ವಿರಾಟ್ ಕೊಹ್ಲಿ- ಸಚಿನ್ ತೆಂಡೂಲ್ಕರ್ online desk
ಕ್ರಿಕೆಟ್

Vijay Hazare Trophy: ಸಚಿನ್ ತೆಂಡೂಲ್ಕರ್ ನಂತರದ ದಾಖಲೆ ಬರೆಯಲು ಒಂದೇ ಒಂದು ಹೆಜ್ಜೆ ದೂರದಲ್ಲಿ ವಿರಾಟ್ ಕೊಹ್ಲಿ!

ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಸರಣಿಗೂ ಮುನ್ನ ವಿಜಯ್ ಹಜಾರೆ ಟ್ರೋಫಿ ಅಮೂಲ್ಯವಾದ ಅಭ್ಯಾಸ ಪಂದ್ಯವಾಗಲಿದೆ.

ಬೆಂಗಳೂರು: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ಮಹತ್ವದ ಸಾಧನೆಯ ಹೊಸ್ತಿಲಲ್ಲಿದ್ದಾರೆ. ದಂತಕಥೆ ಸಚಿನ್ ತೆಂಡೂಲ್ಕರ್ ನಂತರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ತಲುಪಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಆಗಲು ಅವರಿಗೆ ಕೇವಲ ಒಂದು ರನ್ ಅಗತ್ಯವಿದೆ.

ಅವರು ಇಲ್ಲಿಯವರೆಗೆ 342 ಲಿಸ್ಟ್ ಎ ಪಂದ್ಯಗಳಲ್ಲಿ 57.34 ಸರಾಸರಿಯಲ್ಲಿ 15,999 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 57 ಶತಕಗಳು ಮತ್ತು 84 ಅರ್ಧಶತಕಗಳು ಸೇರಿವೆ.

ಬುಧವಾರ ಆಂಧ್ರ ಪ್ರದೇಶದ ವಿರುದ್ಧ ದೆಹಲಿ ಪರವಾಗಿ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಬಹುದು. ಅಲ್ಲಿ ಅವರು 2025/26 ಆವೃತ್ತಿಯ ಪಂದ್ಯಾವಳಿಗೆ ಬಹುನಿರೀಕ್ಷಿತ ಪುನರಾಗಮನ ಮಾಡಲಿದ್ದಾರೆ. ಸುಮಾರು 15 ವರ್ಷಗಳ ನಂತರ ಭಾರತದ ಪ್ರಮುಖ ದೇಶೀಯ 50 ಓವರ್‌ಗಳ ಸ್ಪರ್ಧೆಗೆ ಅವರು ಮರಳಿದ್ದಾರೆ.

ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಸರಣಿಗೂ ಮುನ್ನ ವಿಜಯ್ ಹಜಾರೆ ಟ್ರೋಫಿ ಅಮೂಲ್ಯವಾದ ಅಭ್ಯಾಸ ಪಂದ್ಯವಾಗಲಿದೆ.

ವಿರಾಟ್ ಕೊಹ್ಲಿ ಇದೀಗ ಭರ್ಜರಿ ಫಾರ್ಮ್‌ನಲ್ಲಿದ್ದು, ಕಳೆದ ನಾಲ್ಕು ಏಕದಿನ ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸತತ ಶತಕ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಅಜೇಯ 65 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದಾರೆ.

ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದ್ಭುತ ವರ್ಷವನ್ನು ಕಳೆದಿದ್ದಾರೆ. 13 ಇನಿಂಗ್ಸ್‌ಗಳಲ್ಲಿ 65.10 ಸರಾಸರಿಯಲ್ಲಿ 651 ರನ್ ಗಳಿಸಿದ್ದಾರೆ. ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳು ಇದರಲ್ಲಿ ಸೇರಿವೆ. 135 ಅವರ ಅತ್ಯುತ್ತಮ ಸ್ಕೋರ್ ಆಗಿದೆ ಮತ್ತು 96ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ ಕೂಡ ಇದೆ.

ದೆಹಲಿ vs ಆಂಧ್ರ ಪ್ರದೇಶ ಪಂದ್ಯ ಇಂದು ನಡೆಯುತ್ತಿದ್ದು, ದೆಹಲಿ ನಾಯಕ ರಿಷಭ್ ಪಂತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಆಂಧ್ರ ಪ್ಲೇಯಿಂಗ್ ಇಲೆವೆನ್

ಶ್ರೀಕರ್ ಭರತ್ (ವಿಕೆಟ್ ಕೀಪರ್), ಅಶ್ವಿನ್ ಹೆಬ್ಬಾರ್, ಶೇಕ್ ರಶೀದ್, ರಿಕಿ ಭುಯಿ, ನಿತೀಶ್ ಕುಮಾರ್ ರೆಡ್ಡಿ (ನಾಯಕ), ಸೌರಭ್ ಕುಮಾರ್, ಮಾರಮರೆಡ್ಡಿ ಹೇಮಂತ್ ರೆಡ್ಡಿ, ಕೆಎಸ್ ನರಸಿಂಹರಾಜು, ತ್ರಿಪುರಾಣ ವಿಜಯ್, ಸತ್ಯನಾರಾಯಣ ರಾಜು, ಎಸ್‌ಡಿಎನ್‌ವಿ ಪ್ರಸಾದ್.

ದೆಹಲಿ ಪ್ಲೇಯಿಂಗ್ XI

ಅರ್ಪಿತ್ ರಾಣಾ, ಪ್ರಿಯಾಂಶ್ ಆರ್ಯ, ವಿರಾಟ್ ಕೊಹ್ಲಿ, ನಿತೀಶ್ ರಾಣಾ, ರಿಷಬ್ ಪಂತ್ (ವಿಕೆಟ್ ಕೀಪರ್ /ನಾಯಕ), ಆಯುಷ್ ಬದೋನಿ, ಸಿಮರ್ಜೀತ್ ಸಿಂಗ್, ಹರ್ಷ್ ತ್ಯಾಗಿ, ಇಶಾಂತ್ ಶರ್ಮಾ, ಪ್ರಿನ್ಸ್ ಯಾದವ್, ನವದೀಪ್ ಸೈನಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನವದೆಹಲಿ: ಸಿಎಂ ಬದಲಾವಣೆ ವದಂತಿ; 'ಅಡ್ಡ ಗೋಡೆ ಮೇಲೆ ದೀಪ' ಇಟ್ಟಂತೆ ಮಾತನಾಡಿದ DCM ಡಿ.ಕೆ ಶಿವಕುಮಾರ್! Video

ಸಚಿವ ಜಮೀರ್ ಖಾನ್ ಆಪ್ತನಿಗೆ ಲೋಕಾಯುಕ್ತ ಶಾಕ್: 50ಕ್ಕೂ ಹೆಚ್ಚು ಅಧಿಕಾರಿಗಳಿಂದ ಬೆಂಗಳೂರು, ಕೊಡಗು ಸೇರಿ 10 ಕಡೆ ದಾಳಿ!

ಸಾ** ಹೇಳಿಕೆ: 'ಉದ್ದೇಶ ಒಳ್ಳೆಯದೇ ಆಗಿತ್ತು.. ವಿವಾದ ಬೇಕಿರಲಿಲ್ಲ..': ಕೊನೆಗೂ ಕ್ಷಮೆ ಕೋರಿದ ನಟ ಶಿವಾಜಿ!

ಚಿಕ್ಕಬಳ್ಳಾಪುರ ಬೆಳ್ಳಿ ದರೋಡೆ: ಕೊನೆಗೂ ಸಿಕ್ಕಿಬಿದ್ದ ಖದೀಮರು, ಚಿನ್ನಕ್ಕೂ ಸ್ಕೆಚ್ ಹಾಕಿದ್ದರು!

ದೆಹಲಿಯಲ್ಲಿ 2 ದಿನ ಇದ್ದಿದ್ದಕ್ಕೆ ಸೋಂಕು ತಗುಲಿದೆ: ಮಾಲಿನ್ಯದಿಂದ ತತ್ತರಿಸುತ್ತಿರುವುದು ಏಕೆ? ನಿತಿನ್ ಗಡ್ಕರಿ

SCROLL FOR NEXT