ಕ್ವಿಂಟನ್ ಡಿಕಾಕ್ ಶತಕ 
ಕ್ರಿಕೆಟ್

3rd ODI: ಭಾರತದ ವಿರುದ್ಧ ಭರ್ಜರಿ ಶತಕ; ಸಚಿನ್, ರೋಹಿತ್ ಶರ್ಮಾ ವಿಶ್ವ ದಾಖಲೆ ಮುರಿದ Quinton De Kock

ಭಾರತದ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಕ್ವಿಂಟನ್ ಡಿಕಾಕ್ ಮೂರನೇ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು.

ವಿಶಾಖಪಟ್ಟಣ: ಭಾರತದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಅಮೋಘ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಭಾರತದ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಕ್ವಿಂಟನ್ ಡಿಕಾಕ್ ಮೂರನೇ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿದ್ದ ಡಿಕಾಕ್, ರಾಯ್ಪುರದಲ್ಲಿ ಶೂನ್ಯ ಸುತ್ತಿದ್ದರು.

ಆದರೆ ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕ್ರೀಸ್ ಗೆ ಅಂಟಿಕೊಂಡು ಆಡಿದ ಡಿಕಾಕ್ ಕೇವಲ 89 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 106 ರನ್ ಸಿಡಿಸಿದರು.

ಈ ಮೂಲಕ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ತಮ್ಮ 23ನೇ ಏಕದಿನ ಶತಕವನ್ನು ಪೂರೈಸಿದರು. ಇದು ಭಾರತದ ವಿರುದ್ಧ ಡಿ ಕಾಕ್ ಅವರ ಏಳನೇ ಏಕದಿನ ಶತಕ ಕೂಡ ಆಗಿದೆ. ಈ ಮೂಲಕ ಡಿಕಾಕ್ ಹಲವು ವಿಶ್ವದಾಖಲೆಗಳನ್ನೂ ಕೂಡ ಮುರಿದಿದ್ದಾರೆ.

ಡಿ ಕಾಕ್ ಅವರ ಈ ಏಳನೇ ಶತಕವು ವಿದೇಶದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ಜಂಟಿ ಗರಿಷ್ಠ ಶತಕವಾಗಿದೆ. ಈ ಹಿಂದೆ ಈ ಸಾಧನೆಯನ್ನು ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಪಾಕಿಸ್ತಾನದ ಸಯೀದ್ ಅನ್ವರ್, ಭಾರತದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮಾಡಿದ್ದರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕೂಡ 7 ಶತಕ ಸಿಡಿಸಿದ್ದು, ಇದೀಗ ಡಿಕಾಕ್ ಕೂಡ ವಿದೇಶದಲ್ಲಿ 7ನೇ ಶತಕ ಸಿಡಿಸಿ ಈ ಸಾಧನೆ ಸರಿಗಟ್ಟಿದ್ದಾರೆ.

ವಿದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಗರಿಷ್ಠ ಶತಕ ಸಿಡಿಸಿದ ಆಟಗಾರರ ಪಟ್ಟಿ

Most ODI hundreds in an away country

  • 7 - Sachin Tendulkar in UAE

  • 7 - Saeed Anwar in UAE

  • 7 - AB de Villiers in India

  • 7 - Rohit Sharma in England

  • 7 - Quinton de Kock in India

*Including neutral venues

ಒಂದೇ ದೇಶದ ವಿರುದ್ಧ ಗರಿಷ್ಠ ಶತಕ, ಗಿಲ್ ಕ್ರಿಸ್ಟ್ ದಾಖಲೆ ಪತನ

ಇದೇ ವೇಳೆ ಡಿಕಾಕ್ ಒಂದೇ ದೇಶದ ವಿರುದ್ಧ ಗರಿಷ್ಠ ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್ ಎಂಬ ಕೀರ್ತಿಗೂ ಭಾಜನರಾಗಿದ್ದು, ಈ ಮೂಲಕ ಆಸ್ಟ್ರೇಲಿಯಾದ ಗಿಲ್ ಕ್ರಿಸ್ಟ್ ದಾಖಲೆ ಕೂಡ ಮುರಿದಿದ್ದಾರೆ. ಗಿಲ್ ಕ್ರಿಸ್ಟ್ ಶ್ರೀಲಂಕಾ ವಿರುದ್ಧ 6 ಶತಕ ಸಿಡಿಸಿದ್ದರು.

ಈ ಹಿಂದೆ ಡಿಕಾಕ್ ಕೂಡ ಭಾರತದ ವಿರುದ್ಧ ಆರು ಶತಕ ಸಿಡಿಸಿ ಈ ದಾಖಲೆ ಸರಿಗಟ್ಟಿದ್ದರು. ಇಂದು ಮತ್ತೊಂದು ಶತಕ ಸಿಡಿಸುವ ಮೂಲಕ ಭಾರತದ ವಿರುದ್ಧದ ತಮ್ಮ ಶತಕಗಳ ಸಂಖ್ಯೆಯನ್ನು 7ಕ್ಕೇರಿಸಿಕೊಂಡು ಈ ದಾಖಲೆ ಮುರಿದಿದ್ದಾರೆ.

The South African now has the most ODI centuries against an opponent by designated wicketkeepers:

  • 7 - Quinton de Kock vs India

  • 6 - Adam Gilchrist vs Sri Lanka

  • 6 - Kumar Sangakkara vs India

  • 5 - Kumar Sangakkara vs Bangladesh

  • 4 - Quinton de Kock vs Sri Lanka

  • 4 - Kumar Sangakkara vs England

ಸನತ್ ಜಯಸೂರ್ಯ ದಾಖಲೆ ಸಮಬಲ

ಇದೇ ವೇಳೆ ಡಿಕಾಕ್ ಅವರು ಶ್ರೀಲಂಕಾದ ದಿಗ್ಗಜ ಸನತ್ ಜಯಸೂರ್ಯ ಅವರ ಭಾರತ ವಿರುದ್ಧ ಅತಿ ಹೆಚ್ಚು ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಜಯಸೂರ್ಯ ಕೂಡ ಭಾರತದ ವಿರುದ್ಧ ಒಟ್ಟು 85 ಇನ್ನಿಂಗ್ಸ್ ಗಳಲ್ಲಿ 7 ಶತಕ ಸಿಡಿಸಿದ್ದಾರೆ. ಆದರೆ ಡಿ ಕಾಕ್ ಕೇವಲ 23 ಇನ್ನಿಂಗ್ಸ್ ಗಳಲ್ಲಿ 7 ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ.

  • 7 - ಕ್ವಿಂಟನ್ ಡಿ ಕಾಕ್ (23 ಇನ್ನಿಂಗ್ಸ್)

  • 7 - ಸನತ್ ಜಯಸೂರ್ಯ (85 ಇನ್ನಿಂಗ್ಸ್)

  • 6 - ಎಬಿ ಡಿ ವಿಲಿಯರ್ಸ್ (32 ಇನ್ನಿಂಗ್ಸ್)

  • 6 - ರಿಕಿ ಪಾಂಟಿಂಗ್ (59 ಇನ್ನಿಂಗ್ಸ್)

  • 6 - ಕುಮಾರ್ ಸಂಗಕ್ಕಾರ (71 ಇನ್ನಿಂಗ್ಸ್)

ಸಂಗಕ್ಕಾರ ದಾಖಲೆ ಸಮಬಲ

ಅಂತೆಯೇ ಡಿ ಕಾಕ್ ಈಗ ಶ್ರೀಲಂಕಾದ ಮತ್ತೊಬ್ಬ ದಿಗ್ಗಜ ಕುಮಾರ್ ಸಂಗಕ್ಕಾರ ಅವರ ದಾಖಲೆಯನ್ನೂ ಸಮಬಲ ಮಾಡಿದ್ದು, ಅತಿ ಹೆಚ್ಚು ಏಕದಿನ ಶತಕ ಗಳಿಸಿದ ನಿಯೋಜಿತ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪೈಕಿ ಶ್ರೀಲಂಕಾದ ಸಂಗಕ್ಕಾರ 23 ಶತಕ ಸಿಡಿಸಿದ್ದು, ಡಿಕಾಕ್ ಕೂಡ 23 ಶತಕ ಗಳಿಸಿದ್ದಾರೆ.

  • 23 - ಕುಮಾರ್ ಸಂಗಕ್ಕಾರ

  • 23 - ಕ್ವಿಂಟನ್ ಡಿ ಕಾಕ್

  • 19 - ಶೈ ಹೋಪ್

  • 16 - ಆಡಮ್ ಗಿಲ್ಕ್ರಿಸ್ಟ್

  • 11 - ಜೋಸ್ ಬಟ್ಲರ್

  • 10 - ಎಬಿ ಡಿ ವಿಲಿಯರ್ಸ್, ಎಂಎಸ್ ಧೋನಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ: 2-1 ಅಂತರದಲ್ಲಿ ಸರಣಿ ಕೈ ವಶ!

ಇಂಡಿಗೋ ವಿಮಾನಗಳಲ್ಲಿ ವ್ಯತ್ಯಯ: ಇತರೆ ಏರ್‌ಲೈನ್‌ಗಳಿಂದ ಟಿಕೆಟ್ ದರ ಏರಿಕೆಗೆ ಸರ್ಕಾರ ಬ್ರೇಕ್

Love jihad case: 'ಮತಾಂತರವಾಗದಿದ್ರೆ 32 ಪೀಸ್, ಖಾಸಗಿ ಫೋಟೋಗಳಿಂದ ಬ್ಲಾಕ್ ಮೇಲ್': ಹಿಂದೂ ಯುವತಿಗೆ ಉಸ್ಮಾನ್ ಬೆದರಿಕೆ! Video

'ಹೆಣ್ಣುಮಕ್ಕಳ ತಂಟೆಗೆ ಬಂದ್ರೆ.. ಯಮರಾಜ ಕಾಯುತ್ತಿರುತ್ತಾನೆ': ಸಿಎಂ ಯೋಗಿ ಆದಿತ್ಯಾನಾಥ್ ಎನ್ಕೌಂಟರ್ ಎಚ್ಚರಿಕೆ!

ಅಧಿಕಾರ ಹಂಚಿಕೆ ಮಾಡಿಕೊಳ್ಳಲು ಇದೇನು ವ್ಯವಹಾರನಾ? CM ಬದಲಾವಣೆ ಮುಗಿದ ಅಧ್ಯಾಯ

SCROLL FOR NEXT