ವಿಜಯ್ ಹಜಾರೆ ಟ್ರೋಫಿ (ವಿಎಚ್‌ಟಿ)ಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮರಳುವತ್ತ ಇದೀಗ ಎಲ್ಲರ ಗಮನ ನೆಟ್ಟಿರುವ ಸಮಯದಲ್ಲಿ 14 ವರ್ಷದ ಬಾಸ್ ಬೇಬಿ ವೈಭವ್ ಸೂರ್ಯವಂಶಿ ಇದೀಗ ಎಲ್ಲರ ಗಮನ ಸೆಳೆದಿದ್ದಾನೆ. ವೈಭವ್ ಸೂರ್ಯವಂಶಿ ಅವಾಸ್ತವಿಕತೆಯತ್ತ ತನ್ನ ಹೆಜ್ಜೆಯನ್ನು ಮುಂದುವರೆಸಿದ್ದಾರೆ. ಬಿಹಾರ ಪರ ತಮ್ಮ ಮೊದಲ ಲಿಸ್ಟ್-ಎ ಶತಕವನ್ನು ಬಾರಿಸಿದ್ದಾರೆ. ಕೇವಲ 36 ಎಸೆತಗಳಲ್ಲಿಯೇ ಶತಕ ಬಾರಿಸುವ ಮೂಲಕ ಎಲ್ಲ ದಾಖಲೆಗಳನ್ನು ಮುರಿದಿದ್ದಾರೆ.
ಕೇವಲ 14 ವರ್ಷ ಮತ್ತು 272 ದಿನಗಳ ವಯಸ್ಸಿನಲ್ಲಿ, ಸೂರ್ಯವಂಶಿ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನಷ್ಟೇ ಅಲ್ಲದೆ, ಅತಿ ವೇಗದ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರನಾಗಿದ್ದಾರೆ. 2024ರಲ್ಲಿ ಪಂಜಾಬ್ ಪರ ಅನ್ಮೋಲ್‌ಪ್ರೀತ್ ಸಿಂಗ್ ಅವರು 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಪ್ರಾಸಂಗಿಕವಾಗಿ, ಈ ಎರಡೂ ಶತಕಗಳು ಅರುಣಾಚಲ ಪ್ರದೇಶದ ವಿರುದ್ಧವೇ ಬಂದಿವೆ. ಸೂರ್ಯವಂಶಿ ವಿಜಯ್ ಹಜಾರೆ ಟ್ರೋಫಿಯ ಪ್ಲೇಟ್ ಗುಂಪಿನಲ್ಲಿ ಶತಕ ಬಾರಿಸಿದ್ದಾರೆ.
ಈಮಧ್ಯೆ, ವೈಭವ್ ಸೂರ್ಯವಂಶಿ ಕೇವಲ 59 ಎಸೆತಗಳಲ್ಲಿ 150 ರನ್ ಗಳಿಸಿದರು. ಈ ಮೂಲಕ, ಅವರು ಏಕದಿನ ಪಂದ್ಯದಲ್ಲಿ 150 ರನ್ ಗಳಿಸಿದ ಎಬಿ ಡಿವಿಲಿಯರ್ಸ್ ಅವರ ದಾಖಲೆಯನ್ನು ಮುರಿದರು. ಈ ಹಿಂದೆ, 2015ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 66 ಎಸೆತಗಳಲ್ಲಿ 162 ರನ್ ಗಳಿಸಿದಾಗ ಎಬಿ ಡಿವಿಲಿಯರ್ಸ್ ಈ ದಾಖಲೆಯನ್ನು ಹೊಂದಿದ್ದರು. ದುರದೃಷ್ಟವಶಾತ್, ಸೂರ್ಯವಂಶಿ ಕೇವಲ 84 ಎಸೆತಗಳಲ್ಲಿ 190 ರನ್ ಗಳಿಸಿ ಔಟಾಗಿದ್ದರಿಂದ ಸ್ವಲ್ಪದ್ದರಲ್ಲೇ ದ್ವಿಶತಕದಿಂದ ವಂಚಿತರಾದರು. 150 ರನ್ ಗಳಿಸಿದ ನಂತರ ಅವರು ಸ್ವಲ್ಪ ನಿಧಾನಗೊಳಿಸಿದರು. ಆದರೆ, ಸದ್ಯ ನ್ಯೂಜಿಲೆಂಡ್‌ನ ಚಾಡ್ ಬೋವ್ಸ್ (113 ಎಸೆತಗಳಲ್ಲಿ) ಹೊಂದಿರುವ ವೇಗದ ಲಿಸ್ಟ್-ಎ ದ್ವಿಶತಕದ ದಾಖಲೆಯನ್ನು ಸಹ ಸುಲಭವಾಗಿ ಮುರಿಯಬಹುದಿತ್ತು.
ವೇಗದ ಲಿಸ್ಟ್ ಎ ಶತಕ
* ಜೇಕ್ ಫ್ರೇಸರ್-ಮೆಕ್‌ಗುರ್ಕ್ 29 ಎಸೆತಗಳಲ್ಲಿ 125 ರನ್
* ಎಬಿ ಡಿವಿಲಿಯರ್ಸ್ 31 ಎಸೆತಗಳಲ್ಲಿ 149 ರನ್
* ಅನ್ಮೋಲ್‌ಪ್ರೀತ್ ಸಿಂಗ್ 35 ಎಸೆತಗಳಲ್ಲಿ 115* ರನ್
* ಕೊರಿ ಆ್ಯಂಡರ್ಸನ್ 34 ಎಸೆತಗಳಲ್ಲಿ 131*
* ಗ್ರಹಾಂ ರೋಸ್ 36 ಎಸೆತಗಳಲ್ಲಿ 110
* ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ 190
ಸೂಪರ್‌ಸ್ಟಾರ್ ವೈಭವ್ ಸೂರ್ಯವಂಶಿ
ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ತಂಡದ ಸೂಪರ್‌ಸ್ಟಾರ್ ಆಗಿರುವ ವೈಭವ್, ಆಯುಷ್ ಮ್ಹಾತ್ರೆ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಅವರು ಇದೇ ಆವೃತ್ತಿಯ ಆರಂಭದಲ್ಲಿ 18 ವರ್ಷ ಮತ್ತು 135 ದಿನಗಳಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT) ಮುಂಬೈ ಪರ ಶತಕ ಬಾರಿಸಿದಾಗ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮ್ಹಾತ್ರೆ ಮುರಿದಿದ್ದರು.
ಆದಾಗ್ಯೂ, ಸೂರ್ಯವಂಶಿ ಈಗಾಗಲೇ VHT, SMAT, IPL, ಯೂತ್ ODI, ಯೂತ್ ಟೆಸ್ಟ್ ಮತ್ತು ಭಾರತ A ಪರ ಶತಕಗಳನ್ನು ಗಳಿಸಿದ್ದಾರೆ. ಇದಲ್ಲದೆ, 2025ರ ಅಂಡರ್-19 ಏಷ್ಯಾ ಕಪ್‌ನಲ್ಲಿಯೂ 95 ಎಸೆತಗಳಲ್ಲಿ 171 ರನ್ ಗಳಿಸಿದ್ದಾರೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ, ಸೂರ್ಯವಂಶಿ ಇದನ್ನೆಲ್ಲ ಸಾಧಿಸಿದ್ದಾರೆ.