ನವದೆಹಲಿ: ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರ 23ನೇ ಹುಟ್ಟುಹಬ್ಬದ ದಿನದಂದು ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ, ಜನೈ ಜೊತೆಗೆ ಮೊಹಮ್ಮದ್ ಸಿರಾಜ್ ಡೇಟಿಂಗ್ ವದಂತಿಗಳು ದಟ್ಟವಾಗಿ ಹರಡಿದ್ದವು. ಈ ಬಗ್ಗೆ ಸಿರಾಜ್ ಸ್ಪಷ್ಟನೆ ಕೊಟ್ಟ ಬಳಿಕವೂ ಡೇಟಿಂಗ್ ಊಹಾಪೋಹಗಳಿಗೆ ಪೂರ್ಣವಿರಾಮ ಬಿದ್ದಿರಲಿಲ್ಲ.
ರಕ್ಷಾ ಬಂಧನದ ಸಂದರ್ಭದಲ್ಲಿ, ಜನೈ ಭೋಸ್ಲೆ ಮತ್ತು ಮೊಹಮ್ಮದ್ ಸಿರಾಜ್ ಇದೀಗ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. ಜನೈ ಅವರು ಮೊಹಮ್ಮದ್ ಸಿರಾಜ್‌ಗೆ ರಾಖಿ ಕಟ್ಟುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
'ರಾಖಿ ಹಬ್ಬದ ಶುಭಾಶಯಗಳು. ಏಕ್ ಹಜಾರೋ ಮೇ...ಇದಕ್ಕಿಂತ ಉತ್ತಮವಾದದ್ದನ್ನು ಕೇಳಲು ಸಾಧ್ಯವಾಗಲಿಲ್ಲ' ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಪೋಸ್ಟ್ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಸ್ಯದಿಂದ ಪ್ರತಿಕ್ರಿಯಿಸಲು ಮುಂದಾದಾಗ, ಜನೈ ಮತ್ತು ಸಿರಾಜ್ ಪೋಸ್ಟ್‌ನಲ್ಲಿನ ಕಾಮೆಂಟ್‌ಗಳನ್ನು ಆಫ್ ಮಾಡಿದ್ದಾರೆ.
ಆರಂಭದಲ್ಲಿ ವದಂತಿಗಳಿಗೆ ಕಾರಣವಾದ ವೈರಲ್ ಫೋಟೊದಲ್ಲಿ ಜನೈ ಕಡು ನೀಲಿ ಬಣ್ಣದ ಉಡುಪಿನಲ್ಲಿ ಮತ್ತು ಸಿರಾಜ್ ಕಪ್ಪು ಟಿ-ಶರ್ಟ್ ಮತ್ತು ಅದಕ್ಕೆ ಹೊಂದಿಕೆಯಾಗುವ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಇಬ್ಬರು ನಗುತ್ತಾ, ಆತ್ಮೀಯರಾಗಿರುವುದು ಕಂಡುಬಂದಿದ್ದು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿಗಳು ಹರಿದಾಡಿದ್ದವು. ಕೂಡಲೇ ಎಚ್ಚೆತ್ತುಕೊಂಡ ಸಿರಾಜ್ ಮತ್ತು ಜನೈ ಸ್ಪಷ್ಟನೆ ನೀಡಿದ್ದರು. ಸಿರಾಜ್ ಅವರು ಆಕೆ ನನ್ನ ತಂಗಿ ಎಂದು ಕರೆದಿದ್ದರೆ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಜನೈ ಅವರು 'ನನ್ನ ಪ್ರೀತಿಯ ಸಹೋದರ' ಎಂದು ಬರೆದುಕೊಂಡಿದ್ದರು.
ಜನೈ ಒಂದು ಪ್ರಮುಖ ಸಂಗೀತ ಕುಟುಂಬದಿಂದ ಬಂದವರು. ಅವರು ಪ್ರಸಿದ್ಧ ಗಾಯಕಿ ಆಶಾ ಭೋಸ್ಲೆ ಅವರ ಮೊಮ್ಮಗಳು ಮತ್ತು ಆನಂದ್ ಮತ್ತು ಅನುಜಾ ಭೋಂಸ್ಲೆ ಅವರ ಪುತ್ರಿ.