಿಕೆಟ್

IPL 2025: ಒಂದು ಹಂತದಲ್ಲಿ 180/5, ಕೇವಲ 6 ರನ್ ಅಂತರದಲ್ಲಿ 5 ವಿಕೆಟ್ ಪತನ; CSK 190 ರನ್ ಆಲೌಟ್!

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ ನಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆ ಗೆಲ್ಲಲು 191 ರನ್ ಗಳ ಬೃಹತ್ ಗುರಿ ನೀಡಿತು.

ಚೆನ್ನೈ: ಐಪಿಎಲ್ ಟೂರ್ನಿಯ ಇಂದಿನ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, 190 ರನ್ ಗೆ ಆಲೌಟ್ ಆಗಿದೆ.

ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆ ಮೂಲಕ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ ನಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆ ಗೆಲ್ಲಲು 191 ರನ್ ಗಳ ಬೃಹತ್ ಗುರಿ ನೀಡಿತು.

ಆರಂಭಿಕ ಆಘಾತ

ಎಂದಿನಂತೆ ಇಂದೂ ಕೂಡ ಚೆನ್ನೈ ತಂಡ ಆರಂಭಿಕ ಆಘಾತ ಎದುರಿಸಿತು. ಕೇವಲ 48 ರನ್ ಗಳ ಅಂತರದಲ್ಲಿ ಚೆನ್ನೈ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಸ್ಯಾಮ್ ಕರ್ರನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಡಿವಾಲ್ಡ್ ಬ್ರೇವಿಸ್ ಜೊತೆಗೂಡಿದ ಸ್ಯಾಮ್ ಕರ್ರನ್ 4ನೇ ವಿಕೆಟ್ ಗೆ 78 ರನ್ ಗಳ ಜೊತೆಯಾಟ ಆಡಿದರು.

ಈ ಹಂತದಲ್ಲಿ 32 ರನ್ ಗಳಿಸಿದ್ದ ಡಿವಾಲ್ಡ್ ಬ್ರೇವಿಸ್ ಅಜ್ಮತುಲ್ಲಾ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಮತ್ತೊಂದು ತುದಿಯಲ್ಲಿ 88 ರನ್ ಗಳಿಸಿ ಶತಕದತ್ತ ದಾಪುಗಾಲಿರಿಸಿದ್ದ ಸ್ಯಾಮ್ ಕರ್ರನ್ ಮಾರ್ಕೋ ಜೇನ್ಸನ್ ಬೌಲಿಂಗ್ ನಲ್ಲಿ ಔಟಾದರು. ಸ್ಯಾಮ್ ಕರನ್ ಕೇವಲ 47 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 88 ರನ್ ಸಿಡಿಸಿದರು.

6 ರನ್ ಅಂತರದಲ್ಲಿ 5 ವಿಕೆಟ್ ಪತನ

ಅತ್ತ ಸ್ಯಾಮ್ ಕರನ್ ಔಟಾಗುತ್ತಲೇ ಇತ್ತ ಚೆನ್ನೈ ತಂಡದ ಪತನ ಕೂಡ ಆರಂಭವಾಯಿತು. ಚೆನ್ನೈ ತಂಡ ಕೇವಲ 6 ರನ್ ಅಂತರದಲ್ಲಿ ಬರೊಬ್ಬರಿ 5 ವಿಕೆಟ್ ಕಳೆದುಕೊಂಡಿತು. ಸ್ಯಾಮ್ ಕರನ್ ಔಟ್ ಬೆನ್ನಲ್ಲೇ ಕ್ರೀಸ್ ಗೆ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ ಆಕ್ರಮಣಕಾರಿ ಆಟಕ್ಕೆ ಮುಂದಾದರು. ತಾವಾಡಿದ ಮೊದಲ ಎಸೆತವನ್ನೇ ಬೌಂಡರಿಗೆ ಭಾರಿಸಿ ಭರ್ಜರಿ ಬ್ಯಾಟಿಂಗ್ ಸೂಚನೆ ನೀಡಿದರು. ಬಳಿಕ ಚಹಲ್ ಎಸೆದ 19ನೇ ಓವರ್ ನಲ್ಲಿ ಸಿಕ್ಸರ್ ಭಾರಿಸಿ ಬೃಹತ್ ಮೊತ್ತ ಪೇರಿಸುವ ಸಂದೇಶ ನೀಡಿದರು.

ಚಹಲ್ ಎಸೆದ 2ನೇ ಎಸೆತವನ್ನು ಧೋನಿ ಲಾಂಗ್ ಆನ್ ನತ್ತ ಸಿಕ್ಸರ್ ಭಾರಿಸಿದರು. ಈ ವೇಳೆ ಅಲ್ಲಿಯೇ ಪೆವಿಲಿಯನ್ ನಲ್ಲಿ ಕುಳಿತಿದ್ದ ರವೀಂದ್ರ ಜಡೇಜಾ ಕ್ಯಾಚ್ ಪಡೆದಿದ್ದು ವಿಶೇಷವಾಗಿತ್ತು. ಬಳಿಕ ಚಹಲ್ ಎಸೆದ ಮತ್ತೊಂದು ಎಸೆತವನ್ನು ಧೋನಿ ಮತ್ತೆ ಸಿಕ್ಸರ್ ಗೆ ಭಾರಿಸಲು ಯತ್ನಿಸಿದರೂ ಚೆಂಡು ನೇರವಾಗಿ ನೇಹಲ್ ವಧೇರಾ ಕೈ ಸೇರಿತು. ಬಳಿಕ ಕ್ರೀಸ್ ಗೆ ಬಂದ ದೀಪಕ್ ಹೂಡ ಚಹಲ್ ಎಸೆತ 3ನೇ ಎಸೆತದಲ್ಲಿ 2 ರನ್ ಪಡೆದರು.

ಹ್ಯಾಟ್ರಿಕ್ ಸಾಧನೆ

ಇದಾದ ಬಳಿಕ ಮೈದಾನದಲ್ಲಿ ನಡೆದದ್ದು ಅಕ್ಷರಶಃ ಚಹಲ್ ಮ್ಯಾಜಿಕ್, ಓವರ್ ನ 4, 5 ಮತ್ತು ಅಂತಿಮ ಎಸೆತಗಳಲ್ಲಿ ಚಹಲ್ ಸತತ ವಿಕೆಟ್ ಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಮೂರನೇ ಎಸೆತದಲ್ಲಿ ದೀಪಕ್ ಹೂಡಾರನ್ನು ಔಟ್ ಮಾಡಿದ ಚಹಲ್, 5ನೇ ಎಸೆತದಲ್ಲಿ ಅನ್ಶುಲ್ ಕಂಬೋಜ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮ ಎಸೆತದಲ್ಲಿ ನೂರ್ ಅಹ್ಮದ್ ಮಾರ್ಕೇ ಜಾನ್ಸನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಆ ಮೂಲಕ ಚಹಲ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ಚಹಲ್ ಅದ್ಭುತ ಬೌಲಿಂಗ್, ಒಂದೇ ಓವರ್ ನಲ್ಲಿ 4 ವಿಕೆಟ್

19ನೇ ಓವರ್ ಎಸೆದ ಚಹಲ್ ಒಂದೇ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಓವರ್ ನ 4, 5 ಮತ್ತು ಅಂತಿಮ ಎಸೆತಗಳಲ್ಲಿ ಚಹಲ್ ಸತತ ವಿಕೆಟ್ ಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಮೂರನೇ ಎಸೆತದಲ್ಲಿ ದೀಪಕ್ ಹೂಡಾರನ್ನು ಔಟ್ ಮಾಡಿದ ಚಹಲ್, 5ನೇ ಎಸೆತದಲ್ಲಿ ಅನ್ಶುಲ್ ಕಂಬೋಜ್ ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮ ಎಸೆತದಲ್ಲಿ ನೂರ್ ಅಹ್ಮದ್ ಮಾರ್ಕೇ ಜಾನ್ಸನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಆ ಮೂಲಕ ಚಹಲ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.

ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ ನಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆ ಗೆಲ್ಲಲು 191 ರನ್ ಗಳ ಬೃಹತ್ ಗುರಿ ನೀಡಿದೆ. ಅಂತೆಯೇ ಇಂದು ಸ್ಯಾಮ್ ಕರನ್ ಸಿಡಿಸಿದ 88 ರನ್ ಹಾಲಿ ಐಪಿಎಲ್ ಟೂರ್ನಿಯಲ್ಲಿ ಸಿಎಸ್ ಕೆ ಪರ ದಾಖಲಾದ ವೈಯುಕ್ತಿಕ ಗರಿಷ್ಟ ಸ್ಕೋರ್ ಆಗಿದೆ. ಅಲ್ಲದೆ ಚೆಪಾಕ್ ನಲ್ಲಿ ಸಿಎಸ್ ಕೆ ತಂಡ ಹಾಲಿ ಐಪಿಎಲ್ ಟೂರ್ನಿಯಲ್ಲಿ 2ನೇ ಬಾರಿಗೆ ಆಲೌಟ್ ಆಗಿದೆ. ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 154 ರನ್ ಗಳಿಗೆ ಆಲೌಟ್ ಆಗಿತ್ತು.

CSK getting all-out at Chepauk in IPL

  • 112 vs MI, 2012

  • 109 vs MI, 2019

  • 154 vs SRH, 2025

  • 190 vs PBKS, 2025*

88 runs by Sam Curran is the highest individual score for CSK this season

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT