ಲಂಡನ್: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ವಿರೋಚಿತ ಗೆಲುವು ಸಾಧಿಸಿದ್ದು, ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲಿ ಗಮನಾರ್ಹ ಸ್ಥಾನಕ್ಕೇರಿದೆ.
ಹೌದು.. ಇಂದು ಲಂಡನ್ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮುಕ್ತಾಯವಾದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 6 ರನ್ ಗಳ ವಿರೋಚಿತ ಗೆಲುವು ಸಾಧಿಸಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿಇಂಗ್ಲೆಂಡ್ ಗೆ ಗೆಲ್ಲಲು 374 ರನ್ ಬೇಕಿತ್ತು. ಆದರೆ 367 ರನ್ ಗಳಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಭಾರತ ವಿರೋಚಿತ ಗೆಲುವು ಸಾಧಿಸಿತು.
ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 28 ಅಂಕ ಮತ್ತು ಶೇ.46.66 ವಿನ್ನಿಂಗ್ ಪರ್ಸೆಂಟೇಜ್ ನೊಂದಿಗೆ ಭಾರತ 3ನೇ ಸ್ಥಾನಕ್ಕೇರಿದೆ.
ಆದರೆ ಈ ಪಂದ್ಯದ ಸೋಲಿನೊಂದಿಗೆ 26 ಅಂಕಗಳೊಂದಿಗೆ 43.33 ವಿನ್ನಿಂಗ್ ಪರ್ಸೆಂಟೇಜ್ ನೊಂದಿಗೆ ಇಂಗ್ಲೆಂಡ್ ತಂಡ 4ನೇ ಸ್ಥಾನಕ್ಕೆ ಕುಸಿದಿದೆ.
ಉಳಿದಂತೆ 36 ಅಂಕಗಳನ್ನು ಮತ್ತು ಶೇ.100ರಷ್ಟು ವಿನ್ನಿಂಗ್ ಪರ್ಸೆಂಟೇಜ್ ಹೊಂದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು. 16 ಅಂಕ ಮತ್ತು 66.66 ವಿನ್ನಿಂಗ್ ಪರ್ಸೆಂಟೇಜ್ ನೊಂದಿಗೆ ಶ್ರೀಲಂಕಾ 2ನೇ ಸ್ಥಾನದಲ್ಲಿ ಮುಂದುವರೆದಿವೆ.