ಪಾಟ್ನಾ: ಭಾರತದ ದೇಶೀಯ ಕ್ರಿಕೆಟ್ ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಗಳ ಸುರಿಮಳೆಯೇ ಹರಿಯುತ್ತಿದ್ದು, ಲಿಸ್ಟ್ ಕ್ರಿಕೆಟ್ ನಲ್ಲಿ ಬಿಹಾರ ಐತಿಹಾಸಿಕ ದಾಖಲೆಯನ್ನೇ ನಿರ್ಮಿಸಿದೆ.
ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಿಹಾರ ಮತ್ತು ಅರುಣಾಚಲ ಪ್ರದೇಶ ನಡುವಿನ ಪಂದ್ಯದಲ್ಲಿ ಲಿಸ್ಟ್ ಎ ಕ್ರಿಕೆಟ್ ನ ಗರಿಷ್ಠ ಮೊತ್ತ ದಾಖಲಾಗಿದ್ದು ಇದು ಜಾಗತಿಕ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ರಾಂಚಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (190), ನಾಯಕ ಸಕೀಬುಲ್ ಗನಿ (128*) ಮತ್ತು ಆಯುಷ್ ಲೋಹರೂಕ (116) ಸಿಡಿಲಬ್ಬರದ ಶತಕಗಳ ನೆರವಿನಿಂದ ಬಿಹಾರ ತಂಡವು ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 574 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಇದನ್ನು ಬೆನ್ನು ಹತ್ತಿದ ಅರುಣಾಲ ಪ್ರದೇಶ 42.1 ಓವರ್ ನಲ್ಲಿ 177 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 397 ರನ್ ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಕೇವಲ 84 ಎಸೆತಗಳಲ್ಲಿ 190 ರನ್ ಸಿಡಿಸಿದ ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬಿಹಾರ ಐತಿಹಾಸಿಕ ದಾಖಲೆ
ಇನ್ನು ಈ ಪಂದ್ಯದ ಮೂಲಕ ಬಿಹಾರ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಇದು 'ಲಿಸ್ಟ್ ಎ' ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. 2022ರಲ್ಲಿ ಅರುಣಾಚಲ ಪ್ರದೇಶದ ವಿರುದ್ಧವೇ ತಮಿಳುನಾಡು 506 ರನ್ ಪೇರಿಸಿರುವುದು ಈವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಬಿಹಾರ 574 ರನ್ ಕಲೆಹಾಕಿ ಈ ದಾಖಲೆಯನ್ನು ಹಿಂದಿಕ್ಕಿದೆ.
ಸೂರ್ಯವಂಶಿ ದಾಖಲೆ
ಭಾರತದ 14 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ 84 ಎಸೆತಗಳಲ್ಲಿ 190 ರನ್ ಗಳಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. 190 ರನ್ ಗಳಿಸುವ ಮೂಲಕ, ಸೂರ್ಯವಂಶಿ ಹಲವಾರು ವಿಶ್ವ ದಾಖಲೆಗಳನ್ನು ಮುರಿದರು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರರಾದರು ಮತ್ತು ಎಬಿ ಡಿವಿಲಿಯರ್ಸ್ ಅವರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 150 ರನ್ ಗಳಿಸಿದ ದಾಖಲೆಯನ್ನು ಮುರಿದರು.
ಲಿಸ್ಟ್ ಎ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಗಳಿಸಿದ ಟಾಪ್ 10 ತಂಡಗಳು
1. 574/6 - Bihar vs Arunachal Pradesh (Ranchi, 2025)
2. 506/2 - Tamil Nadu vs Arunachal Pradesh (Bengaluru, 2022)
3. 498/4 - England vs Netherlands (Amstelveen, 2022) - World Record for ODIs
4. 481/6 - England vs Australia (Nottingham, 2018)
5. 458/4 - India A vs Leicestershire (Leicester, 2018)
6. 453/3 - Titans vs North West (Potchefstroom, 2022)
7. 445/8 - Nottinghamshire vs Northamptonshire (Nottingham, 2016)
8. 444/3 - England vs Pakistan (Nottingham, 2016)
9. 443/9 - Sri Lanka vs Netherlands (Amstelveen, 2006)
10. 439/2 - South Africa vs West Indies (Johannesburg, 2015)