ಭಾರತವು ಸತತ ಎರಡನೇ ವರ್ಷವೂ ತವರಿನಲ್ಲಿ ಸರಣಿ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ. 12 ವರ್ಷಗಳ ನಂತರ, ಭಾರತವು 2024ರಲ್ಲಿ ನ್ಯೂಜಿಲೆಂಡ್ ಮತ್ತು 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ವೈಟ್‌ವಾಶ್ ಅನುಭವಿಸಿತು.
ಈ ವರ್ಷದ ಆರಂಭದಲ್ಲಿ ರೋಹಿತ್ ಶರ್ಮಾ ನಿವೃತ್ತಿಯ ಕೆಲ ದಿನಗಳ ನಂತರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ದಾಖಲೆಯನ್ನು ಬರೆದ ವ್ಯಕ್ತಿ 2025ರ ಮೇನಲ್ಲಿ ನಿವೃತ್ತಿ ಘೋಷಿಸಿದರು. ಕೊಹ್ಲಿ ನಾಯಕನಾಗಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವು ಗಳಿಸಿದರು ಮತ್ತು ತವರಿನಲ್ಲಿ ಕೇವಲ 2 ಪಂದ್ಯಗಳನ್ನು ಸೋತರು.
ಕ್ರಿಕೆಟ್‌ನ ಅತಿದೊಡ್ಡ ತಾರೆ ವಿರಾಟ್ ಕೊಹ್ಲಿ ಫಿಟ್‌ನೆಸ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು. ಟೆಸ್ಟ್ ಕ್ರಿಕೆಟ್ ಅನ್ನು ಉತ್ತೇಜಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಬರೋಬ್ಬರಿ 18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ, ಉಳಿದೆಲ್ಲ ಮಾದರಿಗಳಿಗಿಂತ ಟೆಸ್ಟ್ ಕ್ರಿಕೆಟ್ ಉನ್ನತ ಮಟ್ಟದಲ್ಲಿದೆ ಎಂದು ಹೇಳಿದರು.
2026ರ ಹೊಸ್ತಿಲಲ್ಲಿ ನವಜೋತ್ ಸಿಂಗ್ ಸಿಂಧು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ ಅಲ್ಲದೆ, ಭಾರತದ ಮಾಜಿ ಕ್ರಿಕೆಟಿಗ ತಾವು ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡಕ್ಕೆ ಮರಳುವುದನ್ನು ನೋಡಲು ಬಯಸುವುದಾಗಿ ಹೇಳಿದ್ದಾರೆ.
'ದೇವರು ನನಗೆ ಒಂದು ವರವನ್ನು ನೀಡಿದ್ದರೆ, ವಿರಾಟ್ ಕೊಹ್ಲಿಯನ್ನು ನಿವೃತ್ತಿಯಿಂದ ಹೊರಗೆ ಕರೆತಂದು ಟೆಸ್ಟ್ ಕ್ರಿಕೆಟ್ ಆಡುವಂತೆ ಮಾಡುತ್ತೇನೆ ಎಂದು ನಾನು ಹೇಳುತ್ತೇನೆ.... 1.5 ಬಿಲಿಯನ್ ಜನರಿರುವ ದೇಶಕ್ಕೆ ಇದಕ್ಕಿಂತ ಸಂತೋಷ ಮತ್ತು ಸಂಭ್ರಮ ಬೇರೊಂದಿಲ್ಲ! ಅವರ ಫಿಟ್ನೆಸ್ ಇಪ್ಪತ್ತು ವರ್ಷದ ಯುವಕನ ಫಿಟ್ನೆಸ್‌ಗೆ ಸಮ - ಅವರು 24 ಕ್ಯಾರೆಟ್ ಚಿನ್ನ' ಎಂದು ಸಿಧು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಕೊಹ್ಲಿ ಸ್ವತಃ ಈ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ. ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52ನೇ ಏಕದಿನ ಶತಕ ಗಳಿಸಿದ ನಂತರ, ಭಾರತದ ಮಾಜಿ ನಾಯಕ ಟೆಸ್ಟ್ ಅಥವಾ ಟಿ20ಐ ಕ್ರಿಕೆಟ್‌ನಲ್ಲಿ ತಾನು ಮತ್ತೆ ಆಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. 'ಅದು ಯಾವಾಗಲೂ ಹೀಗೆಯೇ ಇರುತ್ತದೆ. ನಾನು ಈಗ ಆಟದ ಒಂದು ಸ್ವರೂಪವನ್ನು ಮಾತ್ರ ಆಡುತ್ತಿದ್ದೇನೆ' ಎಂದು ಕೊಹ್ಲಿ ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದರು.
ಭಾರತದ ಮುಂದಿನ ಟೆಸ್ಟ್ ಪಂದ್ಯವು 2026ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ತವರಿನಿಂದ ಹೊರಗೆ ನಡೆಯಲಿದೆ.