ರವಿಶಾಸ್ತ್ರಿ ಮತ್ತು ಗೌತಮ್ ಗಂಭೀರ್ Saikat
ಕ್ರಿಕೆಟ್

'ಗೌತಮ್ ಗಂಭೀರ್‌ರನ್ನು ವಜಾಗೊಳಿಸಬಹುದು, ಆದರೆ...': ಟೀಂ ಇಂಡಿಯಾ ಕೋಚ್ ಅನ್ನು ಸಮರ್ಥಿಸಿಕೊಂಡ ರವಿಶಾಸ್ತ್ರಿ

ತಂಡ ಸೋತಾಗ ಯಾವಾಗಲೂ ಕೋಚ್ ಕಡೆಗೆ ಬೆರಳು ತೋರಿಸಲಾಗುತ್ತದೆ. ನಾನು ಕೋಚ್ ಆಗಿದ್ದರೆ ಸೋಲಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತಿದ್ದೆ.

ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಯಾವುದೇ ಒಬ್ಬ ವ್ಯಕ್ತಿಯನ್ನು ತಂಡದ ಸೋಲಿಗೆ ಗುರಿಯಾಗಿಸಬಾರದು ಎಂದು ಗೌತಮ್ ಗಂಭೀರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತ vs ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಮೆನ್ ಇನ್ ಬ್ಲೂ ತಂಡ 0-2 ಅಂತರದಲ್ಲಿ ವೈಟ್‌ವಾಶ್ ಆದ ನಂತರ ಗೌತಮ್ ಗಂಭೀರ್ ವಿರುದ್ಧ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಆಡುವ ಪ್ರತಿಯೊಂದು ಪಂದ್ಯವನ್ನು ಗೆಲ್ಲಲು ಗಂಭೀರ್ ಮತ್ತು ತಂಡದ ಆಡಳಿತ ಮಂಡಳಿಯು ಪ್ರತಿ ಆಟಗಾರರೊಂದಿಗೆ ಪರಿಣಾಮಕಾರಿಯಾಗಿ ಮಾಕುತಕೆ ನಡೆಸುವ ಅಗತ್ಯವನ್ನು ಶಾಸ್ತ್ರಿ ಒತ್ತಿ ಹೇಳಿದರು.

ಪ್ರಭಾತ್ ಖಬರ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಶಾಸ್ತ್ರಿ, ತಂಡ ಸೋತಾಗ ಯಾವಾಗಲೂ ಕೋಚ್ ಕಡೆಗೆ ಬೆರಳು ತೋರಿಸಲಾಗುತ್ತದೆ. ನಾನು ಕೋಚ್ ಆಗಿದ್ದರೆ ಸೋಲಿನ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತಿದ್ದೆ. ಪಂದ್ಯ ಗೆದ್ದಾಗ ಆ ಹೆಮ್ಮೆ ಮತ್ತು ಸೋತಾಗ ಟೀಕೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ನನಗೆ ಇರಬೇಕಿತ್ತು. ಪ್ರದರ್ಶನ ಕಳಪೆಯಾಗಿದ್ದರೆ ಅವರನ್ನು ವಜಾಗೊಳಿಸಬಹುದು. ಆದರೆ, ತಾಳ್ಮೆ ಅಗತ್ಯ ಎಂದು ಗೌತಮ್ ಗಂಭೀರ್ ಅವರಿಗೆ ಎಚ್ಚರಿಕೆ ನೀಡಿದರು.

'ನಿಮ್ಮ ಪ್ರದರ್ಶನ ಕಳಪೆಯಾಗಿದ್ದರೆ, ನಿಮ್ಮನ್ನು ಕೆಲಸದಿಂದ ತೆಗೆದುಹಾಕಬಹುದು. ಆದ್ದರಿಂದ, ನೀವು ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು. ಸಂವಹನ ಮತ್ತು ಮಾನವ-ನಿರ್ವಹಣಾ ಕೌಶಲ್ಯಗಳು ಇಲ್ಲಿ ನಿರ್ಣಾಯಕವಾಗಿವೆ. ಆಗ ಮಾತ್ರ ನೀವು ಆಟಗಾರರನ್ನು ಗೆಲ್ಲಲು ಪ್ರೇರೇಪಿಸಬಹುದು. ಮತ್ತು ಅದನ್ನೇ ನಾವು ಮಾಡಿದ್ದೇವೆ. ನೀವು ಏನೇ ಮಾಡಿದರೂ ಅದನ್ನು ಆನಂದಿಸುವುದು ಅತ್ಯಂತ ಮುಖ್ಯವಾದ ವಿಷಯ. ಅದನ್ನು ಒತ್ತಡವೆಂದು ಪರಿಗಣಿಸಬೇಡಿ' ಎಂದು ಶಾಸ್ತ್ರಿ ಹೇಳಿದರು.

ಗಂಭೀರ್ ಮುಖ್ಯ ಕೋಚ್ ಆಗಿ ವೈಟ್-ಬಾಲ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ, ಟೆಸ್ಟ್‌ನಲ್ಲಿ ಅವರು ಯಶಸ್ವಿಯಾಗಿಲ್ಲ. ಅವರ ನೇತೃತ್ವದಲ್ಲಿ ಭಾರತ ಕೇವಲ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿದೆ. ಮೂರರಲ್ಲಿ ಸೋತಿದೆ ಮತ್ತು ಒಂದನ್ನು ಡ್ರಾ ಮಾಡಿಕೊಂಡಿದೆ. ಆದಾಗ್ಯೂ, ತಂಡದ ಸೋಲಿಗೆ ಒಬ್ಬ ವ್ಯಕ್ತಿಯನ್ನು ದೂಷಿಸುವುದು ತಪ್ಪು. ಆಟಗಾರರು ಸಹ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

'ಆದ್ದರಿಂದ ಫಲಿತಾಂಶಗಳು ಬಂದಾಗ, ಸಾರ್ವಜನಿಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ ಆಟಗಾರರು ಸಹ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನೀವು ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳಬಾರದು. ಅದು ನನಗೆ ಸಂಭವಿಸಿದೆ, ಅದಕ್ಕಾಗಿಯೇ ನಾನು ಅನುಭವದಿಂದ ಮಾತನಾಡುತ್ತಿದ್ದೇನೆ. ಆದ್ದರಿಂದ ಈ ರೀತಿಯ ಏನಾದರೂ ಸಂಭವಿಸಿದಾಗ ಆಟಗಾರರು ಸಹ ಜವಾಬ್ದಾರಿ ಹೊತ್ತುಕೊಳ್ಳುವುದು ಮುಖ್ಯ. ಹೆಮ್ಮೆ ಇರಬೇಕು. ಆದರೆ, ನಾವು ಸೋತಾಗ ಅದರ ಹೊಣೆಯನ್ನು ಹೊರಬೇಕು. ಅದು ಸಂಭವಿಸುವವರೆಗೆ, ವಿಷಯಗಳು ಮುಂದೆ ಸಾಗುವುದಿಲ್ಲ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ 'ಸಿಎಂ ಕುರ್ಚಿ ಕದನ' ಸದ್ದು: ಆರ್. ಅಶೋಕ್ ಮಾತಿಗೆ ಕೆರಳಿದ ಬೈರತಿ; ತೀವ್ರ ಮಾತಿನ ಚಕಮಕಿ!

ತಾಂತ್ರಿಕ ಕಾರಣಗಳಿಂದ SIR ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಾಧ್ಯವಿಲ್ಲ: ಅಮಿತ್ ಶಾ

25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯರು..: ಅನಿರುದ್ಧಾಚಾರ್ಯ ವಿರುದ್ಧ ಕೇಸ್ ದಾಖಲು! 'ಪೂಕಿ ಬಾಬಾ' ಹೇಳಿದ್ದೇನು ಗೊತ್ತಾ?

EVMs ಅಲ್ಲವೇ ಅಲ್ಲ, ಪ್ರಧಾನಿ ಮೋದಿ ಇದನ್ನೇ 'ಹ್ಯಾಕ್' ಮಾಡಿದ್ದಾರೆ! ಲೋಕಸಭೆಯಲ್ಲಿ ಕಂಗನಾ

Amazon: ಭಾರತದಲ್ಲಿ 3 ಲಕ್ಷ ಕೋಟಿ ರೂ ಹೆಚ್ಚುವರಿ ಹೂಡಿಕೆ; 10 ಲಕ್ಷ ಉದ್ಯೋಗ ಸೃಷ್ಟಿ!

SCROLL FOR NEXT